2026ರ ಜನವರಿ 1ರಿಂದ ನಿಷ್ಕ್ರಿಯಗೊಳ್ಳಲಿವೆ ಈ ಪ್ಯಾನ್ ಕಾರ್ಡ್​ಗಳು; ಕಾರಣವೇನು.

2026ರ ಜನವರಿ 1ರಿಂದ ನಿಷ್ಕ್ರಿಯಗೊಳ್ಳಲಿವೆ ಈ ಪ್ಯಾನ್ ಕಾರ್ಡ್​ಗಳು; ಕಾರಣವೇನು.

2025ರ ಅಕ್ಟೋಬರ್ 1ಕ್ಕೆ ಮುನ್ನ ಪ್ಯಾನ್ ಕಾರ್ಡ್​ಗಳನ್ನು ಪಡೆದವರು ಆಧಾರ್​ಗೆ ಅದನ್ನು ಲಿಂಕ್ ಮಾಡಲು 2025ರ ಡಿಸೆಂಬರ್ 31ರವರೆಗೂ ಕಾಲಾವಕಾಶ ಕೊಡಲಾಗಿದೆ. ಅಷ್ಟರಲ್ಲಿ ಲಿಂಕ್ ಮಾಡದೇ ಹೋದರೆ ಪ್ಯಾನ್ ಅನ್ನು ಅನೂರ್ಜಿತಗೊಳಿಸಲಾಗುತ್ತದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಹೇಳಿದೆ.

ಪ್ಯಾನ್ ಅಥವಾ ಪರ್ಮನೆಂಟ್ ಅಕೌಂಟ್ ನಂಬರ್ ಎಂಬುದು ಪ್ರತೀ ವ್ಯಕ್ತಿಗೂ ಆದಾಯ ತೆರಿಗೆ ಇಲಾಖೆ ನೀಡುವ ಗುರುತಿನ ಸಂಖ್ಯೆಯಾಗಿದೆ. ತೆರಿಗೆ ಉದ್ದೇಶದಿಂದ ಇದನ್ನು ನೀಡಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು, ದೊಡ್ಡ ಮೊತ್ತದ ಕ್ಯಾಷ್ ಡೆಪಾಸಿಟ್​ವರೆಗೆ ಅನೇಕ ಹಣಕಾಸು ಕಾರ್ಯಗಳಿಗೆ ಪ್ಯಾನ್ ಕಡ್ಡಾಯವಾಗಿರುತ್ತದೆ. ಹೀಗಾಗಿ, ವ್ಯಕ್ತಿಯ ಬಹುತೇಕ ಹಣಕಾಸು ಚಟುವಟಿಕೆಗಳು ಪ್ಯಾನ್ ಮೂಲಕ ಡಿಜಿಟಲ್ ಆಗಿ ದಾಖಲಾಗುತ್ತವೆ.

ಆಧಾರ್​ಗೆ ಪ್ಯಾನ್ ಲಿಂಕ್ ಆಗದೇ ಇದ್ದರೆ ಏನಾಗುತ್ತೆ?

  • ಆಧಾರ್​​ಗೆ ಪ್ಯಾನ್ ಲಿಂಕ್ ಆಗದೇ ಹೋದರೆ ಅದು ಇನಾಪರೇಟಿವ್ ಆಗುತ್ತದೆ.
  • ಪ್ಯಾನ್ ಇನಾಪರೇಟಿವ್ ಆದರೆ ಪ್ಯಾನ್ ಇದ್ದೂ ಇಲ್ಲದಂತಾಗುತ್ತದೆ
  • ಐಟಿ ರಿಟರ್ನ್ ಸಲ್ಲಿಸಲು ಆಗುವುದಿಲ್ಲ
  • ಸಲ್ಲಿಸಲಾಗಿರುವ ಐಟಿಆರ್​ಗಳನ್ನು ಪ್ರೋಸಸಿಂಗ್ ಮಾಡಲಾಗುವುದಿಲ್ಲ.
  • ಐಟಿಆರ್​ಗಳು ಪ್ರೋಸಸಿಂಗ್ ಆಗಿದ್ದರೂ ಅವಗಳಿಂದ ರೀಫಂಡಿಂಗ್ ಸಿಗುವುದಿಲ್ಲ.
  • ಟಿಡಿಎಸ್ ಮುರಿದುಕೊಳ್ಳುವುದಿದ್ದರೆ ಶೇ. 10 ಬದಲು ಶೇ. 20ರಷ್ಟು ಟ್ಯಾಕ್ಸ್ ಅನ್ನು ಹಿಡಿದುಕೊಳ್ಳಲಾಗುತ್ತದೆ.
  • ಹೊಸ ಬ್ಯಾಂಕ್ ಅಕೌಂಟ್ ತೆರೆಯಲು ಆಗುವುದಿಲ್ಲ.
  • ದೊಡ್ಡ ಮೊತ್ತದ ಕ್ಯಾಷ್ ಡೆಪಾಸಿಟ್ ಸಾಧ್ಯವಾಗುವುದಿಲ್ಲ.
  • ಉದ್ಯೋಗಿಗಳಿಗೆ ಸಂಬಳ ಕ್ರೆಡಿಟ್ ಆಗಲ್ಲ
  • ಎಸ್​ಐಪಿಗಳಿದ್ದರೆ ವರ್ಕ್ ಆಗಲ್ಲ.

ಹೀಗೆ ನಿಮ್ಮ ಹೆಚ್ಚಿನ ಹಣಕಾಸು ಚಟುವಟಿಕೆಗಳು ನಿಷ್ಕ್ರಿಯಗೊಳ್ಳುತ್ತವೆ.

ಆಧಾರ್​ಗೆ ಪ್ಯಾನ್ ಲಿಂಕ್ ಮಾಡುವುದು ಹೇಗೆ?

  • ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ವೆಬ್​ಸೈಟ್​ಗೆ ಭೇಟಿ ನೀಡಿ. ಇದರ ವಿಳಾಸ ಇಂತಿದೆ: www.incometax.gov.in
  • ವೆಬ್​ಸೈಟ್​ನ ಮುಖ್ಯಪುಟದಲ್ಲಿ ಕ್ವಿಕ್ ಲಿಂಕ್ಸ್ ಸೆಕ್ಷನ್ ಅಡಿಯಲ್ಲಿ ‘ಲಿಂಕ್ ಆಧಾರ್’ ಅನ್ನು ಕ್ಲಿಕ್ ಮಾಡಿ.
  • ನಿಮ್ಮ 10 ಸಂಖ್ಯೆಯ ಪ್ಯಾನ್ ನಂಬರ್ ಮತ್ತು 12 ಅಂಕಿಗಳ ಆಧಾರ್ ನಂಬರ್ ಅನ್ನು ಹಾಕಿ.
  • ಆಧಾರ್​ನಲ್ಲಿರುವ ಹೆಸರನ್ನು ನಮೂದಿಸಿ.
  • ‘ಐ ಅಗ್ರೀ ಟು ವ್ಯಾಲಿಡೇಟ್ ಮೈ ಆಧಾರ್ ಡೀಟೇಲ್ಸ್’ ಬಾಕ್ಸ್ ಅನ್ನು ಚೆಕ್ ಮಾಡಿ.
  • ಆಧಾರ್​ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಮೂಲಕ ಒಟಿಪಿ ಪಡೆದು ಹಾಕಿರಿ
  • ವ್ಯಾಲಿಡೇಟ್ ಕ್ಲಿಕ್ ಮಾಡಿ

ಒಂದು ವೇಳೆ, ನೀವು ಡಿಸೆಂಬರ್ 31ರ ನಂತರ ಲಿಂಕ್ ಮಾಡುತ್ತಿದ್ದಲ್ಲಿ 1,000 ರೂ ಪೆನಾಲ್ಟಿ ಕಟ್ಟಬೇಕಾಗಬಹುದು. ಪ್ಯಾನ್ ಮತ್ತು ಆಧಾರ್ ಸಂಖ್ಯೆ ನಮೂದಿಸಿ ವ್ಯಾಲಿಡೇಟ್ ಆಧಾರ್ ಅನ್ನು ಕ್ಲಿಕ್ ಮಾಡಿದಾಗ ನಿಮಗೆ ಪೆನಾಲ್ಟಿ ಕಟ್ಟಬೇಕಿದ್ದರೆ ಅದರ ಸೂಚನೆ ನೀಡಲಾಗುತ್ತದೆ.

ಆಗ ‘ಕಂಟಿನ್ಯೂ ಟು ಪೇ ತ್ರೂ ಇ-ಪೇ ಟ್ಯಾಕ್ಸ್’ ಕ್ಲಿಕ್ ಮಾಡಿದರೆ ದಂಡ ಪಾವತಿಸುವ ಕ್ರಮಗಳನ್ನು ತೋರಿಸಲಾಗುತ್ತದೆ. ಅದರಂತೆ ಪೆನಾಲ್ಟಿ ಕಟ್ಟಿ, ನಂತರ ಮತ್ತೆ ಇಫೈಲಿಂಗ್ ವೆಬ್​ಸೈಟ್​ಗೆ ಬಂದು ಪ್ಯಾನ್ ಹಾಗೂ ಆಧಾರ್ ಅನ್ನು ಲಿಂಕ್ ಮಾಡಬಹುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *