‘ಬಾಹುಬಲಿ’ ಸಿನಿಮಾ ಸರಣಿ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಮಹತ್ವದ ಸಿನಿಮಾ. ಭಾರತೀಯ ಸಿನಿಮಾ ಮಾರುಕಟ್ಟೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದ ಸಿನಿಮಾ ಅದು. ಭಾರತೀಯ ಚಿತ್ರಕರ್ಮಿಗಳನ್ನು ದೊಡ್ಡದಾಗಿ ಯೋಚಿಸುವಂತೆ ಪ್ರೇರೇಪಿಸಿದ ಸಿನಿಮಾ ಅದು. ಇದೀಗ ‘ಬಾಹುಬಲಿ 1’ ಬಿಡುಗಡೆ ಆಗಿ ಹತ್ತು ವರ್ಷವಾದ ಬೆನ್ನಲ್ಲೆ ಇದೀಗ ‘ಬಾಹುಬಲಿ 1’ ಮತ್ತು ‘ಬಾಹುಬಲಿ 2’ ಎರಡೂ ಸಿನಿಮಾಗಳನ್ನು ಒಟ್ಟಿಗೆ ಸೇರಿಸೆ ‘ಬಾಹುಬಲಿ: ದಿ ಎಪಿಕ್’ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ. ಇಂದು (ಅಕ್ಟೋಬರ್ 31) ಬಿಡುಗಡೆ ಆಗಿದೆ ಆದರೆ ಸಿನಿಮಾ ನೋಡಿದ ಸುದೀಪ್ ಅಭಿಮಾನಿಗಳಿಗೆ ಬೇಸರವಾಗಿದೆ.
‘ಬಾಹುಬಲಿ’ ಸಿನಿಮಾದ ಎರಡು ಭಾಗಗಳನ್ನು ಸೇರಿಸಿ 3:42 ಗಂಟೆಯ ‘ಬಾಹುಬಲಿ: ದಿ ಎಪಿಕ್’ ಸಿನಿಮಾ ಮಾಡಲಾಗಿದೆ. ಹಾಗಾಗಿ ಎರಡೂ ಸಿನಿಮಾಗಳಲ್ಲಿನ ಹಲವಾರು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ. ಈ ಕತ್ತರಿ ಹಾಕುವ ಕೆಲಸವನ್ನು ಖುದ್ದು ನಿರ್ದೇಶಕ ರಾಜಮೌಳಿ ಮಾಡಿದ್ದಾರೆ. ಕತೆಗೆ ಅನವಶ್ಯಕ ಎನಿಸಿದ ಕೆಲ ದೃಶ್ಯಗಳು, ಹಾಡುಗಳನ್ನು ಕತ್ತರಿಸಲಾಗಿದೆಯಂತೆ. ಸಿನಿಮಾ ಅನ್ನು ಚಿಕ್ಕದಾಗಿಸುವ ಪ್ರಕ್ರಿಯೆಯಲ್ಲಿ ‘ಬಾಹುಬಲಿ: ದಿ ಬಿಗಿನಿಂಗ್’ನಲ್ಲಿದ್ದ ಸುದೀಪ್ ಅವರ ಪಾತ್ರಕ್ಕೂ ಕತ್ತರಿ ಹಾಕಲಾಗಿದೆ.
For More Updates Join our WhatsApp Group :
