ಕಾರ್ಮಿಕರ ಹಿತ ಕಾಯದ ಕಾರ್ಮಿಕ ಇಲಾಖೆ ವಿರುದ್ಧ ಸಿಡಿದೆದ್ದ ಕಾರ್ಮಿಕರು..!

ತುಮಕೂರು : ಕೂಲಿ ಕಾರ್ಮಿಕರ ಹಿತ ಕಾಯಬೇಕಾದಂತ ಕಾರ್ಮಿಕ ಇಲಾಖೆ ಕಾರ್ಮಿಕರಿಗೆ ವಿತರಿಸುವ ಶಾಲಾ ಕಿಟ್ ವಿಚಾರದಲ್ಲಿ ಫಲಾನುಭವಿ ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆದು ಸಾರ್ವಜನಿಕರ ಆಕ್ರೋಶದ ನಂತರ ಅಧಿಕಾರಿ ಕಾರ್ಮಿಕರಿಗೆ ಸ್ಪಂದಿಸಿ ಕಿಟ್ ವಿತರಣೆ ಮಾಡಿರುವ ಘಟನೆ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.

ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಸಲುವಾಗಿ ಸರ್ಕಾರ ಇತ್ತೀಚಿನ ದಿನಗಳಲ್ಲಿ ಕೋಟ್ಯಾಂತರ ರೂ ಅನುದಾನ ಬಿಡುಗಡೆ ಮಾಡಿ ಹಲವು ಯೋಜನೆಗಳನ್ನು ಜಾರಿಗೆಗೊಳಿಸುತ್ತಿದ್ದರು ಫಲಾನುಭವಿಗಳಿಗೆ ಹಂಚಿಕೆಯಲ್ಲಿ ಸಮರ್ಪಕವಾಗಿ ಹಂಚಿಕೆಯಾಗುತ್ತಿಲ್ಲ ಎಂದು ಫಲಾನುಭವಿಯೂಬ್ಬ ವಿದ್ಯಾರ್ಥಿ ಕಿಟ್ ವಿತರಣಾ ವಿಚಾರದಲ್ಲಿ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದ್ದರು.

ಕೊನೆಗೆ ಅಧಿಕಾರಿ ವಿದ್ಯಾರ್ಥಿ ಕಿಟ್ ಪೂರ್ಣ ಪ್ರಮಾಣವಾಗಿ ಹಂಚಿಕೆಯಾಗಿದೆ ಎಂದು ಸಮಜಾಯಿಸಿ ನೀಡಿದ ನಂತರ ಕಾರ್ಮಿಕರ ವಿತರಣೆಯ ಲಿಸ್ಟ್ ನೀಡಿ ಎಂದು ಕಚೇರಿಯ ಮುಂದೆ ಆಕ್ರೋಶ ವ್ಯಕ್ತಪಡಿಸಿದಾಗಲ್ಲೂ ಅಧಿಕಾರಿ ಶ್ರೀಕಾಂತ್ ಫಲಾನುಭವಿ ಹಾಗೂ ಕಾರ್ಮಿಕ ಇಲಾಖೆಯಲ್ಲಿ ನಡೆಯುತ್ತಿದ್ದ ಗದ್ದಲ ನೋಡಿ ಸುದ್ದಿ ಮಾಡಲು ಬಂದ ವರದಿಗಾರರ ಮೇಲೂ ಮುಗಿಬಿದ್ದು ಸುದ್ದಿ ಮಾಡಿದರೆ ಸರಿ ಇರೋದಿಲ್ಲ ಎಂದು ಧಮ್ಕಿ ಹಾಕಿದ್ದರು. ಫಲಾನುಭವಿಯನ್ನ ಮುಂದೆ ನಿನಗೆ ಕೆಲವೊಂದು ಯೋಜನೆಗಳ ಉಪಯೋಗ ಬೇಕೇ ಬೇಡವೇ ಎಂದು ಬೆದರಿಕೆ ಹಾಕಿ ಪ್ರಗತಿ ಟಿವಿ ಸುದ್ದಿ ಬಿತ್ತರದ ನಂತರ ತರಾತುರಿಯಲ್ಲಿ ಕರೆಸಿ ಹಂಚಿಕೆ ಮಾಡಲಾಗಿದೆ.

ಕಾರ್ಮಿಕ ಇಲಾಖೆಯ ಮುಂದೆ ಇಲಾಖಾಧಿಕಾರಿ ಹಾಗೂ ಫಲಾನುಭವಿಯ ವಾಗ್ವಾದ ಕಂಡು  ದಲಿತ ಮುಖಂಡ ಚಿಕ್ಕರಂಗಯ್ಯ ಅಧಿಕಾರಿಯ ನಡುವಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *