ಬ್ಯಾಂಕ್ ಗೇಟ್‌ನ ಬಳಿ ಬಂದೂಕು ಹಿಡಿದು ನಿಲ್ಲಬೇಕಿದ್ದ ಗಾರ್ಡ್…

ಬ್ಯಾಂಕ್ ಗೇಟ್‌ನ ಬಳಿ ಬಂದೂಕು ಹಿಡಿದು ನಿಲ್ಲಬೇಕಿದ್ದ ಗಾರ್ಡ್...

ವಿಜಯಪುರ:ಸೆಪ್ಟೆಂಬರ್ 16ರ ಸಂಜೆ ವಿಜಯಪುರದ ಚಡಚಣ ಪಟ್ಟಣದಲ್ಲಿ ನಡೆದ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ವೈಫಲ್ಯ ಹಾಗೂ ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ್ಯ ಗಂಭೀರ ಪ್ರಶ್ನೆಗಳಿಗೆ ಕಾರಣವಾಗಿದೆ ಎಂದು ತನಿಖಾ ವರದಿಗಳು ತಿಳಿಸಿವೆ.

1.5 ಕೋಟಿ ರೂಪಾಯಿ ನಗದು ಮತ್ತು 20 ಕೆಜಿ ಚಿನ್ನದೊಂದಿಗೆ ಪರಾರಿಯಾದ ಐವರು ದರೋಡೆಕೋರರ ಗ್ಯಾಂಗ್, ಈ ಕೃತ್ಯವನ್ನು ಸುಲಭವಾಗಿ ನಡೆಸಲು ಅವಕಾಶ ನೀಡಿದವರಲ್ಲಿ ಬ್ಯಾಂಕ್ ಮ್ಯಾನೇಜರ್, ಸೆಕ್ಯುರಿಟಿ ಗಾರ್ಡ್ ಸೇರಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಸ್ಫೋಟಕ ಮಾಹಿತಿ: ಗಾರ್ಡ್ಝೆರಾಕ್ಸ್‌’ ನಲ್ಲಿ ಬಿಜಿ!

  • ಸಧ್ಯದ ತನಿಖೆಯಲ್ಲಿ, ಬ್ಯಾಂಕ್ ಸೆಕ್ಯುರಿಟಿ ಗಾರ್ಡ್ ದರೋಡೆ ವೇಳೆ ತನ್ನ ಕರ್ತವ್ಯವನ್ನು ನಿರ್ಲಕ್ಷ್ಯಿಸಿ ಝೆರಾಕ್ಸ್, ಪಾಸ್ಬುಕ್ ಎಂಟ್ರಿ ಕೆಲಸಗಳಲ್ಲಿ ತೊಡಗಿದ್ದ ಎಂಬ ಶಾಕ್ ಅಂಶ ಬಯಲಾಗಿದೆ.
  • ದರೋಡೆಕೋರರು ಗನ್ ತೋರಿಸಿ ಮ್ಯಾನೇಜರ್ ಮತ್ತು ಸಿಬ್ಬಂದಿಯನ್ನು ಕೈಕಾಲು ಕಟ್ಟಿ ಕೊಠಡಿಗೆ ಹಾಕಿದರೂ, ಗಾರ್ಡ್ ಇವೆಲ್ಲಾ ಗಮನಿಸದೇ ಇದ್ದಿದ್ದನು.
  • ಗಾರ್ಡ್‌ನ ಬಂದೂಕು ಕೂಡ ಬೇರಡೆ ಇಡಲಾಗಿದ್ದುದರಿಂದ ಪ್ರತಿರೋಧ ಸಾಧ್ಯವಾಗಿರಲಿಲ್ಲ.

ಭದ್ರತಾ ಗೈಡ್ಲೈನ್ಗಳನ್ನು ಅವಮಾನಿಸಿದ ಬ್ಯಾಂಕ್ ಸಿಬ್ಬಂದಿ?

ಉನ್ನತ ಮೂಲಗಳ ಪ್ರಕಾರ:

“ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶಸ್ತ್ರ ಸಜ್ಜಿತ ಗಾರ್ಡ್ ಬಾಗಿಲ ಬಳಿ ನಿಂತಿರಬೇಕು ಎಂಬ ನಿಯಮವನ್ನು ಉಲ್ಲಂಘಿಸಲಾಗಿದೆ. ಇದರಿಂದ ದರೋಡೆ ನಡೆದಿದ್ದು, ಇಂತಹ ನಿರ್ಲಕ್ಷ್ಯಕ್ಕೆ ಕಠಿಣ ಕಾನೂನು ಕ್ರಮ ಅಗತ್ಯವಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ತನಿಖೆಎಲ್ಲಿ ತಲುಪಿದೆ?

  • ಪೊಲೀಸರು ಈಗಾಗಲೇ ಒಂದು ದರೋಡೆಕೋರನ ಇಕೋ ಕಾರು ಮತ್ತು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
  • ಈ ಆಧಾರದ ಮೇಲೆ ಪೊಲೀಸರು ಮಹಾರಾಷ್ಟ್ರದ ಫಂಡರ್ಪುರ, ಉಮದಿ, ಜತ್, ಸಾಂಗ್ಲಿ, ಸೊಲ್ಲಾಪುರ ಪ್ರದೇಶದಲ್ಲಿ 8 ತಂಡಗಳೊಂದಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ.
  • ದರೋಡೆಕೋರರ ಪ್ಯಾಟರ್ನ್, ಸಂಪರ್ಕ ಜಾಲ ಹಾಗೂ ಮೊಬೈಲ್ ಟ್ರಾಕಿಂಗ್ ಮೂಲಕ ಮುಂದಿನ ಹಂತದ ಬಂಧನ ಸಾಧ್ಯತೆಯಿದೆ.

ಜನರಿಂದ ಆಕ್ರೋಶ – “ಭದ್ರತೆ ಇಲ್ಲದ ಬ್ಯಾಂಕ್ ಹೇಗೆ?”

ಈ ದರೋಡೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಭಾರೀ ಅಸಮಾಧಾನ ವ್ಯಕ್ತವಾಗಿದೆ:

  • ಏನು ಬ್ಯಾಂಕ್ ವ್ಯವಸ್ಥೆ?”
  • ಬಂದೂಕು ಹಿಡಿದ ಗಾರ್ಡ್ ಬಾಗಿಲಲ್ಲಿಲ್ಲ, ಝೆರಾಕ್ಸ್ ಮಾಡ್ತಿದ್ದಾನೆ!”
  • ಇಷ್ಟೊಂದು ದುಡ್ಡು ಇರೋ ಬ್ಯಾಂಕ್ಗಳಲ್ಲಿ ಇಷ್ಟು ನಿರ್ಲಕ್ಷ್ಯ ಹೇಗೆ ಸಾಧ್ಯ?”

ಎಂದು ಸ್ಥಳೀಯರು ಭೀತಿಯಿಂದ ಪ್ರಶ್ನೆ ಎಬ್ಬಿಸುತ್ತಿದ್ದಾರೆ.

ನಿಗಾ ಇಡಬೇಕಾದ ಪ್ರಮುಖ ಅಂಶಗಳು:

  • ಬ್ಯಾಂಕ್ ಸಿಬ್ಬಂದಿ ಭದ್ರತಾ ತರಬೇತಿ ಪಡೆದುಕೊಂಡವರೇ?
  • ಗಾರ್ಡ್ ನಿಯಮಬದ್ಧವಾಗಿ ನಿಯೋಜನೆಗೊಂಡವನೇ?
  • ದರೋಡೆ ದಿನವೇ ಈ ನಿರ್ಲಕ್ಷ್ಯ ನಡೆಯಬೇಕಾಗಿದ್ದದೇ ಯಾಕೆ?

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *