ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿರುವ ಜಲಪಾತ ಇದು. ಯಾವ ಜಲಪಾತ ಗೊತ್ತಾ..?

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿರುವ ಜಲಪಾತ ಇದು. ಯಾವ ಜಲಪಾತ ಗೊತ್ತಾ..?

ಬೆಂಗಳೂರು: ಬೆಂಗಳೂರಿನ ಹತ್ತಿರದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿರುವ ಮುತ್ಯಾಲಮಡು ಜಲಪಾತ ಮಳೆಗಾಲದಲ್ಲಿ ಅದ್ಭುತವಾಗಿ ಕಂಗೊಳಿಸುತ್ತದೆ. 500 ಅಡಿ ಎತ್ತರದಿಂದ ಧುಮ್ಮುಕ್ಕುವ ಈ ಜಲಪಾತ ಪ್ರಕೃತಿ ಪ್ರೇಮಿಗಳಿಗೆ ಸ್ವರ್ಗ. ಆದರೆ, ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಪ್ರವಾಸೋದ್ಯಮ ಇಲಾಖೆಯಿಂದ ಸೂಕ್ತ ಅಭಿವೃದ್ಧಿ ಅಗತ್ಯವಿದೆ. ಬೆಂಗಳೂರಿನಿಂದ ಸುಲಭವಾಗಿ ತಲುಪಬಹುದಾದ ಈ ಸ್ಥಳಕ್ಕೆ ಭೇಟಿ ನೀಡಿ.

ಅದು ದಟ್ಟ ಕಾನನದ ಗಿಡಮರ ಬೆಟ್ಟ ಗುಡ್ಡಗಳ ವನಸಿರಿ ನಡುವೆ ಧುಮ್ಮುಕ್ಕುವ ಅಪರೂಪದ ಜಲಧಾರೆ. ಬಂಡೆಕಲ್ಲುಗಳನ್ನು ಸೀಳಿ ಕಣಿವೆಯಲ್ಲಿ ಹಾಲಿನಂತೆ ಮುತ್ಯಾಲಮಡು ಜಲಾಪಾತ ಧುಮ್ಮಿಕ್ಕುತ್ತಿದೆ. ಮುತ್ಯಾಲಮಡು ಜಲಾಪಾತ ಮಳೆಗಾಲದಲ್ಲಿ ಮಾತ್ರ ಭೋರ್ಗರೆಯುತ್ತದೆ.

ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಿಂದ 8 ಕಿಮೀ ಸಾಗಿದರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ದಟ್ಟ ಕಾಡು ಎದುರಾಗುತ್ತದೆ. ಅಲ್ಲಿಂದ ಕಾಡಿನಲ್ಲಿ ಒಂದು ಫರ್ಲಾಂಗ್ ದೂರ ಕಣಿವೆಯಲ್ಲಿ ಸಾಗಿದರೆ ಮುತ್ಯಾಲಮಡು ಶಂಖನಾದ ಜಲಪಾತ ಕಣ್ಣಿಗೆ ಬೀಳುತ್ತದೆ. ಬಂಡೆಕಲ್ಲುಗಳ ಸೀಳಿ 500 ಅಡಿ ಎತ್ತರದ ಮೇಲಿಂದ ಹಾಲಿನಂತೆ ಧುಮ್ಮುಕ್ಕುವ ಜಲಪಾತವನ್ನು ನೋಡುವುದೇ ಅಂದ.

ಸುತ್ತಲೂ ಹಚ್ಚ ಹಸಿರಿನ ವನಸಿರಿ ನಡುವೆ ಭೋರ್ಗರೆಯುತ ಹರಿಯುವ ಮುತ್ಯಾಲಮಡು ಜಲಪಾತ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ. ಬೆಂಗಳೂರು ಸಮೀಪದಲ್ಲಿಯೇ ಇಂತಹದೊಂದು ಪ್ರಕೃತಿ ರಮಣೀಯ ಪ್ರವಾಸಿ ತಾಣ ಇದ್ದು, ಹೆಚ್ಚಾಗಿ ಪ್ರೇಮಿಗಳು ಇಲ್ಲಿಗೆ ಬಂದು ಖುಷಿಪಡುತ್ತಾರೆ. ಕಟುಂಬ ಸಮೇತರಾಗಿ ಆಗಮಿಸಿ ಮುತ್ಯಾಲಮಡು ಜಲಪಾತದ ಐಸಿರಿಯನ್ನು ಕಣ್ತುಂಬಿಕೊಳ್ಳುತ್ತಾರೆ.

ಮುತ್ಯಾಲಮಡು ಜಲಪಾತ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಅರಣ್ಯದಲ್ಲಿದ್ದರೂ ಬೇಸಿಗೆ ಬಂತೆಂದರೆ ಸಣ್ಣ ಝರಿಯಂತೆ ಹರಿಯುತ್ತದೆ. ಪ್ರವಾಸಿಗರ ಸಂಖ್ಯೆಯು ಇಳಿಮುಖವಾಗುತ್ತದೆ. ಎಲೆ ಉದುರಿದ ಪರಿಣಾಮ ಕಾಡಿನ ಮರಗಳು ಕೂಡ ಬೋಳು ಬೋಳಾಗಿ ಕಾಣುತ್ತವೆ. ಬೆಂಗಳೂರು ನಗರಕ್ಕೆ ಅಣತಿ ದೂರದಲ್ಲಿದ್ದರು ಮುತ್ಯಾಲಮಡು ಪ್ರವಾಸಿತಾಣ ಅಭಿವೃದ್ಧಿ ಹೊಂದಿಲ್ಲ.

ಮುತ್ಯಾಲಮಡು ಪ್ರವಾಸಿತಾಣ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಗೆ ಮನಸ್ಸು ಮಾಡಿಲ್ಲ. ಮೂಲಭೂತ ಸೌಕರ್ಯ ಕೂಡ ಮರೀಚಿಕೆಯಾಗಿದೆ. ಮಳೆಗಾಲದಲ್ಲಿ ಮಾತ್ರ ಮೈದುಂಬಿ ಹರಿಯುವ ಮುತ್ಯಾಲಮಡು ಜಲಪಾತವನ್ನು ವರ್ಷಪೂರ್ತಿ ಹರಿಯುವಂತೆ ಮಾಡುವ ಮೂಲಕ ಮುತ್ಯಾಲಮಡು ಜಲಪಾತ ಪ್ರವಾಸಿತಾಣಕ್ಕೆ ಹೊಸ ಸ್ಪರ್ಶ ನೀಡಬೇಕಿದೆ.

ಒಟ್ಟಿನಲ್ಲಿ ಪ್ರವಾಸಿಗರಿಗೆ ಜಲಪಾತ ಎಂದಾಗ ನೆನಪಾಗೋದು ದೂರದ ಜೋಗ ಜಲಪಾತ. ಆದರೆ, ಬೆಂಗಳೂರು ಸಮೀಪ ಪ್ರಕೃತಿ ಮಡಿಲಲ್ಲಿ ಕಂಗೊಳಿಸುತ್ತಿರುವ ಮುತ್ಯಾಲಮಡು ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದ್ದು, ಒಮ್ಮೆ ಭೇಟಿ ನೀಡಿ ದಿನಪೂರ್ತಿ ಏಂಜಾಯ್ ಮಾಡಬಹುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *