ಈಗಿನ ಕಾಲದಲ್ಲಿ ನಿದ್ರಾಹಿನತೆಯಿಂದ ಬಳಲುತ್ತಿರುವವರು ತುಂಬಾ ಜನರಿದ್ದಾರೆ. ನಿದ್ರಾಹೀನತೆಯ ಹಿಂದಿರುವ ಕಾರಣ ಬಹಳಷ್ಟಿವೆ ಅದರಲ್ಲಿ ಕೆಲಸದ ಒತ್ತಡವು ಕೂಡ ಒಂದು. ಸಾಮಾನ್ಯವಾಗಿ ಈ ಹಣ್ಣನ್ನು ತಿನ್ನದವರಿಲ್ಲ ಜೊತೆಗೆ ಎಲ್ಲ ಋತುಮಾನದಲ್ಲು ಸಿಗುವ ಹಣ್ಣಿದು. ಎಲ್ಲರು ಇಷ್ಟಾ ಪಡುವ ಈ ಒಂದು ಹಣ್ಣನ್ನು ದಿನಕ್ಕೆ ಒಂದಾದರು ತಿಂದರೆ ನಿದ್ರೆ ಸರಿಯಾಗಿ ಬರುವುದರ ಜೋತೆಗೆ, ಇದರಿಂದಾ ಮಾನವ ದೇಹಕ್ಕೆ ಆಗುವ ಉಪಯೋಗಗಳು ತುಂಬಾ. ನಿದ್ರಾಹೀನತೆಯನ್ನು ತಡೆಗಟ್ಟಲು ಮೆಡಿಸಿನ್ಗಳ ಮೋರೆ ಹೋಗುವ ಬದಲು ನೈಸರ್ಗಿಕವಾಗಿ ನಿದ್ರೆ ಬರುವ ರೀತಿ ಮಾಡಿಕೊಳ್ಳುವು ಅತ್ಯತ್ತಮ.
ಬಾಳೆ ಹಣ್ಣು ಪೌಷ್ಟಿಕಾಂಶ ಭರಿತವಾದುದ್ದು ಆದ್ದರಿಂದ ಇದರ ಸೇವನೆ ಉತ್ತಮವಾದುದ್ದು. ಮಾನವ ಜೀವನಕ್ಕೆ ನಿದ್ರೆಯೆಂಬುದು ತುಂಬಾನೆ ಮುಖ್ಯವಾದುದ್ದು, ಸರಿಯಾಗಿ ನಿದ್ರೆ ಮಾಡದೆ ಇರುವುದರಿಂದ ಆರೋಗ ಏರು-ಪೇರಾಗುವುದರ ಜೊತೆಗೆ ಮಾಡುವ ಕೆಲಸದಲ್ಲಿ ಆಸಕ್ತಿ ಇಲ್ಲದಂತಾಗುತ್ತದೆ. ಬಾಳೆ ಹಣ್ಣಿನ ಸೇವನೆಯಿಂದ ಎನೇಲ್ಲಾ ಆರೋಗ್ಯದ ಉಪಯೋಗಗಳಿವೆಯೆಂದರೆ,
• ಇದರ ಸೇವನೆಯಿಂದ ದೇಹವು ತಂಪಾಗಿರುತ್ತೆದೆ.
• ಇದರಲ್ಲಿರುವ ಆರೋಗ್ಯಕರ ಗುಣಗಳು ನಿದ್ರಾಹಿನತೆಯನ್ನು ತಡೆಗಟ್ಟಿ, ರಾತ್ರಿ ಸಮಯದಲ್ಲಿ ಉತ್ತಮ ನಿದ್ರೆ ಮಾಡಲು ಅನುಕೂಲ ಮಾಡಿಕೊಡುತ್ತದೆ.
• ತೂಕ ಕಡಿಮೇ ಮಾಡಿಕೊಳ್ಳಲು ಸಹಕರಿಸುತ್ತದೆ.
• ದೇಹಕ್ಕೆ ಅಗತ್ಯವಿರುವ ೧೦% ಪೊಟ್ಯಾಸಿಯಮ್ ಅಂಶವನ್ನು ಒದಗಿಸುತ್ತದೆ
• ಮೆಗ್ನೀಸಿಯಮ್ ಅಂಶ ನಮ್ಮ ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುವುದರ ಜೋತೆಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ.
• ನಮ್ಮ ಮನಸ್ಥಿತಿ ನಿಯಂತ್ರಣದಲ್ಲಿಡಲು ಸಹಕರಿಸುತ್ತದೆ.
• ಜೀರ್ಣ ಶಕ್ತಿ ಹೆಚ್ಚಾಗುತ್ತದೆ.
• ಕಿಡ್ನಿ, ಹೃದಯ ಮತ್ತು ಮೂಳೆಗಳಿಗೆ ಅತ್ಯತ್ತಮವಾದದ್ದು.
• ಮಾನಸಿಕ ಸಮಸ್ಯಗಳನ್ನು ಪರಿಹರಿಸಿ ಡಿಪ್ರೆಶನ್ ನಿಂದ ಹೊರಬರಲು ಸಹಾಯ ಮಾಡುತ್ತದೆ.
• ಇದರಲ್ಲಿರುವ ವಿಟಮಿನ್ ಬಿ೬ ನದ್ರೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದರ ಸೇವನೆಯಿಂದ ಯಾವುದೆ ರೀತಿಯ ಹಾನಿ ಇಲ್ಲ. ಆದರೆ ಅಧಿಕ ರಕ್ತದ ಸಕ್ಕರೆ ಸಮಸ್ಯ ಇದ್ದವರು ಇದರ ಬಗ್ಗೆ ಜಾಗೃತರಾಗಿದ್ದು, ಸೇವನೆ ಮಾಡುವ ಮೋದಲು ಒಮ್ಮೆ ವೈದ್ಯರನ್ನು ಕೇಳುವುದು ಒಳ್ಳೆಯದು.