ಬೆಂಗಳೂರು: ಕಿರುತೆರೆಯಲ್ಲಿಂದ ಖ್ಯಾತಿ ಗಳಿಸಿ, ನಂತರ ಹಿರಿತೆರೆಯಲ್ಲೂ ಮಿಂಚಿದ ನಟ ಚಂದನ್ ಕುಮಾರ್, ಇದೀಗ ನಟನೆಯಿಂದ ದೂರವಿದ್ದು, ವೈಯಕ್ತಿಕ ಜೀವನದಲ್ಲಿ ನೆಮ್ಮದಿ ಹುಡುಕುತ್ತಿದ್ದಾರೆ. ಪತ್ನಿ ಕವಿತಾ ಗೌಡ ಜೊತೆ ‘ಹ್ಯಾಪಿ ಲೈಫ್’ ನಡೆಸುತ್ತಿರುವ ಅವರು, ತಾವು ಜೀವನದಲ್ಲಿ ತೆಗೆದುಕೊಂಡ ಒಂದು ದೊಡ್ಡ ತಪ್ಪು ನಿರ್ಧಾರವನ್ನು ಸ್ಮರಿಸಿ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
“ಸಿನಿಮಾಗಿಂತ ಧಾರಾವಾಹಿ ನಿಜವಾಗಿಯೂ ಉತ್ತಮ!”
“ಪ್ರೇಮ ಬರಹ ನನಗೆ ಚೆನ್ನಾಗಿಯೇ ಹೆಸರನ್ನು ತಂದುಕೊಟ್ಟಿತು. ಆ ಚಿತ್ರ ಕೂಡ ಯಶಸ್ವಿಯಾಯಿತು. ಆದರೆ, ನಂತರ ಬಂದ ಕಥೆಗಳಲ್ಲಿ ಯಾವುದೂ ವಿಭಿನ್ನವಾಗಿರಲಿಲ್ಲ. ಪ್ರತಿ ಕಥೆಯೂ ಶ್ರೀಮಂತ ಹುಡುಗ ಮತ್ತು ಬಡ ಹುಡುಗಿ ಕಥೆಯಷ್ಟೆ. ಹೀಗಾಗಿ ಸಿನಿಮಾಗೆ ಇನ್ಸ್ಪಿರೇಷನ್ ಆಗಲಿಲ್ಲ,” ಎಂದು ಚಂದನ್ ವಿವರಿಸಿದ್ದಾರೆ.
ತಪ್ಪು ನಿರ್ಧಾರ: 20 ಲಕ್ಷ ಸಾಲದ ಕಾರು!
“ಪ್ರೇಮಬರಹ ಯಶಸ್ಸಾದ ನಂತರ, ನಾನು ಒಂದು ಹೊಸ ಕಾರು ಖರೀದಿಸಿದೆ. ಅದು ನನ್ನ ಜೀವನದ ಅತಿದೊಡ್ಡ ತಪ್ಪು. ಆ ಕಾರಿನ ಮೇಲಿದ್ದ 20 ಲಕ್ಷ ಸಾಲದ EMI ಕಟ್ಟಲು ನನಗೆ ಕೆಲಸವಿಲ್ಲದ ಸಮಯದಲ್ಲಿ ತೀರಾ ಸಂಕಷ್ಟವಾಯಿತು. ಆ ಸಂದರ್ಭದಲ್ಲಿ ಧಾರಾವಾಹಿಗಳಿಂದ ಕಾಲ್‌ಗಳು ಬರುತ್ತಿದ್ದವು. ಆಗ ಧಾರಾವಾಹಿ ಕೆಲಸವೊಂದು ನನ್ನ ಬದುಕು ಬದಲಿಸಿತು,” ಎಂದು ಅವರು ಪುನಃ ಸ್ಮರಿಸಿದರು.
ಧಾರಾವಾಹಿಯಿಂದ ಬದುಕಿನಲ್ಲಿ ತಿರುವು
ಚಂದನ್ ಧಾರಾವಾಹಿ ನಿರ್ಮಾಪಕರ ಬಳಿ ಹೆಚ್ಚು ಪೇಮೆಂಟ್ ಕೇಳಿದಾಗ, ಅವರು ಸಹಮತ ನೀಡಿದ್ದರು. “ಅದರ ನಂತರ ಜೀವನದಲ್ಲಿ ಸ್ಥಿರತೆ ಕಂಡೆ. ನಾನು ಮತ್ತು ಕವಿತಾ ‘ಕುಕ್ ವಿತ್ ಕಿರಿಕ್’ ಶೋ ಮಾಡ್ತಿದ್ದೇವೆ. ಆ ಶೋನಿಂದ ಬಂದ ಹಣದಿಂದ ಮದುವೆಗೂ ಅವಕಾಶ ಆಗಿತ್ತು,” ಎಂದು ಅವರು ಸಂತೋಷದಿಂದ ಹೇಳಿದರು.
ಈಗ ಹೋಟೆಲ್ ಬಿಸ್ನೆಸ್, ಹಾಯಾಗಿರುವ ದಾಂಪತ್ಯ ಜೀವನ
ಇತ್ತೀಚೆಗೆ ಚಂದನ್ ಮತ್ತು ಕವಿತಾ ತಮಗೆ ಸೇರಿ ಹೋಟೆಲ್ ಬಿಸ್ನೆಸ್ ಆರಂಭಿಸಿದ್ದು, ಸಿನಿಮಾ ಹಾಗೂ ಧಾರಾವಾಹಿ ಲೋಕದಿಂದ ಅಷ್ಟಾಗಿ ಬ್ಯುಸಿಯಾಗಿಲ್ಲ. ಆದರೆ, ಅವರು ತಮ್ಮ ಜೀವನವನ್ನು ಚೆನ್ನಾಗಿ ನಿರ್ವಹಿಸುತ್ತಿರುವುದು ಸ್ಪಷ್ಟವಾಗುತ್ತಿದೆ.
ನಟ ಚಂದನ್ ಕುಮಾರ್ ಅನುಭವದಿಂದ ನಮಗೆ ಜೀವನದಲ್ಲಿ ಹಣದ ನಿರ್ವಹಣೆ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಮಹತ್ವ ಪಾಠವಾಗಿ ನಿಲ್ಲುತ್ತದೆ.
For More Updates Join our WhatsApp Group :