ರಾಮನಗರ ಜಿಲ್ಲೆ ಹೆಸರನ್ನು ಮರು ಸ್ಥಾಪನೆ ಮಾಡೇ ಮಾಡ್ತೀವಿ – ಡಿಕೆಶಿಗೆ ನಿಖಿಲ್ ಸವಾಲ್

ಚುನಾವಣೆಗೆ 2 ದಿನ ಇದ್ದಾಗ ಹಣ ಹಾಕ್ತಾರೆ, ನಿಖಿಲ್ ಗರಂ

ಬೆಂಗಳೂರು: ರಾಮನಗರ ಜಿಲ್ಲೆ ಹೆಸರನ್ನ ಮರು ಸ್ಥಾಪನೆ ಮಾಡೇ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ಗೆ ಜೆಡಿಎಸ್ ಯುವ ಘಟದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮರು ಸವಾಲು ಎಸೆದಿದ್ದಾರೆ

ಬೆಂಗಳೂರು ದಕ್ಷಿಣ ಜಿಲ್ಲೆ ಹೆಸರು ಬದಲಾವಣೆ ಮಾಡಲು ಕುಮಾರಸ್ವಾಮಿ ಹಣೆಯಲ್ಲೂ ಬರೆದಿಲ್ಲ ಎಂಬ ಡಿಕೆ ಶಿವಕುಮಾರ್‌ಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಹಣೆಬರಹ ಬರೆಯೋದು ಭಗವಂತ ಮತ್ತು ಏಳೂವರೆ ಕೋಟಿ ಜನತೆ. ರಾಜ್ಯದ ಜನತೆ ಕುಮಾರಸ್ವಾಮಿ ಹಣೆಬರಹ ಬರೆಯುತ್ತಾರೆ. ಕಾದು ನೋಡೊಣ ಭಗವಂತ ಯಾರ್ ಯಾರ್ ಹಣೆಬರಹ ಏನು ಬರೆಯುತ್ತಾನೆ. ಈಗಾಗಲೇ ಏನೇನು ಬರೆದಿದ್ದಾನೆ ಅಂತ ಮುಂದೆ ಹೋಗ್ತಾ ಹೋಗ್ತಾ ಗೊತ್ತಾಗುತ್ತದೆ ಎಂದು ಹೇಳಿದರು

ನಾವು ಯಾವತ್ತು ಡಿಕೆ ಶಿವಕುಮಾರ್ ಅವರನ್ನ ನೆನಪು ಮಾಡಿಕೊಳ್ಳೊಲ್ಲ. ಆದರೆ ಡಿಕೆ ಶಿವಕುಮಾರ್ ಹಾಗೆ ಹೇಳ್ತಾರೆ. ನೆನಪು ಮಾಡಿಕೊಂಡರೂ ನಾವು ಅವರಿಗೆ ಒಳ್ಳೆಯದಾಗಲಿ ಅಂತ ಹೇಳುತ್ತೇವೆ. ರಾಜಕೀಯವಾಗಿ ಅವರು ತೆಗೆದುಕೊಳ್ತಿರೋ ನಡೆಗಳು ಸರಿಯಲ್ಲ ಎಂದರು

ಬೆಂಗಳೂರು ದಕ್ಷಿಣ ಜಿಲ್ಲೆ ಅಂತ ಹೆಸರು ಬದಲಾವಣೆ ಮಾಡಿದರೆ ಅನೇಕ ತಾಂತ್ರಿಕ ಸಮಸ್ಯೆ ಆಗಲಿವೆ. ರೆವಿನ್ಯೂ ರೆಕಾರ್ಡ್, ಸರ್ಕಾರದ ದಾಖಲೆಗಳು 5 ತಾಲೂಕುಗಳಲ್ಲಿ ಬದಲಾವಣೆ ಆಗಬೇಕು.ಪ್ರತಿನಿತ್ಯ ಜನ ತಾಲೂಕು ಕಚೇರಿಗೆ ಓಡಾಬೇಕು. ಓಟರ್ ಐಡಿ, ಗ್ಯಾಸ್ ಬಿಲ್ ಅಡ್ರೆಸ್ ಇರಬಹುದು. ಇವೆಲ್ಲ ಸಮಸ್ಯೆಗಳಾಗುತ್ತವೆ. ಅಷ್ಟು ಸುಲಭವಾಗಿ ಹೆಸರು ಬದಲಾವಣೆ ಮಾಡೋದು ಸಾಧ್ಯವಿಲ್ಲ ಅಂತ ತಿಳಿಸಿದರು

Leave a Reply

Your email address will not be published. Required fields are marked *