ಭಕ್ತರ ಸಂಖ್ಯೆಯೂ ಮಳೆಗೂ ಕಸದ ಉದ್ರೇಕ.
ಸವದತ್ತಿ : ಉತ್ತರ ಕರ್ನಾಟಕದ ಶಕ್ತಿ ದೇವತೆ ಸವದತ್ತಿ ರೇಣುಕಾ ಯಲ್ಲಮ್ಮನ ಗುಡ್ಡದಲ್ಲಿ ಇತ್ತೀಚೆಗೆ ಸುರಿದ ಮಳೆ ಹಾಗೂ ಭಕ್ತರ ಅತಿಯಾದ ಜನದಟ್ಟಣೆಯಿಂದಾಗಿ ಪರಿಸರ ಮಲಿನಗೊಂಡಿದ್ದು, ಭಕ್ತರು ಹಾಗೂ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ದೇವಿಯ ಸನ್ನಿಧಾನ ಇಂದು ಕಸ, ಪ್ಲಾಸ್ಟಿಕ್ ಮತ್ತು ಹಳೆಯ ಬಟ್ಟೆಗಳ ರಾಶಿಯಿಂದ ತುಂಬಿ ಹೋಗಿದೆ.
ಕಾಯಿಲೆಗಳು ವಾಸಿಯಾಗಲಿ ಅಥವಾ ಹರಕೆ ತೀರಲಿ ಎಂದು ಭಕ್ತರು ತಮ್ಮ ಹಳೆಯ ಬಟ್ಟೆಗಳನ್ನು ಗುಡ್ಡದ ಮೇಲೆ ಬಿಟ್ಟು ಹೋಗುವ ಪದ್ಧತಿ ಇದೆ. ಈ ಬಟ್ಟೆಗಳು ಇಂದು ಬೆಟ್ಟದಾದ್ಯಂತ ಕಸದಂತೆ ಬಿದ್ದಿವೆ. ಕುಡಿಯುವ ನೀರಿನ ಬಾಟಲಿಗಳು ಮತ್ತು ತಿಂಡಿ ತಿನಿಸುಗಳ ಪ್ಲಾಸ್ಟಿಕ್ ಕವರ್ಗಳನ್ನು ಎಲ್ಲಿ ಬೇಕೆಂದರೆ ಅಲ್ಲಿ ಎಸೆಯುತ್ತಿರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.
ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಕಾಣಿಕೆ ಸಂಗ್ರಹವಾಗುತ್ತಿದ್ದರೂ, ಕಸ ವಿಲೇವಾರಿಗೆ ಶಾಶ್ವತ ವ್ಯವಸ್ಥೆ ಇಲ್ಲ ಎಂಬುದು ಭಕ್ತರ ದೂರಿದ್ದಾರೆ. ಹತ್ತಾರು ಟನ್ ಕಸ ಪ್ರತಿದಿನ ಉತ್ಪತ್ತಿಯಾಗುತ್ತಿದ್ದರೂ, ಅದನ್ನು ಸರಿಯಾದ ಸಮಯಕ್ಕೆ ವಿಲೇವಾರಿ ಮಾಡಲು ಸಮಿತಿಯು ವಿಫಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸವದತ್ತಿ ಅಭಿವೃದ್ಧಿಗೆ 100 ರಿಂದ 200 ಕೋಟಿ ರೂ. ಅನುದಾನ ಘೋಷಿಸಿವೆ.
For More Updates Join our WhatsApp Group :




