ಚಾಮರಾಜನಗರ: ಇಂದು ರಾತ್ರಿ ಕಗ್ರಾಸ ಚಂದ್ರಗ್ರಹಣ ನಡೆಯಲಿದೆ. ರಾಜ್ಯದ ಪ್ರಮುಖ ದೇವಸ್ಥಾನಗಳು ಗ್ರಹಣದ ಹಿನ್ನೆಲೆಯಲ್ಲಿ ಭಕ್ತರಿಗೆ ಬಾಗಿಲು ಮುಚ್ಚಲಿದ್ದರೆ, ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾತ್ರ ಎಂದಿನಂತೆ ದರ್ಶನ ಮತ್ತು ಪೂಜಾ ಕಾರ್ಯ ನಡೆಯಲಿದೆ.
ಗ್ರಹಣ – ದೇವಾಲಯಗಳಿಗೆ ಬೀಗ:
ಹುಣ್ಣಿಮೆ ಚಂದ್ರನು ಗ್ರಹಣದ ಕಾರಣ ಕಡು ಕೆಂಪು ಬಣ್ಣ ತಾಳಲಿದ್ದಾನೆ. ಈ ಹಿನ್ನೆಲೆಯಲ್ಲಿ ಜ್ಯೋತಿಷಿಗಳು ಪ್ರಕೃತಿ ವಿಕೋಪ, ಜಲಪ್ರಳಯ ಮುಂತಾದ ಭವಿಷ್ಯವಾಣಿಗಳನ್ನು ಮಾಡುತ್ತಿದ್ದು, ರಾಜ್ಯಾದ್ಯಂತ ದೇವಸ್ಥಾನಗಳು ಮುಚ್ಚಲ್ಪಡುತ್ತಿವೆ. ಭಕ್ತರ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ.
ಮಾದಪ್ಪನ ವಿಶೇಷತೆ:
ಆದರೆ ಮಲೆ ಮಹದೇಶ್ವರನಲ್ಲಿ ಮಾತ್ರ ಭಕ್ತರಿಗೆ ನಿರಂತರ ದರ್ಶನ ಲಭ್ಯ. “ಮಾದಪ್ಪನು ಶಿವನ ಅವತಾರ, ಪವಾಡಪುರುಷ. ಅವರಿಗೆ ಮುಟ್ಟು-ಮೈಲಿಗೆ ಅನ್ನೋದಿಲ್ಲ, ಆದ್ದರಿಂದ ಯಾವುದೇ ಗ್ರಹಣದ ಪರಿಣಾಮ ಇಲ್ಲ” ಎಂದು ನಂಬಿಕೆ ಇದೆ. ಹೀಗಾಗಿ ಯಾವ ಗ್ರಹಣಕ್ಕೂ ಮಲೆ ಮಹದೇಶ್ವರ ಬೆಟ್ಟದ ಬಾಗಿಲು ಮುಚ್ಚುವುದಿಲ್ಲ.
ಭಕ್ತರ ನಂಬಿಕೆ ಮತ್ತು ಕುತೂಹಲ:
ಒಂದೆಡೆ ಸಾತ್ವಿಕರು ಗ್ರಹಣದ ಶುಭ-ಅಶುಭ ವಿಚಾರದಲ್ಲಿ ತಲ್ಲೀನರಾಗಿದ್ದರೆ, ಮತ್ತೊಂದೆಡೆ ವಿಜ್ಞಾನಾಸಕ್ತರು ಆಕಾಶದಲ್ಲಿ ನಡೆಯುವ ಅಪರೂಪದ ದೃಶ್ಯ ಕಾದು ನೋಡುತ್ತಿದ್ದಾರೆ. ಆದರೆ ಮಾದಪ್ಪನ ಭಕ್ತರಿಗೆ ಎಂದಿನಂತೆ ದರ್ಶನ ಭಾಗ್ಯ ಖಚಿತ.
For More Updates Join our WhatsApp Group :