ಕೈಯಲ್ಲಿ ಒಂದು ಉದ್ಯೋಗವಿದ್ರೆ ಮರ್ಯಾದೆ. ಆದ್ರೆ ಕಚೇರಿಯಲ್ಲಿರುವ ಒತ್ತಡಭರಿತ ವಾತಾವರಣದಿಂದ ಜಾಬ್ ರಿಸೈನ್ ಮಾಡಿ ಹೊರ ನಡೆಯುವ ಎಂದೆನಿಸುತ್ತದೆ. ಇಲ್ಲೊಬ್ಬ ಉದ್ಯೋಗಿಯೂ ಮ್ಯಾನೇಜರ್ ನಡೆದುಕೊಂಡ ರೀತಿಗೆ ಕೋಪಗೊಂಡು ರಾಜೀನಾಮೆ ನೀಡಿದ್ದಾರೆ. ಕೆಲಸದ ಸ್ಥಳದಲ್ಲಿ ತನಗಾದ ಕಹಿ ಅನುಭವದೊಂದಿಗೆ ಯಾಕೆ ಈ ನಿರ್ಧಾರ ತೆಗೆದುಕೊಂಡೆ ಎಂದು ವಿವರಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.
ಮ್ಯಾನೇಜರ್ ವರ್ತನೆಯನ್ನು ಕಟುವಾಗಿ ಟೀಕಿಸಿದ ಉದ್ಯೋಗಿ
R/ Indianworkplace ಹೆಸರಿನ ರೆಡ್ಡಿಟ್ ಖಾತೆಯಲ್ಲಿ ನಾನು ಕೊನೆಗೂ ನನ್ನ ವಿಷಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದೆ. ಈಗ ನನ್ನ ಮ್ಯಾನೇಜರ್ ಇನ್ನು ಮುಂದೆಂದೂ ಇಂತಹ ಕೆಲಸ ಸಿಗುವುದಿಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಪೋಸ್ಟ್‌ನಲ್ಲಿ ಉದ್ಯೋಗಿಯೂ, ನನಗೆ 23 ವರ್ಷ. ನಾನು ಫರಿದಾಬಾದ್‌ನಲ್ಲಿರುವ ಈ ಕಂಪನಿಯಲ್ಲಿ ಸ್ವಲ್ಪ ಸಮಯದಿಂದ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಸಂಬಳ ಯಾವಾಗಲೂ ಸಮಯಕ್ಕೆ ಸರಿಯಾಗಿರುತ್ತಿತ್ತು, ಕೆಲಸದ ವಾತಾವರಣವೇ ಸರಿಯಿಲ್ಲ. ನನ್ನ ಡಿಪಾರ್ಟ್ಮೆಂಟ್‌ನಲ್ಲಿ ನಾನು ಒಬ್ಬನೇ ಉದ್ಯೋಗಿ. ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಇರುವುದಿಲ್ಲ. ಕೆಲವು ಬಾರಿ ರಾಶಿ ರಾಶಿ ಕೆಲಸಗಳು ಇರುತ್ತವೆ. ಇನ್ನು ಕೆಲವೊಮ್ಮೆ ಕೆಲಸವಿಲ್ಲದೇ ಫ್ರೀಯಾಗಿರುತ್ತೇನೆ. ನಾನು ಈ ಹಿಂದೆ ಒಂದು ಅಥವಾ ಎರಡು ದಿನ ವರ್ಕ್ ಫ್ರಮ್ ಹೋಮ್ ಮಾಡಿದ್ದೇನೆ. ನನ್ನ ಮ್ಯಾನೇಜರ್ ಕೆಲಸ ಮುಗಿಸಿ, ರಜೆ ತೆಗೆದುಕೊಳ್ಳಿ ಎಂದು ಹೇಳುತ್ತಿದ್ದರು. ಇನ್ನು ಕೆಲವೊಮ್ಮೆ ನಾನು ಲಾಗಿನ್ ಆಗಿದ್ದರೂ, ಕರೆಗಳಲ್ಲಿ ಲಭ್ಯವಿದ್ದರೂ ಮತ್ತು ನನ್ನ ಟಾಸ್ಕ್ ಶೀಟ್ ಖಾಲಿಯಾಗಿದೆ ಎಂದು ಹೇಳಿದ್ದರೂ ಕೆಲಸ ಮುಗಿದಿಲ್ಲ ಎಂದು ಹೇಳುತ್ತಿದ್ದರು ಎಂದು ಬಾಸ್ ವರ್ತನೆಯ ಬಗ್ಗೆ ಉಲ್ಲೇಖಿಸಿದ್ದಾರೆ.
For More Updates Join our WhatsApp Group :
