ಹೆಚ್ಚುತ್ತಲೇ ಇದೆ ಬಂಗಾರದ ಬೆಲೆ : ಇಂದಿನ ಚಿನ್ನ- ಬೆಳ್ಳಿ ದರ ಎಷ್ಟಿದೆ ಗೊತ್ತಾ?

ಬೆಂಗಳೂರು ​: ದೇಶದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಲಕ್ಷ ರೂ ತಲುಪುವ ಕಾಲ ದೂರವೇನಿಲ್ಲ ಅನಿಸುತ್ತಿದೆ. ಇನ್ನು ಕೆಜಿ ಬೆಳ್ಳಿ ಹತ್ತಿರ ಹತ್ತಿರ ಲಕ್ಷ ರೂಗೆ ಬಂದು ನಿಂತಿದೆ. ಶುಕ್ರವಾರ 10 ಗ್ರಾಂ ಚಿನ್ನದ ಬೆಲೆ ರೂ.79,850ರಷ್ಟಿದ್ದರೆ, ಶನಿವಾರ ರೂ.100ರಷ್ಟು ಏರಿಕೆಯಾಗಿ ರೂ.79,950ಕ್ಕೆ ತಲುಪಿದೆ. ಶುಕ್ರವಾರ ಪ್ರತಿ ಕೆ.ಜಿ ಬೆಳ್ಳಿ ಬೆಲೆ ರೂ.94,660 ರಷ್ಟಿದ್ದರೆ, ಶನಿವಾರ ರೂ.3000 ಏರಿಕೆಯಾಗಿ ರೂ.97,660ಕ್ಕೆ ತಲುಪಿದೆ.

ಹಾಗಾದರೆ ಬೆಂಗಳೂರಲ್ಲಿ ಎಷ್ಟಿದೆ ಇಂದಿನ ಚಿನ್ನದ ದರ: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಒಂದು ಗ್ರಾಂ) ರೂ. 7,241 ಆಗಿದೆ. 10 ಗ್ರಾಂ ಬಂಗಾರಕ್ಕೆ ಇವತ್ತು ಹತ್ತು ರೂಪಾಯಿ ಏರಿಕೆ ಆಗಿದ್ದು, 72410 ರೂ ಗೆ ಮಾರಾಟವಾಗುತ್ತಿದೆ. ಇದೇ 24 ಕ್ಯಾರೆಟ್​ ಬಂಗಾರಕ್ಕೆ 78,990 ರೂ ದರ ಇದೆ. ನಿನ್ನೆ ಈ ದರ 78,980 ರೂ ಇತ್ತು.

ಗಮನಿಸಿ: ಮೇಲೆ ತಿಳಿಸಿದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾಗುತ್ತವೆ. ಗಮನಿಸಬಹುದು.

ಸ್ಪಾಟ್ ಗೋಲ್ಡ್ ಬೆಲೆ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಹೆಚ್ಚಾಗಿದೆ. ಶುಕ್ರವಾರ ಒಂದು ಔನ್ಸ್ ಚಿನ್ನದ ಬೆಲೆ 2710 ಡಾಲರ್ ಆಗಿದ್ದರೆ ಶನಿವಾರದ ವೇಳೆಗೆ 21 ಡಾಲರ್ ಏರಿಕೆಯಾಗಿ 2721 ಡಾಲರ್ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 33 ಡಾಲರ್ ಆಗಿದೆ.

Leave a Reply

Your email address will not be published. Required fields are marked *