ತಿರುವನಂತಪುರಂ: ಮಲಯಾಳಂ ಚಿತ್ರರಂಗದ ಎರಡೂ ದೊಡ್ಡ ತಾರೆಗಳು — ದುಲ್ಕರ್ ಸಲ್ಮಾನ್ ಹಾಗೂ ಪೃಥ್ವಿರಾಜ್ ಸುಕುಮಾರನ್ — ವಿರುದ್ಧ ಕಸ್ಟಮ್ಸ್ ಇಲಾಖೆಯು ಶುಕ್ರವಾರ ದಿಢೀರ್ ದಾಳಿ ನಡೆಸಿದೆ. ನಟರುಗಳ ಕಾರು ಸಂಗ್ರಹದ ಬಗ್ಗೆ ಶಂಕೆ ತಲೆದೋರಿದ್ದು, ಈ ದಾಳಿಯನ್ನು ‘ನುಮ್ಕೂರ್’ ಎಂಬ ವಿಶೇಷ ಕಾರ್ಯಾಚರಣೆ ಹೆಸರಿನಲ್ಲಿ ಹಮ್ಮಿಕೊಳ್ಳಲಾಗಿದೆ.
ದಾಳಿ ಎಲ್ಲಿ ಮತ್ತು ಏಕೆ?
- ದಾಳಿ ನಡೆದ ಸ್ಥಳಗಳು:
- ಪೃಥ್ವಿರಾಜ್ ಮನೆಗಳು – ತೇವರಾ (ಕೊಚ್ಚಿ), ತಿರುವನಂತಪುರಂ
- ದುಲ್ಕರ್ ಸಲ್ಮಾನ್ ಮನೆ – ಪನಂಪಿಲ್ಲಿ ನಗರ (ಕೊಚ್ಚಿ)
- ಕಸ್ಟಮ್ಸ್ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ ವಿದೇಶಿ ಕಾರುಗಳ ದಾಖಲೆ, ತೆರಿಗೆ ಪಾವತಿ, ಆಮದು ದಾಖಲೆ ಮೊದಲಾದವನ್ನೆಲ್ಲ ಪರಿಶೀಲಿಸಿದ್ದಾರೆ.
- ಕೆಲ ಉದ್ಯಮಿಗಳ ಮನೆಗಳ ಮೇಲೂ ಈ ದಾಳಿ ನಡೆದಿದ್ದು, ವಿದೇಶಿ ಕಾರು ಸ್ಮಗ್ಲಿಂಗ್ ಜಾಲದ ಬಗೆಗೆ ವಿವರವಾದ ತನಿಖೆ ನಡೆಯುತ್ತಿದೆ.
ಆಮದು, ನೋಂದಣಿ ಹಾಗೂ ತೆರಿಗೆ ವಂಚನೆ ಪ್ರಕರಣ?
ತಜ್ಞರ ಪ್ರಕಾರ, ಭೂತಾನ್ ಮತ್ತು ಇತರೆ ದೇಶಗಳಿಂದ ಕಡಿಮೆ ದರದಲ್ಲಿ ಕಾರು ಖರೀದಿಸಿ, ಅವುಗಳನ್ನು ಹಿಮಾಚಲ ಪ್ರದೇಶದ ನಕಲಿ ವಿಳಾಸಗಳಲ್ಲಿ ನೊಂದಾಯಿಸಿ, ನಂತರ ಕೇರಳದಲ್ಲಿ ಸೆಲೆಬ್ರಿಟಿಗಳಿಗೆ ಅಥವಾ ಉದ್ಯಮಿಗಳಿಗೆ ಮಾರಾಟ ಮಾಡುವ ಅಕ್ರಮ ಜಾಲ ಪ್ರಬಲವಾಗಿದೆ.
ಸ್ಟಾರ್‌ಗಳ ಕಾರು ಕ್ರೇಜ್:
ದುಲ್ಕರ್ ಸಲ್ಮಾನ್:
- 40ಕ್ಕೂ ಹೆಚ್ಚು ಕಾರುಗಳ ಸಂಗ್ರಹ
- ಬಿಎಂಡಬ್ಲ್ಯೂ, ಮರ್ಸಿಡಿಸ್, ಪಿಕಪ್ ಟ್ರಕ್ಸ್, ಸೂಪರ್ ಕಾರುಗಳು
ಪೃಥ್ವಿರಾಜ್ ಸುಕುಮಾರನ್:
- ಆಸ್ಟಿನ್ ಮಾರ್ಟಿನ್ ಸೇರಿದಂತೆ ಹಲವು ಸ್ಪೋರ್ಟ್ಸ್ ಕಾರುಗಳು
- ಐಷಾರಾಮಿ SUV ಕಾರುಗಳ ಶ್ರೇಣಿಯೊಂದಿಗೆ ವ್ಯಾಪಕ ಸಂಗ್ರಹ
ಅಧಿಕಾರಿಗಳ ಮಾತು:
“ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಯಾವುದೇ ತೆರಿಗೆ ವಂಚನೆ ಅಥವಾ ಅಕ್ರಮ ಆಮದು ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” – ಕಸ್ಟಮ್ಸ್ ಮೂಲಗಳು.
For More Updates Join our WhatsApp Group :
