ಸೇನಾ ಶ್ವಾನ ‘ಟೈಸನ್’ ಸಾಹಸ.!

ಸೇನಾ ಶ್ವಾನ ‘ಟೈಸನ್’ ಸಾಹಸ.!

ಜಮ್ಮು-ಕಾಶ್ಮೀರದಲ್ಲಿ ‘ಟೈಸನ್’ ಶೌರ್ಯ ಪ್ರದರ್ಶನ.

ಜಮ್ಮು-ಕಾಶ್ಮೀರ: ಕಿಶ್ತವಾರ್ ಜಿಲ್ಲೆಯ ಛತ್ರೂ ಪ್ರದೇಶದಲ್ಲಿ ಉಗ್ರರ ಅಡಗುತಾಣ ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿ ಸೇನಾ ಶ್ವಾನ ‘ಟೈಸನ್’ ಅಪೂರ್ವ ಸಾಹಸ ಮೆರೆದಿದೆ. ಈ ಕಾರ್ಯಾಚರಣೆಯಲ್ಲಿ ಮೂವರು ಜೈಶ್-ಎ-ಮೊಹಮ್ಮದ್ ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.

ಜರ್ಮನ್ ಶೆಫರ್ಡ್ ತಳಿಯ ಟೈಸನ್, Indian Armyನ 2 ಪ್ಯಾರಾ (ಸ್ಪೆಷಲ್ ಫೋರ್ಸ್) ಘಟಕದ ಭಾಗವಾಗಿತ್ತು. ಕಠಿಣ ಪರ್ವತ ಪ್ರದೇಶದಲ್ಲಿ ಕಲ್ಲಿನೊಳಗೆ ತೋಡಿಕೊಂಡಿದ್ದ ಉಗ್ರರ ಅಡಗುತಾಣದೊಳಗೆ ನುಗ್ಗಿ ದಾರಿತೋರಿಸಿತು.

ಅಡಗುತಾಣದೊಳಗೆ ನುಗ್ಗುತ್ತಿದ್ದಂತೆ ಉಗ್ರರು ಗುಂಡಿನ ದಾಳಿ ನಡೆಸಿದರು. ಕಾಲಿಗೆ ಗುಂಡೇಟು ತಗುಲಿದರೂ ಟೈಸನ್ ಮುಂದುವರಿದು ಪಡೆಗಳಿಗೆ ನಿಖರ ಸ್ಥಳ ಮಾಹಿತಿ ನೀಡಿತು. ಇದರಿಂದ ಭದ್ರತಾ ಪಡೆಗಳು ಅಡಗುತಾಣವನ್ನು ಸುತ್ತುವರಿದು ಉಗ್ರರನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಾಯಿತು.

ಛತ್ರೂ ಪ್ರದೇಶದ ಕಠಿಣ ಭೌಗೋಳಿಕ ಪರಿಸ್ಥಿತಿಯಲ್ಲೂ ಸೇನಾ ಪಡೆಗಳು ಯಶಸ್ವಿ ಕಾರ್ಯಾಚರಣೆ ನಡೆಸಿವೆ. ಟೈಸನ್ ತೋರಿದ ಸಾಹಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *