ನೆಲಮಂಗಲ : ನಿನ್ನೆ ರಾತ್ರಿ ಸುಮಾರು 9ಗಂಟೆಯ ಸಮಯದಲ್ಲಿ ಮಾಗಡಿ ರಸ್ತೆ, ಮಾಚೋಹಳಿ ಗೇಟ್ ಹತ್ತಿರವಿರುವ ರಾಮ್ ಜ್ಯೂಯೆಲ್ಲರಿ ಅಂಗಡಿಗೆ ನುಗ್ಗಿದ ದರೋಡೆಕೋರರು ಅಂಗಡಿಯಲ್ಲಿದ್ದ ಮಾಲೀಕ ಕನ್ಹಯ್ಯಲಾಲ್ ಮತ್ತು ಸೇಲ್ಸ್ಮನ್ನನ್ನು ಪಿಸ್ಟಲ್ ಒಂದರಿಂದ ಹೆದರಿಸಿ ಕೈಗೆ ಸಿಕ್ಕ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಅಂಗಡಿಯಲ್ಲಿ ಅಳವಡಿಲಾಗಿರುವ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಕನ್ಹಯ್ಯಲಾಲ್ ಅವರ ಕೂಗಾಟ ಕೇಳಿ ಅಕ್ಕಪಕ್ಕದ ಅಂಗಡಿಯವರು ಅಲ್ಲಿಗೆ ಬರುವ ಮೊದಲೇ ಕಳ್ಳರು ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ. ಪಕ್ಕದ ಅಂಗಡಿಯಾತನೊಬ್ಬನನ್ನು ಕಳ್ಳರು ದೂಡಿಕೊಂಡು ಪರಾರಿಯಾಗುವ ದೃಶ್ಯವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ