ತಮಿಳಿನ ಯಶಸ್ವಿ ಮತ್ತು ಬಲು ಬೇಡಿಕೆಯ ನಿರ್ದೇಶಕ ಲೋಕೇಶ್ ಕನಗರಾಜ್. ‘ಖೈದಿ’, ‘ವಿಕ್ರಂ’, ‘ಲಿಯೋ’ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ತಮ್ಮದೇ ಆದ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ ಅನ್ನು ಕ್ರಿಯೇಟ್ ಮಾಡಿದ್ದಾರೆ. ಅವರ ನಿರ್ದೇಶನದ ‘ಕೂಲಿ’ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ತಮ್ಮ ಮುಂದಿನ ಪ್ರಾಜೆಕ್ಟ್ಗಳ ಬಗ್ಗೆ ಲೋಕೇಶ್ ಮಾತನಾಡಿದ್ದಾರೆ.

ಲೋಕೇಶ್ ಕನಗರಾಜ್, ದಕ್ಷಿಣ ಭಾರತದ ಖ್ಯಾತ ನಿರ್ದೇಶಕ. ಸಿನಿಮಾ ನಟರುಗಳಿಗೆ ಇರುವಂತೆ ಲೋಕೇಶ್ ಕನಗರಾಜ್ಗೆ ಸಹ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಬಹುತಾರಾಗಣದ, ಇಂಟೆನ್ಸ್ ಸಿನಿಮಾಗಳನ್ನು ನಿರ್ದೇಶಿಸುವಲ್ಲಿ ಲೋಕೇಶ್ ಅವರದ್ದು ಎತ್ತಿದ ಕೈ. ‘ಖೈದಿ’, ‘ವಿಕ್ರಂ’, ‘ಮಾಸ್ಟರ್’, ‘ಲಿಯೋ’ ಸಿನಿಮಾಗಳನ್ನು ಲೋಕೇಶ್ ಈಗಾಗಲೇ ನಿರ್ದೇಶಿಸಿದ್ದಾರೆ. ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್ ಅನ್ನು ಸಹ ಕ್ರಿಯೇಟ್ ಮಾಡಿದ್ದು, ತಮ್ಮ ಸಿನಿಮಾಗಳ ಕತೆಗಳನ್ನು ಒಂದಕ್ಕೊಂದು ಕನೆಕ್ಟ್ ಮಾಡುತ್ತಾ ಹೋಗುತ್ತಿದ್ದಾರೆ.
ದಕ್ಷಿಣ ಭಾರತದ ಬಲು ಬೇಡಿಕೆಯ ಮತ್ತು ಬ್ಯುಸಿ ನಿರ್ದೇಶಕ ಲೋಕೇಶ್ ಕನಗರಾಜ್, ಇದೀಗ ಅವರ ನಿರ್ದೇಶದ ‘ಕೂಲಿ’ ಸಿನಿಮಾ ತೆರೆಗೆ ಬರುತ್ತಿದೆ. ಸಿನಿಮಾನಲ್ಲಿ ರಜನೀಕಾಂತ್, ಅಕ್ಕಿನೇನಿ ನಾಗಾರ್ಜುನ, ಉಪೇಂದ್ರ, ಆಮಿರ್ ಖಾನ್, ಶ್ರುತಿ ಹಾಸನ್ ಇನ್ನೂ ಕೆಲವರು ನಟಿಸಿದ್ದಾರೆ. ‘ಕೂಲಿ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಂತೆ ಲೋಕೇಶ್ ಅವರು ಯಾವ ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಯೂ ಸಿನಿಮಾ ಪ್ರೇಮಿಗಳಲ್ಲಿ ಶುರುವಾಗಿದೆ. ಇದಕ್ಕೆ ಸ್ವತಃ ಲೋಕೇಶ್ ಕನಗರಾಜ್ ಉತ್ತರ ನೀಡಿದ್ದಾರೆ.
ಲೋಕೇಶ್ ಕನಗರಾಜ್ ಅವರು ಸಂದರ್ಶನವೊಂದರಲ್ಲಿ ಹೇಳಿವಂತೆ ಅವರ ಕೈಯಲ್ಲಿ ಈಗ ಹಲವಾರು ಸಿನಿಮಾಗಳಿವೆ. ಅವರೇ ಸೃಷ್ಟಿಸಿರುವ ಎಲ್ಸಿಯು ಸಿನಿಮಾಗಳನ್ನು ಅವರು ಮಾಡಬೇಕಿದೆ. ಲೋಕೇಶ್ ಹೇಳಿರುವಂತೆ, ಈಗ ಮೊದಲು ‘ಖೈದಿ 2’ ಸಿನಿಮಾ ಮಾಡುತ್ತಾರಂತೆ. ‘ಖೈದಿ’ ಸಿನಿಮಾದ ಎರಡೇ ವರ್ಷಗಳಲ್ಲಿ ‘ಖೈದಿ 2’ ಮಾಡಬೇಕಿತ್ತಂತೆ. ಆದರೆ ಸುಮಾರು ಆರು ವರ್ಷಗಳ ಬಳಿಕ ಈಗ ಮತ್ತೆ ಅವರು ‘ಖೈದಿ 2’ ಮಾಡಲಿದ್ದಾರೆ. ಇನ್ನು ಕಮಲ್ ಹಾಸನ್ ನಟನೆಯ ‘ವಿಕ್ರಂ’ ಸಿನಿಮಾವನ್ನು ಪೂರ್ತಿ ಮಾಡಬೇಕಿದೆ. ‘ಖೈದಿ 2’ ಬಳಿಕ ‘ವಿಕ್ರಂ 2’ ಸಿನಿಮಾ ಸಹ ಲೋಕೇಶ್ ಮಾಡಲಿದ್ದಾರೆ.