“ವಿಜಯೇಂದ್ರ ತೀರ್ಮಾನಕ್ಕೆ ಪಕ್ಷದೊಳಗೆ ಬಿಸಿ”: ಧರ್ಮಸ್ಥಳ ಚಲೋ ನಂತರ ಬಿಜೆಪಿ ಶಿಬಿರದಲ್ಲಿ ಭಿನ್ನಮತದ ಸೆಳೆತ.

"ವಿಜಯೇಂದ್ರ ತೀರ್ಮಾನಕ್ಕೆ ಪಕ್ಷದೊಳಗೆ ಬಿಸಿ": ಧರ್ಮಸ್ಥಳ ಚಲೋ ನಂತರ ಬಿಜೆಪಿ ಶಿಬಿರದಲ್ಲಿ ಭಿನ್ನಮತದ ಸೆಳೆತ.

ಬೆಂಗಳೂರು – ಧರ್ಮಸ್ಥಳದಲ್ಲಿ ಬಿಜೆಪಿ ಆಯೋಜಿಸಿದ್ದ “ಧರ್ಮಸ್ಥಳ ಚಲೋ” ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾದರೂ, ಅದರ ಬಳಿಕದ ರಾಜಕೀಯ ನಡೆಯೊಂದು ಇದೀಗ ಬಿಜೆಪಿಯೊಳಗಿನ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೊನೆಯ ಕ್ಷಣದಲ್ಲಿ ಸೌಜನ್ಯ ನಿವಾಸಕ್ಕೆ ನೀಡಿದ ಅಪ್ರತೀಕ್ಷಿತ ಭೇಟಿ, ಪಕ್ಷದ ಅನೇಕ ನಾಯಕರ ಅಚ್ಚರಿ ಮತ್ತು ಆಕ್ರೋಶಕ್ಕೆ ಎಡೆ ಮಾಡಿದೆ.

ಅಸಮಾಧಾನದ ಮೂಲ ಕಾರಣಗಳು

  • ವಿಜಯೇಂದ್ರ ಅವರು ಕೇವಲ 15 ನಿಮಿಷಗಳ ಮುನ್ನ ಸೌಜನ್ಯ ಮನೆ ಭೇಟಿಯ ನಿರ್ಧಾರವನ್ನು ತೆಗೆದುಕೊಂಡರು
  • ಇತರ ಪ್ರಮುಖ ನಾಯಕರು ಈ ವೇಳೆಗೆ ಧರ್ಮಸ್ಥಳದಿಂದ ಹಿಂದಿರುಗುತ್ತಿದ್ದ ಸಂದರ್ಭ
  • ಈ ಭೇಟಿಯ ಕುರಿತು ಪಕ್ಷದ ಉನ್ನತ ಮಟ್ಟದ ನಾಯಕರಿಗೆ ಪೂರ್ವ ಮಾಹಿತಿ ನೀಡದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಆಕ್ರೋಶ
  • ಮಾಜಿ ಸಿಎಂ ಡಿವಿ ಸದಾನಂದ ಗೌಡ, ನಳೀನ್ ಕುಮಾರ್ ಕಟೀಲ್, ಸುನೀಲ್ ಕುಮಾರ್ ಸೇರಿ ಹಲವಾರು ಕರಾವಳಿ ಮೂಲದ ನಾಯಕರಿಗೆ ಕಾರ್ಯಕ್ರಮದಲ್ಲಿ ಭಾಷಣಕ್ಕೂ ಅವಕಾಶ ನೀಡಲಾಗಿಲ್ಲ

ಸೌಜನ್ಯ ಮನೆ ಭೇಟಿರಾಜಕೀಯ ಸರಣಿ ಪ್ರಶ್ನೆಗಳು

ವಿಜಯೇಂದ್ರ ಸೌಜನ್ಯ ತಾಯಿ ಕುಸುಮಾವತಿಗೆ ಭೇಟಿ ನೀಡಿ, ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದರೆ, ಕಾನೂನು ನೆರವು ನೀಡುವುದಾಗಿ ಭರವಸೆ ನೀಡಿದ್ದು, ಪಕ್ಷದಲ್ಲಿ ಆಂತರಿಕವಾಗಿ ಪ್ರಶ್ನೆಗಳಿಗೆ ಕಾರಣವಾಗಿದೆ.

ಸಾಮೂಹಿಕ ಸಮಾವೇಶದ ಬಳಿಕ ಕುಟುಂಬ ಭೇಟಿಗೆ ಹೋಗಬೇಕಿತ್ತೇ?” ಎಂಬ ಪ್ರಶ್ನೆ ಇದೀಗ ನಾಯಕರನ್ನೇ ಬೇಧಿಸಿದೆ.

ಪಕ್ಷದೊಳಗಿನ ನಾಯಕರ ಬದಿಗೆ ತಿರುವು:

  • ಪ್ರಹ್ಲಾದ್ ಜೋಶಿ, ಆರ್. ಅಶೋಕ್, ಡಿವಿ ಸದಾನಂದ ಗೌಡ, ನಳೀನ್ ಕುಮಾರ್ ಕಟೀಲ್ ಮುಂತಾದವರು ಈ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಂತಾಗಿದ್ದು,
  • ಹಲವರು ಧರ್ಮಸ್ಥಳದಿಂದಲೇ ಪ್ರತ್ಯೇಕವಾಗಿ ಬೆಂಗಳೂರು ಹಾದಿ ಹಿಡಿದಿದ್ದು, ಈ ಘಟನೆಯ ಪರಿಣಾಮವೆಂದು ಪಕ್ಷದ ಮೂಲಗಳು ತಿಳಿಸುತ್ತಿವೆ

ಕಾಂಗ್ರೆಸ್ ಕಿಡಿ – ‘ಧರ್ಮಸ್ಥಳ ಚಲೋಗೆ ಹಣ ಎಲ್ಲಿ ಇದ್ದು?’

  • ಸಿಎಂ ಸಿದ್ದರಾಮಯ್ಯ: “ಇಷ್ಟು ವೆಚ್ಚದ ಚಲೋ ಯಾತ್ರೆಗೆ ಹಣ ಎಲ್ಲಿ ಇದ್ದು?” ಎಂದು ಪ್ರಶ್ನೆ
  • ಗೃಹ ಸಚಿವ ಡಾ. ಜಿ. ಪರಮೇಶ್ವರ್: “ಸೌಜನ್ಯ ಪ್ರಕರಣವನ್ನು NIAಗೆ ಒಪ್ಪಿಸುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ
  • ಸಚಿವ ಪ್ರಿಯಾಂಕ್ ಖರ್ಗೆ: “ದಾಖಲೆ ಇವೆಯಂತೆ ಬಿಜೆಪಿ ಹೇಳ್ತಾ ಇದ್ದರೆ ನ್ಯಾಯ ಕೊಡಿಸಿ” ಎಂದು ಕಟೀಲ್ ಹೇಳಿಕೆಗೆ ಪ್ರತಿಕ್ರಿಯೆ

ಹೆಚ್.ಡಿ. ರಂಗನಾಥ್ ವಾಗ್ದಾಳಿ:

“ಬಿಜೆಪಿ ಈ ಪ್ರಕರಣವನ್ನು ರಾಜಕೀಯ ಗಿಮಿಕ್‌ಗಾಗಿ ಬಳಸುತ್ತಿದೆ. ಕುಣಿಗಲ್ನಿಂದ ಧರ್ಮಸ್ಥಳಕ್ಕೆ ನೂರಾರು ಕಾರುಗಳ ಮೂಲಕ ಓಡಾಡುವ ಜನರು ಇನ್ನು ನ್ಯಾಯದ ಮಾತು ಮಾಡಬಾರದು” ಎಂದು ತಿರುಗೇಟು.

For More Updates Join our WhatsApp Group :https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *