ಹೆಬ್ಬಾವಿನ ಜತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅದರಿಂದ ಕಚ್ಚಿಸಿಕೊಂಡಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಹಾವು ರಕ್ಷಿಸುವ ವ್ಯಕ್ತಿಯ ಕೈಯಲ್ಲಿ ಹೆಬ್ಬಾವು ಇದೆ, ಸಾಕಷ್ಟು ಮಂದಿ ಸುತ್ತಮುತ್ತಲಿದ್ದಾರೆ. ಓರ್ವ ವ್ಯಕ್ತಿ ಸೆಲ್ಫಿ ತೆಗೆದುಕೊಳ್ಳಲು ಮುಂ ದಾಗುತ್ತಿದ್ದಂತೆ ಕೈಯನ್ನು ಕಚ್ಚಿದೆ. ಜನರು ಆಘಾತಕ್ಕೊಳಗಾಗುತ್ತಾರೆ.

ಹೆಬ್ಬಾವೊಂದು ವ್ಯಕ್ತಿಗೆ ಬಲವಾಗಿ ಕಚ್ಚಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಡೀ ವ್ಯಕ್ತಿಯನ್ನೇ ನುಂಗುವ ಸಾಮರ್ಥ್ಯವಿರುವ ಹೆಬ್ಬಾವಿನ ಬಳಿ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಾಲದು. ಇತ್ತೀಚೆಗೆ ಹೆಬ್ಬಾವೊಂದನ್ನು ವ್ಯಕ್ತಿ ರಕ್ಷಿಸಿದ್ದರು. ಹಾವನ್ನು ಕೈಯಲ್ಲಿ ಹಿಡಿದುಕೊಂಡಿರುವಾಗ ಇನ್ನೊಬ್ಬ ವ್ಯಕ್ತಿ ಪಕ್ಕಕ್ಕೆ ಬಂದು ಅದರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಆಗ ಹಾವು ಆ ವ್ಯಕ್ತಿಯ ತೋಳಿಗೆ ಬಲವಾಗಿ ಕಚ್ಚಿದೆ.
ವಿಡಿಯೋದಲ್ಲಿ ಹಾವು ರಕ್ಷಿಸುವ ವ್ಯಕ್ತಿಯ ಕೈಯಲ್ಲಿ ಹೆಬ್ಬಾವು ಇದೆ, ಸಾಕಷ್ಟು ಮಂದಿ ಸುತ್ತಮುತ್ತಲಿದ್ದಾರೆ. ಓರ್ವ ವ್ಯಕ್ತಿ ಸೆಲ್ಫಿ ತೆಗೆದುಕೊಳ್ಳಲು ಮುಂ ದಾಗುತ್ತಿದ್ದಂತೆ ಕೈಯನ್ನು ಕಚ್ಚಿದೆ. ಜನರು ಆಘಾತಕ್ಕೊಳಗಾಗುತ್ತಾರೆ.