ಬಂಗಾಳಕೊಲ್ಲಿಯಲ್ಲಿ ಎದ್ದ “ಡಾನಾ” ಚಂಡುಮಾರುತ ಒಡಿಶಾ ಹಾಗೂ ಪಶ್ಚಿಮ ಬಂಗಾಳ ರಾಜ್ಯವನ್ನು ತತ್ತರಗೊಳಿಸಿದೆ. ಮೊದಲೇ ತೆಗೆದುಕೊಂಡಿದ್ದ ಮುನ್ನೆಚ್ಚರಿಕಾ ಕ್ರಮದಿಂದಾಗಿ ಸಾವು – ನೋವು ವರದಿಯಿಲ್ಲದೇ 2 ರಾಜ್ಯವೂ ಚಂಡಮಾರುತದ ವಿರುದ್ಧ ಗೆಲುವು ಸಾಧಿಸಿದೆ. ಈ ಮಧ್ಯೆ ಒಡಿಶಾ ರಾಜ್ಯದಲ್ಲಿ 42 ವರ್ಷದ ಆಶಾ ಕಾರ್ಯಕರ್ತೆ ಮಹಿಳೆಯೊಬ್ಬರು 7 ಮಂದಿಯನ್ನು ತನ್ನ ಹೆಗಲ ಮೇಲೆ ಹೊತ್ತು ರಕ್ಷಿಸಿದ್ದು, ಒಡಿಶಾ ಮುಖ್ಯಮಂತ್ರಿಗಳು ಪ್ರಶಂಸಿದ್ದಾರೆ. ಒಡಿಶಾದಲ್ಲಿ ಆಶಾ ಕಾರ್ಯಕರ್ತೆಯೊಬ್ಬರು ರಕ್ಕಸ ಡಾನಾ” ಚಂಡಮಾರುತಕ್ಕೆ ಎದೆಯೊಡ್ಡಿ ನಿಲ್ಲಿ ತಮ್ಮ ಹೆಗಲ ಮೇಲೆ ಇಬ್ಬರು ಗರ್ಭಿಣಿಯರನ್ನು ಸೇರಿ 7 ಮಹಿಳೆಯರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿದ್ದಾರೆ.
ಈ ಆಶಾಕಾರ್ಯಕರ್ತೆಯ ಹೆಸರು ‘ಸಿಬಾನಿ ಮಂಡಲ್’. 42 ವರ್ಷದ ಇವರು ಕೇಂದ್ರಪಾರ ಜಿಲ್ಲೆಯ ರಾಜನಗರ ಪ್ರದೇಶದಲ್ಲಿ 18 ವರ್ಷದಿಂದ ಆಶಾ ಕಾರ್ಯಕರ್ತೆಯಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ತುರ್ತು ಸಮಯದಲ್ಲಿ ಸಿಬಾನಿ ಮಂಡಲ್ ನಿರ್ವಹಿಸಿದ ಶೌರ್ಯ ಕಾರ್ಯಕ್ಕೆ ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ ಸ್ವತಃ ಕರೆ ಮಾಡಿ ಧನ್ಯವಾದ ತಿಳಿಸಿದ್ದಾರೆ.