ವಿರಾಟ್ ಕೊಹ್ಲಿ ವಿರುದ್ಧ ನಿಂತರೆ ಯಾರಿಗೇ ಆದರೂ ಶಾಕ್ ಸಿಗೋದು ಗ್ಯಾರಂಟಿ ಅನ್ನೋ ಮಾತು ಮತ್ತೆ ಪ್ರೂವ್ ಆಗಿದೆ. ಆಸ್ಟ್ರೇಲಿಯಾ ಆಟಗಾರರು ಕ್ರಿಕೆಟ್ ಆಡೋದು ಬಿಟ್ಟು ಮೈಂಡ್ ಗೇಮ್ ಆಡಲು ಶುರು ಮಾಡಿದ್ದರು. ಇದರ ಪರಿಣಾಮ ಭಾರತ & ಆಸ್ಟ್ರೇಲಿಯಾ ತಂಡದ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿ ಥೇಟ್ ಕುರುಕ್ಷೇತ್ರದ ರೀತಿ ಆಗಿತ್ತು. ಇದೀಗ ವಿರಾಟ್ ಕೊಹ್ಲಿ ಕೃಷ್ಣನ ಅವತಾರದಲ್ಲಿ ಆಸ್ಟ್ರೇಲಿಯಾ ಎಂಬ ಕೌರವರ ಸೇನೆ ಸರ್ವನಾಶ ಮಾಡಲು ಸಜ್ಜಾಗಿದ್ದಾರೆ
ಬಾರ್ಡರ್ & ಗವಾಸ್ಕರ್ ಟ್ರೋಫಿಯ 5ನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡದ ದಾಂಡಿಗರು ತರಗೆಲೆ ರೀತಿ ಹಾರಿ ಹೋದರು. ಭಾರತದ ಬೌಲಿಂಗ್ ದಾಳಿ ಎದುರಿಸಲು ನಲುಗಿದ ಆಸಿಸ್ ದಾಂಡಿಗರು ಕಕ್ಕಾಬಿಕ್ಕಿ ಆಗೋಗಿದ್ದರು. ಮೊಹಮ್ಮದ್ ಸಿರಾಜ್, ಪ್ರಸಿದ್ ಕೃಷ್ಣ ತಲಾ 3 ವಿಕೆಟ್ ಪಡೆದು ಮಿಂಚಿದರು
ಜಸ್ಪ್ರಿತ್ ಬುಮ್ರಾ 2 ವಿಕೆಟ್ & ನಿತೀಶ್ ರೆಡ್ಡಿ 2 ವಿಕೆಟ್ ಉರುಳಿಸಿ ಭರ್ಜರಿಯಾಗಿ ಮಿಂಚಿದರು. ಈ ಮೂಲಕ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪಡೆಯನ್ನು ಉರುಳಿಸಿ 181 ರನ್‌ಗೆ ಆಲೌಟ್ ಮಾಡಿ ಬಿಸಾಡಿದೆ. ಇದೆಲ್ಲದಕ್ಕಿಂತ ಮೇಲಾಗಿ ವಿರಾಟ್ ಕೊಹ್ಲಿ ಅವರ ಮಾಸ್ಟರ್ ಪ್ಲಾನ್ ಭರ್ಜರಿ ಸಕ್ಸಸ್ ಆಗಿದೆ!