ಶಿವಮೊಗ್ಗ,: ಕೈಲಾಗದವನು ಮೈಯೆಲ್ಲ ಪರಚಿಕೊಂಡನಂತೆ, ಆದರೆ ಶಿವಮೊಗ್ಗದಲ್ಲಿ ತಮಿಳುನಾಡು ಮೂಲದ ಯುವಕನೊಬ್ಬ ಮೈಯೆಲ್ಲ ಕುಯ್ದುಕೊಂಡಿದ್ದಾನೆ! ವಿಷಯವೇನೆಂದರೆ ಇಲ್ಲಿ ಮಾತಾಡುತ್ತಿರುವ ಯುವತಿ ಮತ್ತು ದೇಹವನ್ನು ಅಲ್ಲಲ್ಲಿ ಕುಯ್ದುಕೊಂಡಿರುವ ಯುವಕ ಎರಡು ವರ್ಷಗಳಿಂದ ಲವ್ ಮಾಡುತ್ತಿದ್ದಾರೆ ಆಥವಾ ಮಾಡುತ್ತಿದ್ದರು, ಈಗ ಇಲ್ಲ.
ಯುವತಿ ಹೇಳುವ ಪಪ್ರಕಾರ ಅವನಿಗೆ ಕುಡಿತ ಗಾಂಜಾದ ದುಶ್ಚಟಗಳಿವೆ. ಇವನು ತನ್ನನ್ನು ಸಾಕಲಾರ ಮತ್ತು ನೆಮ್ಮದಿಯಿಂದ ಬದುಕಲು ಬಿಡಲಾರ ಅಂತ ಮನವರಿಕೆ ಮಾಡಿಕೊಂಡಿರುವ ಯುವತಿ ಬ್ರೇಕಪ್ ಮಾಡಿಕೊಂಡು, ನಿನ್ನ ದಾರಿ ನೀನು ನೋಡ್ಕೋ ಅಂದಿದ್ದಾಳೆ. ರೊಚ್ಚಿಗೆದ್ದ ಯುವಕ ನಿನ್ನೆ ರಾತ್ರಿ ಹರಿತವಾದ ಆಯುಧವೊಂದನ್ನು ಈಕೆ ಚುಚ್ಚಲು ಬಂದಿದ್ದಾನೆ, ನೆರೆಹೊರೆಯವರು ಬುದ್ಧಿಹೇಳಿದ ನಂತರ ವಾಪಸ್ಸು ಹೋದವನು ಬೆಳಗ್ಗೆ ಯುವತಿಯ ಮನೆಮುಂದೆ ಪುನಃ ಬಂದು ಈ ಬಾರಿ ತಾನೇ ಮೈಯೆಲ್ಲ ಕುಯ್ದುಕೊಂಡು ಆಸ್ಪತ್ರೆ ಸೇರಿದ್ದಾನೆ.
For More Updates Join our WhatsApp Group :
