ದಕ್ಷಿಣ ಕನ್ನಡ: ತುಂಬಿ ಹರಿಯುತ್ತಿರುವ ನದಿಗಳ ದೃಶ್ಯ ನೋಡಲು ಸುಂದರ. ಈ ಬಾರಿ ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿರುವುದಿಂದ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ ಮತ್ತು ಜಲಾಶಯಗಳು ಭರ್ತಿಯಾಗಿವೆ.
ಮೈದುಂಬಿ ಹರಿಯುತ್ತಿರುವ ನೇತ್ರಾವತಿ ನದಿ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಸುರಿಯುವುದು ಮುಂದುವರಿದಿರುವುದರಿಂದ ನೇತ್ರಾವತಿ ಸೇರಿದಂತೆ ಜಿಲ್ಲೆಯ ಕುಮಾರಧಾರ, ಫಲ್ಗುಣಿ ಮತ್ತು ನಂದಿನಿ ನದಿಗಳು ತುಂಬಿ ಹರಿಯುತ್ತಿವೆ ಎಂದು ಹೇಳುತ್ತಾರೆ. ಜಿಲ್ಲಾಡಳಿತ ಇವತ್ತು ಯೆಲ್ಲೋ ಅಲರ್ಟ್ ಘೋಷಣೆ ಮಾಡಿ ಅಂಗನವಾಡಿ ಮತ್ತು ಪ್ರೌಢ ಶಾಲೆಗಳಿಗೆ ರಜೆ ನೀಡಿದೆ. ನಿನ್ನೆಯೂ ಮಳೆಯ ಕಾರಣ ಶಾಲೆಗಳು ಬಂದ್ ಆಗಿದ್ದವು.
For More Updates Join our WhatsApp Group :