ಭಾರತ ಈ ಹೆಸರು ಕೇಳಿದ ಕೂಡಲೇ ಇಲ್ಲಿನ ಆಚಾರ ವಿಚಾರಗಳು, ಸಂಪ್ರದಾಯಗಳು, ಉಡುಗೆ ತೊಡುಗೆ, ಆಹಾರಪದ್ಧತಿ ಕಣ್ಣ ಮುಂದೆ ಬರುತ್ತದೆ. ನಮಗೆ ನಮ್ಮ ಆಚಾರ ವಿಚಾರದ ಬಗ್ಗೆ ಎಷ್ಟು ಹೆಮ್ಮೆಯಿದೆಯೇ ಅದೇ ರೀತಿ ವಿದೇಶಿಗರಿಗೆ ಭಾರತವೆಂದರೆ ಅದೇನೋ ಸೆಳೆತ. ಭಾರತಕ್ಕೆ ಭೇಟಿ ಕೊಡುವ ವಿದೇಶಿಗರು ಇಲ್ಲಿನ ಉಡುಗೆ ತೊಡುಗೆ ತೊಟ್ಟು ಸಂಭ್ರಮಿಸುತ್ತಾರೆ. ಆಹಾರವನ್ನು ಬಾಯಿಚಪ್ಪರಿಸಿಕೊಂಡು ಸವಿಯುತ್ತಾರೆ. ಕೆಲವರು ತಮ್ಮ ಐಷಾರಾಮಿ ಬದುಕು ತೊರೆದು ಇಲ್ಲಿಯೇ ಉಳಿಯುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಅಮೆರಿಕ ಮೂಲದ ಕ್ರಿಸ್ಟನ್ ಫಿಷರ್ ಎಂಬ ಮಹಿಳೆ. ಹೌದು ಕಳೆದ ನಾಲ್ಕು ವರ್ಷಗಳಿಂದ ತನ್ನ ಕುಟುಂಬದೊಂದಿಗೆ ಇಲ್ಲಿ ನೆಲೆಸಿರುವ ಈ ಮಹಿಳೆಯೂ ನನ್ನ ಬದುಕು ಬದಲಾಗಲು ಹತ್ತು ಕಾರಣಗಳನ್ನು ಕೊಟ್ಟಿದ್ದಾರೆ. ಭಾರತಕ್ಕೆ ಬಂದು ನೆಲೆಸಿ ಇದನ್ನೆಲ್ಲಾ ಕಲಿತಿದ್ದೇನೆ ಎಂದು ವಿವರಿಸಿದ್ದಾರೆ.

kristenfischer3 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, 4 ವರ್ಷಗಳ ಹಿಂದೆ ಭಾರತಕ್ಕೆ ಬಂದು ನೆಲೆಸಿದ್ದೇವೆ. ಇಲ್ಲಿಗೆ ಬಂದ ನಂತರ ನನ್ನ ಜೀವನವು ಸಂಪೂರ್ಣವಾಗಿ ಬದಲಾಗಿದೆ. ನಾನು ಹಲವಾರು ಬಗೆಯ ಭಾರತೀಯ ಪಾಕಪದ್ಧತಿ ಹಾಗೂ ಇಲ್ಲಿನ ಭಕ್ಷ್ಯಗಳನ್ನು ಮಾಡಲು ಕಲಿತಿದ್ದೇನೆ. ನಾನು ಇನ್ನೂ ಕಲಿಯಲು ಬಹಳಷ್ಟು ಇದೆ. ಆದರೆ, ನಾನು ಉತ್ತಮ ಆರಂಭಕ್ಕೆ ಹೊರಟಿದ್ದೇನೆ ಎಂದು ನಾನು ನಂಬುತ್ತೇನೆ. ಅಮೆರಿಕದಲ್ಲಿ ಅವರು ಎಂದಿಗೂ ಸಾರ್ವಜನಿಕ ಸಾರಿಗೆಯನ್ನು ಬಳಸಲಿಲ್ಲ. ಆದರೆ ಭಾರತಕ್ಕೆ ಬಂದು ನೆಲೆಸಿದ ನಂತರದಲ್ಲಿ ನಾನು ಈಗ ಇಲ್ಲಿ ಟ್ಯಾಕ್ಸಿ, ರಿಕ್ಷಾ, ಮೆಟ್ರೋ ಮತ್ತು ರೈಲುಗಳನ್ನು ಬಳಸುತ್ತಿದ್ದೇವೆ. ಅದರಲ್ಲೇ ಓಡಾಡುತ್ತಿದ್ದೇನೆ ಎಂದಿದ್ದಾರೆ.
ಭಾರತೀಯ ಉಡುಗೆ ತೊಡುಗೆ ಇಷ್ಟ. ಸೀರೆಯನ್ನು ಉಡುವ ಕಲೆಯನ್ನು ಕಲಿತಿದ್ದೇನೆ. ಅಮೆರಿಕದಂತೆ ದೇಶಾದ್ಯಂತ ಟ್ರಕ್ಗಳಲ್ಲಿ ಸಾಗಿಸಲಾದ ವಾರದ ಹಳೆಯ ಉತ್ಪನ್ನಗಳು ನನ್ನ ಕೈ ಸೇರುವುದಿಲ್ಲ. ಈಗೇನಿದ್ದರೂ ತಾನು ಬೀದಿ ಬದಿ ವ್ಯಾಪಾರಿಗಳಿಂದ ತಾಜಾ ಮತ್ತು ಸ್ಥಳೀಯವಾಗಿ ಬೆಳೆಯಲಾದ ತರಕಾರಿ ಹಣ್ಣುಗಳನ್ನು ಖರೀದಿ ಮಾಡುತ್ತೇನೆ. ಭಾರತಕ್ಕೆ ಬಂದು ನೆಲೆಸಿದ ಬಳಿಕ ನನ್ನ ಆಹಾರ ಪದ್ಧತಿಯಲ್ಲಿಯೂ ಸಾಕಷ್ಟು ಬದಲಾವಣೆಯಾಯಿತು. ನಾನು ಮಾಂಸಾಹಾರವನ್ನು ತ್ಯಜಿಸಿದೆ, ಸಸ್ಯಾಹಾರಿಯಾದೆ. ಭಾರತದಲ್ಲಿ ಸಸ್ಯಾಹಾರಿ ಆಹಾರವು ವೈವಿಧ್ಯತೆಯಿಂದ ಕೂಡಿದೆ. ಹೀಗಾಗಿ ನಾನುಇನ್ನು ಮುಂದೆ ಮತ್ತೆ ಮತ್ತೆ ಮಾಂಸಾಹಾರದ ಬಗ್ಗೆ ಯೋಚಿಸುವುದಿಲ್ಲ ಎಂದು ಹೇಳಿದ್ದಾರೆ.
ಭಾರತಕ್ಕೆ ಬಂದ ನಂತರ ನಾನು ಸ್ಕೂಟರ್ ಓಡಿಸುತ್ತೇನೆ. ಅಮೆರಿಕದಲ್ಲಿ, ಹೆಚ್ಚಿನ ರಸ್ತೆಗಳಲ್ಲಿ ಸ್ಕೂಟರ್ಗಳು ಕಾನೂನುಬಾಹಿರವಾಗಿವೆ. ಹೀಗಾಗಿ ಯಾರೂ ಈ ದ್ವಿಚಕ್ರ ವಾಹನವನ್ನು ಬಳಸುವುದಿಲ್ಲ. ಆದರೆ ಇಲ್ಲಿ ಸ್ಕೂಟರ್ನಲ್ಲಿ ತಿರುಗಾಡುವುದು ಎಷ್ಟು ಸುಲಭ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ನನ್ನ ಜೀವನದ ಮತ್ತೊಂದು ಮಹತ್ವದ ಬದಲಾವಣೆಗಳಲ್ಲಿ ಒಂದು ಹಿಂದಿ ಕಲಿಯುವ ಅವರ ನಿರ್ಧಾರ. ಪ್ರಾರಂಭದಲ್ಲಿ ಇದು ನಿಜಕ್ಕೂ ಕಷ್ಟಕರವಾಗಿತ್ತು. ಆದರೆ ನಾನು ಇನ್ನೂ ಕಲಿಯುತ್ತಿದ್ದೇನೆ. ನಾನು ಇಲ್ಲಿ ವಾಸಿಸುವ ಅತ್ಯಗತ್ಯ ಭಾಗವಾಗಿದೆ ಎಂದು ಹೇಳಿದ್ದಾರೆ.
ಇಲ್ಲಿ ನಾನು ನನ್ನ ಮಕ್ಕಳನ್ನು ಭಾರತದ ಖಾಸಗಿ ಶಾಲೆಗೆ ಕಳುಹಿಸುತ್ತೇನೆ ಮತ್ತು ಅವರಿಗೆ ಉತ್ತಮ ಶಿಕ್ಷಣ ಸಿಗುತ್ತಿದೆ ಎಂದು ನಾನು ನಂಬುತ್ತೇನೆ. ನನ್ನ ಮಕ್ಕಳನ್ನು ಯುಎಸ್ ಎ ನಲ್ಲಿ ಖಾಸಗಿ ಶಾಲೆಗೆ ಕಳುಹಿಸುತ್ತಿರಲಿಲ್ಲ ಏಕೆಂದರೆ ಅದು ತುಂಬಾ ದುಬಾರಿಯಾಗಿದೆ. ನಾನು ಇಲ್ಲಿನ ಮಾರುಕಟ್ಟೆಗಳಲ್ಲಿ ಚೌಕಾಶಿ ಮಾಡುತ್ತೇನೆ . ಬೆಲೆಗಳನ್ನು ಚೌಕಾಶಿ ಮಾಡುವುದು ಮತ್ತು ವಸ್ತುಗಳನ್ನು ಪಡೆಯುವುದು ನನಗೆ ತುಂಬಾ ಇಷ್ಟ, ಅದು ನನಗೆ ತುಂಬಾ ಖುಷಿ ನೀಡುತ್ತದೆ. ಇನ್ನು ನಾನು ಜೆಟ್ ಸ್ಪ್ರೇಗೆ ಸಂಪೂರ್ಣವಾಗಿ ಹೊಂದಿಕೊಂಡಿದ್ದೇನೆ. ನಾನು ನಿಮಗೆ ಹೇಳುತ್ತೇನೆ, ನಾನು ಎಂದಿಗೂ ಹಿಂತಿರುಗುವುದಿಲ್ಲ ಎಂದು ಹೇಳಿದ್ದಾರೆ.