6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದರೆ ದೇಹ–ಮನಸ್ಸಿಗೆ ತುಂಬ ಸಮಸ್ಯೆ.
ಆರೋಗ್ಯಕರ ಜೀವನ ನಡೆಸಲು ಆರೋಗ್ಯಕರ ಆಹಾರ ಸೇವನೆ, ನಿಯಮಿತ ವ್ಯಾಯಾಮ ಎಷ್ಟು ಮುಖ್ಯವೋ ಅದೇ ರೀತಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಚೆನ್ನಾಗಿರಬೇಕೆಂದರೆ 7 ರಿಂದ 9 ಗಂಟೆಗಳ ನಿದ್ರೆ ಅತ್ಯಗತ್ಯ. ಆದರೆ ಇಂದಿನ ದಿನಗಳಲ್ಲಿ ಅನೇಕರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಸರಿಯಾಗಿ ನಿದ್ರೆ ಮಾಡಲು ಆಗುತ್ತಿಲ್ಲ ಎನ್ನುತ್ತಿರುತ್ತಾರೆ. ಹೀಗೆ ಪ್ರತಿದಿನ 7 ಗಂಟೆಗಳಿಗಿಂದ ಕಡಿಮೆ ನಿದ್ರೆ ಮಾಡಿದರೆ ಎಷ್ಟೆಲ್ಲಾ ಸಮಸ್ಯೆಗಳು ಕಾಡುತ್ತದೆ ಗೊತ್ತಾ?
6 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದರೆ ಏನಾಗುತ್ತದೆ ಗೊತ್ತಾ?
ಮೆದುದು ಸರಿಯಾಗಿ ಕಾರ್ಯನಿರ್ವಹಿಸಲ್ಲ: ನೀವು ಪ್ರತಿನಿತ್ಯ ಸಾಕಷ್ಟು ನಿದ್ರೆ ಪಡೆಯದಿದ್ದರೆ ನಿಮ್ಮ ಮೆದುಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ನೀವು ಏಕಾಗ್ರತೆಯನ್ನು ಕಳೆದುಕೊಳ್ಳುತ್ತೀರಿ. ಆದ್ದರಿಂದ ದಿನಕ್ಕೆ ಕನಿಷ್ಟ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು.
ಮುಖದ ಮೇಲೆ ಸುಕ್ಕುಗಳು: ನಿದ್ರೆಯ ಕೊರತೆಯು ತ್ವಚೆಯ ಆರೋಗ್ಯದ ಮೇಲೆಯೂ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಇದರಿಂದ ಚರ್ಮದ ಮೇಲೆ ಸುಕ್ಕುಗಳು, ಡಾರ್ಕ್ ಸರ್ಕಲ್‌ಗಳು ಕಾಣಿಸಿಕೊಳ್ಳುತ್ತವೆ.
ಹಾರ್ಮೋನುಗಳ ವ್ಯವಸ್ಥೆಯ ಅಸಮತೋಲನ: ನಿದ್ರೆಯ ಕೊರತೆಯು ಪ್ರಾಥಮಿಕವಾಗಿ ಹಾರ್ಮೋನು ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವು ಹೆಚ್ಚಾಗಿರುತ್ತದೆ, ಇದು ಆತಂಕ, ಕಿರಿಕಿರಿ, ರಕ್ತದೊತ್ತಡ ಮತ್ತು ಹಸಿವಿನ ಮೇಲೂ ಪರಿಣಾಮ ಬೀರುತ್ತದೆ. ದಿನಕ್ಕೆ ಆರು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದರಿಂದ ದೇಹದ ಇನ್ಸುಲಿನ್ ಸಮತೋಲನವು ಅಡ್ಡಿಪಡಿಸುತ್ತದೆ, ಕಾಲಾನಂತರದಲ್ಲಿ ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ದುರ್ಬಲ ರೋಗನಿರೋಧಕ ಶಕ್ತಿ: ನಿದ್ರೆಯ ಕೊರತೆಯು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಇದರ ಪರಿಣಾಮವಾಗಿ ಆಗಾಗ್ಗೆ ಆರೋಗ್ಯ ಸಮಸ್ಯೆಗಳು ಕೂಡ ನಿಮ್ಮನ್ನು ಕಾಡುತ್ತವೆ.
ಸ್ಮರಣಶಕ್ತಿಯ ನಷ್ಟ: ನಿದ್ರೆ ಸರಿಯಾಗಿ ಆಗದಿದ್ದರೆ ಅದರ ಪರಿಣಾಮಗಖು ಮೆದುಳಿನ ಮೇಲೆ ತಕ್ಷಣವೇ ಗೋಚರಿಸುತ್ತದೆ. ಇದು ಸ್ಮರಣಶಕ್ತಿಯ ನಷ್ಟಕ್ಕೂ ಕಾರಣವಾಗಬಹುದು. ಅಲ್ಲದೆ ಒಂದು ರಾತ್ರಿಯ ನಿದ್ರೆ ಸರಿಯಾಗಿ ಆಗದಿದ್ದರೆ ಅದು ಗಮನ, ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲೆಯೂ ಪರಿಣಾಮ ಬೀರುತ್ತದೆ.
ದೀರ್ಘಕಾಲೀನ ಕಾಯಿಲೆಗಳು: ಪ್ರತಿನಿತ್ಯ ಆರು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು, ಪಾರ್ಶ್ವವಾಯು, ಬೊಜ್ಜು, ಮಧುಮೇಹ, ಖಿನ್ನತೆ, ಒತ್ತಡದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
For More Updates Join our WhatsApp Group :




