ಸರ್ಕಾರಿ ಕಾಲೇಜಿನಲ್ಲಿ ವರ್ಷಾಂತ್ಯ ಸಮಾರಂಭ; ವಿದ್ಯಾರ್ಥಿಗಳಿಗೆ ಸಮ್ಮಾನ.
ಮಧುಗಿರಿ: ತಾಲೂಕಿನ ದೊಡ್ಡೇರಿ ಹೋಬಳಿ ಯ ದಂಡಿನ ದಿಬ್ಬ ಗ್ರಾಮದ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು ಆವರಣದ ದ.ರಾ ಬೇಂದ್ರೆಯವರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾಯೋಜನಾ ಘಟಕ, ಕ್ರೀಡಾ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಸೇವಾಯೋಜನಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಲತಾ ಕೆಎಂ ಮಾತನಾಡಿ ಗ್ರಾಮೀಣ ಪ್ರದೇಶದ ರೈತರ ಮಕ್ಕಳು ನಗರ ಪ್ರದೇಶದ ಮಕ್ಕಳಿಗಿಂತ ನಾವೆನು ಕಡಿಮೆ ಇಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಪರೀಕ್ಷೆಯು ಸಮೀಪವಿರುವುದರಿಂದ ಮೊಬೈಲ್ ಫೋನ್, ಟಿ.ವಿ.ಗಳಿಗೆ ಮಾರು ಹೋಗದೆ ಪಾಠಗಳ ಕಡೆ ಹೆಚ್ಚಿನ ಗಮನಹರಿಸಬೇಕು. ಮುಂದಿನ ವಿದ್ಯಾಭ್ಯಾಸ ಮಾಡಲು ಅತಿಹೆಚ್ಚು ಅಂಕಗಳನ್ನು ಗಳಿಸಿ ಸರ್ಕಾರ ನೀಡುವ ಸವಲತ್ತುಗಳನ್ನು ಅರಿತು ಉಚಿತವಾಗಿ ಕಾಲೇಜಿಗೆ ಸೇರಲು ಅವಕಾಶ ಕಲ್ಪಿಸಿಕೊಳ್ಳಿ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ಇದೆ ಎಂದು ತಿಳಿಸಿದರು..
ಕಾರ್ಯಕ್ರಮದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ ಗಳಿಗೆ ಕಾಲೇಜಿನಿಂದ ಹಾಗು ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ದೊಡ್ಡೇರಿ ಕಣಿಮಯ್ಯ ಪ್ರತಿ ವರ್ಷದಂತೆ ಈ ಸಾರಿಯು ಸಹ ಇಬ್ಬರು ವಿದ್ಯಾರ್ಥಿಗಳಿಗೆ ನಗದು ಬಹುಮಾನ ಕೊಟ್ಟು ಗೌರವಿಸಿದರು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹನುಮಂತ ರಾಜು, ಸದಸ್ಯರಾದ ಸಿಡದರಗಲ್ಲು ನಾಗಭೂಷಣ, ಉಪನ್ಯಾಸ ವೃಂದದವರಾದ ರಾಘವೇಂದ್ರ, ರಾಜು, ಷಾ ಗುಪ್ತ ರೂಹಿ, ನಾಗರಾಜು, ಎನ್. ರಂಗನಾಥ, ಕನ್ನಡ ಉಪನ್ಯಾಸಕ ಸುರೇಶ್, ಆರ್. ರಾಜೇಶ್, ತಿಪ್ಪಯ್ಯ, ತಿಪ್ಪೇಸ್ವಾಮಿ, ಸಯ್ಯದ್ ಅರಿಷ್, ಮರೇಶ್, ಬಡವನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿಜಯರತ್ನ, ಬೋದಕ ಬೋದಕೇತರರು ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿ ಗಳಿಂದ ಅದ್ದೂರಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
For More Updates Join our WhatsApp Group :




