‘ದಿ ಕಾಶ್ಮೀರ್ ಫೈಲ್ಸ್’ ನಂತರ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ದಿ ಬೆಂಗಾಲ್ ಫೈಲ್ಸ್’ಇಂದು (ಸೆಪ್ಟೆಂಬರ್ 5) ಬಿಡುಗಡೆಯಾಗಿದೆ. ನಿರ್ದೇಶಕ ಅಗ್ನಿಹೋತ್ರಿ, “ಕಾಶ್ಮೀರ್ ಫೈಲ್ಸ್ ನಿಮ್ಮನ್ನು ಅಲುಗಾಡಿಸಿದ್ದರೆ, ಬೆಂಗಾಲ್ ಫೈಲ್ಸ್ ನಿಮ್ಮನ್ನು ಬೆಂಬಿಡದೆ ಕಾಡುತ್ತದೆ” ಎಂದು ಬಿಡುಗಡೆಗೆ ಮುನ್ನವೇ ಹೇಳಿದ್ದರು.
ಸಿನಿಮಾದ ಕಥೆ ಏನು?
ಚಿತ್ರವು 1946ರ ಆಗಸ್ಟ್ 16ರಂದು ಜಿನ್ನಾ ಕರೆ ನೀಡಿದ ‘ಡೈರೆಕ್ಟ್ ಆಕ್ಷನ್’ ಬಳಿಕ ಬಂಗಾಳದಲ್ಲಿ ನಡೆದ ಭೀಕರ ಹಿಂದೂ-ಮುಸ್ಲಿಂ ಗಲಭೆಯ ಹಿನ್ನೆಲೆಯ ಮೇಲೆ ತಯಾರಾಗಿದೆ. ಭಾರತದ ಇತಿಹಾಸದಲ್ಲೇ ಅತ್ಯಂತ ರಕ್ತಪಾತದ ಕೋಮು ಗಲಭೆಗಳಲ್ಲಿ ಒಂದಾದ ಈ ಘಟನೆಗೆ ಆಧಾರವಾಗಿಯೇ ಕಥೆ ರೂಪುಗೊಂಡಿದೆ.
* ಒಂದು ಭಾಗದಲ್ಲಿ ಕಣ್ಮರೆಯಾದ ವ್ಯಕ್ತಿಯನ್ನು ಹುಡುಕುವ ತನಿಖಾಧಿಕಾರಿ,
* ಮತ್ತೊಂದು ಭಾಗದಲ್ಲಿ ಗಲಭೆಯ ಸಂತ್ರಸ್ತೆಯೊಬ್ಬಳ ಕಥೆ,
ಈ ಎರಡನ್ನೂ ಜೋಡಿಸಿ, ಗಲಭೆಯಲ್ಲಿ ಅಧಿಕಾರ ವರ್ಗದ ನಿರ್ಲಕ್ಷ್ಯ, ಕೊಲ್ಕತ್ತದ ಬೀದಿಗಳಲ್ಲಿ ಹರಿದ ರಕ್ತನದಿ, ಮತ್ತು ವಿಶೇಷವಾಗಿ ಹಿಂದೂಗಳ ಮೇಲಿನ ಹಿಂಸಾಚಾರದ ಚಿತ್ರಣವನ್ನು ತೋರಿಸಲಾಗಿದೆ.
ಸಿನಿಮಾದ ಪ್ರಮುಖ ಅಂಶಗಳು
* ಸಿಮ್ರತ್ ಕೌರ್– ಗಲಭೆಯ ಬಲಿಯಾದವರ ಪಾತ್ರ
* ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಪಲ್ಲವಿ ಜೋಶಿ, ದರ್ಶನ್ ಕುಮಾರ್, ಸಾಶ್ವತ ಚಟರ್ಜಿ – ಪ್ರಮುಖ ಪಾತ್ರಗಳು
* ನಿರ್ದೇಶನ ಮತ್ತು ನಿರ್ಮಾಣ – ವಿವೇಕ್ ಅಗ್ನಿಹೋತ್ರಿ
* ಸಂಗೀತ – ರೋಹಿತ್ ಶರ್ಮಾ
* ‘ಕಾಶ್ಮೀರ್ ಫೈಲ್ಸ್’ ತಂಡ ಬಹುತೇಕ ಈ ಸಿನಿಮಾದಲ್ಲೂ ಕೆಲಸ ಮಾಡಿದೆ
ಚಿತ್ರದಲ್ಲಿ ನೋಕಾಹಲಿ ಹತ್ಯಾಕಾಂಡ ಸೇರಿದಂತೆ ಅನೇಕ ದಾರುಣ ಘಟನೆಗಳ ಚಿತ್ರಣವಿದೆ ಎಂದು ವಿಮರ್ಶಕರು ತಿಳಿಸಿದ್ದಾರೆ.
For More Updates Join our WhatsApp Group :