900 ವರ್ಷಗಳಷ್ಟು ಹಳೆಯದಾದ ಹೊಯ್ಸಳೇಶ್ವರ ಹಾಗೂ ಚೆನ್ನಕೇಶವ ದೇವಾಲಯದಲ್ಲಿ ಕೆತ್ತಲಾದ ಶಿಲ್ಪಗಳು ಒಂದೊಂದು ಕಥೆಯನ್ನು ಹೇಳುತ್ತವೆ. ಹೌದು, ಹೊಯ್ಸಳ ದೇವಸ್ಥಾನವು ಶೈವ ಸ್ಮಾರಕವಾಗಿದ್ದರೂ ವೈಷ್ಣವ, ಹಿಂದೂ ಧರ್ಮದ ಸಂಪ್ರದಾಯ ಹಾಗೂ ಜೈನ ಧರ್ಮದ ಚಿತ್ರಗಳನ್ನು ಒಳಗೊಂಡಿರುವುದು ವಿಶೇಷ. ಇತಿಹಾಸ ಕೆದಕುತ್ತಾ ಹೋದಂತೆಲ್ಲಾ ನಾವೇ ಆ ಕಾಲಘಟ್ಟದಲ್ಲಿ ಇದ್ದೇವೆ ಎಂದೆನಿಸುವ ವಿಡಿಯೋವೊಂದು ವೈರಲ್ ಆಗಿದೆ.
ನಮ್ಮ ದೇಶದಲ್ಲಿ ಪುರಾತನವಾದ ದೇವಾಲಯಗಳು ಸಾಕಷ್ಟು ಇವೆ. ಆ ಕಾಲದಲ್ಲಿ ನಿರ್ಮಾಣ ಮಾಡುತ್ತಿದ್ದ ಕೋಟೆಗಳು ಸೇರಿದಂತೆ ದೇವಾಲಯಗಳೆಲ್ಲಾ ವಿಶೇಷತೆಯಿಂದ ಕೂಡಿದ್ದವು. ಇದಕ್ಕೆ ಸಾಕ್ಷಿಯೆನ್ನುವಂತಿದೆ ಶಿವನಿಗೆ ಸಮರ್ಪಿತವಾಗಿರುವ ಈ ಹೊಯ್ಸಳೇಶ್ವರ ದೇವಾಲಯ .ಟೂರಿಸ್ಟ್ ಗೈಡ್ ಒಬ್ಬರು ಈ ಐತಿಹಾಸಿಕ ತಾಣಕ್ಕೆ ಭೇಟಿ ನೀಡಿದ ಪ್ರವಾಸಿಗರಿಗೆ ಇಲ್ಲಿನ ದೇವಾಲಯದಲ್ಲಿನ ಶಿಲ್ಪಗಳು, ಕೆತ್ತನೆಯ ವಿಶೇಷತೆಯನ್ನು ವಿವರಿಸಿದ್ದಾರೆ. ಇಲ್ಲಿನ ಶಿಲ್ಪಗಳು ಅಮೋಘವಾದುದು. ದೇವಾಲಯವನ್ನು ಬಳಪದ ಕಲ್ಲುಗಳ ಬಳಕೆಯಿಂದ ನಿರ್ಮಾಣ ಮಾಡಲಾಗಿದೆ. ಕಲ್ಲಿನ ಈ ವಿಶೇಷ ಗುಣದಿಂದಲೇ ಹೊಯ್ಸಳರ ದೇವಾಲಯಗಳಲ್ಲಿ ಸೂಕ್ಷ್ಮ ಕಸೂರಿ ಕೆತ್ತನೆಯು ಬಹಳ ಆಕರ್ಷಕ ಎಂದಿದ್ದಾರೆ. ಈ ಪುರಾಣದ ಕಥೆಗಳು ಹಾಗೂ ಇತಿಹಾಸವನ್ನು ತೆರೆದಿಡುವ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Dr. Ayur Harish AL’s Creativity ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಟೂರಿಸ್ಟ್ ಗೈಡ್ ಒಬ್ಬರು, ಹೊಯ್ಸಳೇಶ್ವರ ದೇವಾಲಯದ ಶಿಲ್ಪ ಕಲೆಗಳು ಹಾಗೂ ಕೆತ್ತನೆಯನ್ನು ಬಹಳ ಸೊಗಸಾಗಿ ವಿವರಿಸಲಾಗಿದೆ. ಈ ವಿಡಿಯೋದಲ್ಲಿ ಪ್ರತಿಯೊಂದು ಕೆತ್ತನೆಯ ಹಿಂದಿನ ವಿಶೇಷತೆ, ಸೂಕ್ಷ್ಮವಾದ ಕಸೂರಿಗೆ ಒತ್ತು ನೀಡಲಾದ ರೀತಿ, ಆಭರಣಗಳ ವಿನ್ಯಾಸದಲ್ಲಿ ಕಲಾತ್ಮಕತೆ, ಹಿಂದೂ ಸಂಬಂಧಿತ ದಂತಕಥೆಗಳನ್ನು ಚಿತ್ರಿಸಿರುವುದನ್ನು ಕಾಣಬಹುದು. ರಾಮಾಯಣ, ಮಹಾಭಾರತ ಸೇರಿದಂತೆ ಪುರಾಣ ಪ್ರಸಿದ್ಧ ಕಥೆಗಳನ್ನು ಹೇಳುವ ಶಿಲ್ಪಗಳ ಆಕರ್ಷಕ ಕೆತ್ತನೆಗಳನ್ನು ನೀವಿಲ್ಲಿ ನೋಡಬಹುದಾಗಿದೆ. ದೇವಾಲಯದ ಮುಂದೆ ದೊಡ್ಡ ನಂದಿ ಮೂರ್ತಿಯುಳ್ಳ ನಂದಿಮಂಟಪ ಹಾಗೂ ಅದರ ಅಲಂಕಾರವನ್ನು ಸೂಕ್ಷ್ಮವಾಗಿ ವಿವರಿಸಿರುವುದನ್ನು ನೋಡಬಹುದು.
ಈ ವಿಡಿಯೋ ಇದುವರೆಗೆ ಹದಿನೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಈ ವಿಗ್ರಹಗಳನ್ನು ಕೆತ್ತಿದ ಶಿಲ್ಪಿಗಳಿಗೆ ನನ್ನದೊಂದು ನಮನಗಳು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಗುರುಗಳೇ ನೀವು ಹೇಳುವ ಇತಿಹಾಸ ಕೇಳ್ತಾ ಇದ್ರೆ ನಾವೇ ಆ ಕಾಲಘಟ್ಟದಲ್ಲಿ ಜೀವಿಸ್ತಾ ಇದ್ರಿ ಅನ್ಸುತ್ತೆ ಎಂದು ಹೇಳಿದ್ದಾರೆ. ನಮ್ಮ ಭಾರತೀಯ ಪರಂಪರೆಯ ತರಹ ಪ್ರಪಂಚದ ಯಾವ ಮೂಲೆಯಲ್ಲೂ ಇಲ್ಲ.. ಕಲ್ಲಿನಿಂದ ಕೆತ್ತಲಾದ ಈ ವಿಗ್ರಹಗಳು. ಪ್ರಪಂಚದ ಯಾವ ಭಾಗದಲ್ಲಿ ಈ ರೀತಿ ಕೆತ್ತನೆ ನೋಡೋಕೆ ಸಿಗುತ್ತೆ.. ನಮ್ಮ ಅನಾದಿ ಕಾಲದ ಶಿಲ್ಪಾ ಕಾಲರು ಎಂತ ನಿಪುಣರು ಅನ್ನೋದು ಇದನೆಲ್ಲ ನೋಡಿದಾಗ ಗೊತ್ತಾಗುತ್ತೆ ಎಂದು ಇನ್ನೊಬ್ಬ ಬಳಕೆದಾರ ಕಾಮೆಂಟ್ ನಲ್ಲಿ ಹೇಳಿದ್ದಾರೆ.
For More Updates Join our WhatsApp Group :

