ಈ ಟೋಲ್ ಪ್ಲಾಜಾದಲ್ಲಿ ಫಾಸ್ಟ್‌ಟ್ಯಾಗ್ ಇಲ್ಲ!

ಈ ಟೋಲ್ ಪ್ಲಾಜಾದಲ್ಲಿ ಫಾಸ್ಟ್‌ಟ್ಯಾಗ್ ಇಲ್ಲ!

ಸಚಿವರು, ಸಂಸದರಿಗೆ ಹಣ ಸಂದಾಯ: ಬಿಜೆಪಿ ಆರೋಪ

ಬಳ್ಳಾರಿ : ಕರ್ನಾಟಕದ ಯಾವುದೇ ಭಾಗಕ್ಕೆ ಹೋದರೂ ಟೋಲ್‌ಗಳಲ್ಲಿ ಫಾಸ್ಟ್​ಟ್ಯಾಗ್ ಪಾವತಿ ವ್ಯವಸ್ಥೆ ಇರುವುದನ್ನು ನೋಡಿರುತ್ತೇವೆ. ಆದರೆ, ಬಳ್ಳಾರಿ  ಜಿಲ್ಲೆ ಸಂಡೂರು ಪಟ್ಟಣದ ಹೊಸಪೇಟೆ ರಸ್ತೆ ಬಳಿ ಇರುವ ಟೋಲ್ ಪ್ಲಾಜಾದಲ್ಲಿ ಫಾಸ್ಟ್​ಟ್ಯಾಗ್ ಪಾವತಿ ವ್ಯವಸ್ಥೆಯೇ ಇಲ್ಲ. ಇಲ್ಲಿ ಕೇವಲ ನಗದು ಹಣದ ಮೂಲಕ ಮಾತ್ರ ವ್ಯವಹಾರ ನಡೆಯುತ್ತದೆ. ಲೆಕ್ಕವಿಲ್ಲ, ಪತ್ರವಿಲ್ಲ. ಈ ಟೋಲ್ ಪ್ಲಾಜಾದಲ್ಲಿ ಪ್ರತಿನಿತ್ಯ 10 ರಿಂದ 15 ಲಕ್ಷ ರೂ. ಸಂಗ್ರಹ ಆಗುವ ಅಂದಾಜಿದೆ. ಆದರೆ, ಸರ್ಕಾರಕ್ಕೆ ಕೇವಲ 1 ರಿಂದ 2 ಲಕ್ಷ ರೂ. ಮಾತ್ರ ಪಾವತಿ ಮಾಡಲಾಗುತ್ತಿದೆ.

ಸಚಿವರು, ಸಂಸದರಿಗೆ ಹಣ ಸಂದಾಯ: ಬಿಜೆಪಿ ಆರೋಪ

ಫಾಸ್ಟ್​ಟ್ಯಾಗ್ ಇಲ್ಲದ ಈ ಟೋಲ್ ಮೂಲಕ ಹಣ ಲೂಟಿ ಮಾಡಲಾಗುತ್ತಿದೆ ಎಂಬ ಆರೋಪ ಈಗ ಕೇಳಿಬಂದಿದೆ. ಈ ಟೋಲ್‌ ಪ್ಲಾಜಾದಿಂದ ಸಚಿವ ಸಂತೋಷ ಲಾಡ್, ಸಂಸದ ಇ. ತುಕಾರಾಂಗೆ ಹಣ ಹೋಗುತ್ತಿದೆ ಎಂದು ಬಿಜೆಪಿ ಎಸ್​​​ಟಿ ಮೋರ್ಚಾ ರಾಜ್ಯಾಧಕ್ಷ ಬಂಗಾರು ಹನುಮಂತ ಆರೋಪಿಸಿದ್ದಾರೆ.

ಈ ಟೋಲ್ KRDCL ಸಂಸ್ಥೆ ವ್ಯಾಪ್ತಿಗೆ ಬರುತ್ತದೆ. ಅಲ್ಲಿ ನಿತ್ಯ ಓಡಾಡುವ ಸಾವಿರಾರು ಗಣಿ ಲಾರಿಗಳಿಂದ ಟೋಲ್ ಸಂಗ್ರಹ ಮಾಡಲಾಗುತ್ತದೆ. ಹೀಗೆ ಲಕ್ಷಾಂತರ ರೂಪಾಯಿ ಹಣ ಸಂಗ್ರಹ ಆಗುತ್ತದೆ. ಆದರೆ, ಸರ್ಕಾರಕ್ಕೆ ಕೋಡುವುದು ಮಾತ್ರ ಕೇವಲ 1 ಲಕ್ಷ ರೂ.ನಿಂದ 1.5 ಲಕ್ಷ ರೂ. ಮಾತ್ರ. ಉಳಿದ ಹಣ ಸಚಿವ ಸಂತೋಷ ಲಾಡ್, ಸಂಸದ ಈ ತುಕಾರಾಂ ಅವರ ಜೇಬಿಗೆ ಹೋಗುತ್ತದೆ ಎಂದು ಬಂಗಾರು ಹನುಮಂತ ಗಂಭೀರ ಆರೋಪ ಮಾಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *