ರಾಜ್ಯದ ‘ಭೂರಹಿತ SC ಸಮುದಾಯ’ದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್: ಜಮೀನಿಗಾಗಿ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿಯವರಿಗೆ ಗುಡ್ ನ್ಯೂಸ್ ಎನ್ನುವಂತೆ ಭೂ ಚೇತನ ಯೋಜನೆಯಡಿ 25 ಲಕ್ಷದ ವರೆಗೆ ಶೇ.6ರ ಬಡ್ಡಿದರದಲ್ಲಿ ಸಹಾಯಧನದ ಮೂಲಕ ಜಮೀನು ಖರೀದಿಸಿ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ಹಂಚಿಕೊಂಡಿದ್ದು, ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದಿದೆ.

ಪರಿಶಿಷ್ಟ ಜಾತಿಯವರಿಗಾಗಿ ಭೂ ಒಡೆತನ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಕೃಷಿ ಜಮೀನು ಖರೀದಿಸಿ ನೀಡಲಾಗುವುದು ಎಂದಿದೆ.

20 ರಿಂದ 25 ಲಕ್ಷದವರೆಗೆ ಘಟಕದ ವೆಚ್ಚವಾಗಿದೆ. ಇದಕ್ಕಾಗಿ ಶೇ.50ರಷ್ಟು ಸಹಾಯಧನ ನೀಡಲಾಗುತ್ತದೆ. ಶೇ.50ರಷ್ಟು ಸಹಾಯ ಧನಕ್ಕೆ ಶೇ.6ರ ಬಡ್ಡಿದರವಾಗಿದೆ ಎಂದಿದೆ.

ಅರ್ಜಿ ಸಲ್ಲಿಸಲು ಅಕ್ಟೋಬರ್.10, 2024 ಕೊನೆ ದಿನವಾಗಿದೆ. ಆಸಕ್ತ ಪರಿಶಿಷ್ಟ ಜಾತಿಯವರು ಸಮೀಪದ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9482300400ಗೆ ಕರೆ ಮಾಡಿ ಪಡೆಯಬಹುದಾಗಿದೆ ಎಂದಿದೆ.

Leave a Reply

Your email address will not be published. Required fields are marked *