ಕೊಪ್ಪಳ: ಮಲೆನಾಡ ಪ್ರಾಂತ್ಯದಲ್ಲಿ ಭಾರೀ ಮಳೆ ಸುರಿಯುವುದು ಮುಂದುವರಿದಿರುವ ಕಾರಣ ಜಿಲ್ಲೆಯ ಮುನಿರಾಬಾದ್ ನಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ತುಂಗಭದ್ರಾ ನದಿಗೆ ನೀರನ್ನು ಹರಿಬಿಡಲಾಗುತ್ತಿದೆ.
ನಮ್ಮ ಕೊಪ್ಪಳ ವರದಿಗಾರ ಹೇಳುವ ಪ್ರಕಾರ ನದಿಗೆ 1 ಲಕ್ಷ ಕ್ಯೂಸೆಕ್ಸ್ಗೂ ಅಧಿಕ ನೀರನ್ನು ಹರಿಬಿಡಲಾಗಿದೆ ಹಾಗೂ ಕಂಪ್ಲಿ ಮತ್ತು ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ಕಂಪ್ಲಿ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿ ವಾಹನ ಸಂಚಾರ ಮತ್ತು ಜನರ ಓಡಾಟ ನಿಷೇಧಿಸಲಾಗಿದೆ. ನದಿಪಾತ್ರದ ಹೊಲಗದ್ದೆಗಳಿಗೂ ನೀರು ನುಗ್ಗಿರುವುದರಿಂದ ರೈತರು ದೊಡ್ಡ ಪ್ರಮಾಣದಲ್ಲಿ ಬೆಳೆಹಾನಿಯ ಸನ್ನಿವೇಶಕ್ಕೆ ತುತ್ತಾಗಿದ್ದಾರೆ.
For More Updates Join our WhatsApp Group :
