ಪ್ರತಿದಿನ ಕಣ್ಣುಗಳಿಗೆ ಕಾಜಲ್, ಐಲೈನರ್ ಹಚ್ಚುವ ಅಭ್ಯಾಸ ಇರುವವರೇ ಎಚ್ಚರ! ಎಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವಾಗುತ್ತೆ ನೋಡಿ

ಪ್ರತಿದಿನ ಕಣ್ಣುಗಳಿಗೆ ಕಾಜಲ್, ಐಲೈನರ್ ಹಚ್ಚುವ ಅಭ್ಯಾಸ ಇರುವವರೇ ಎಚ್ಚರ! ಎಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವಾಗುತ್ತೆ ನೋಡಿ

ಸಾಮಾನ್ಯವಾಗಿ ಮಹಿಳೆಯರು ಅಲಂಕಾರ ಪ್ರಿಯರು. ಪಾರ್ಟಿ ಅಥವಾ ಸಮಾರಂಭಗಳಿಗೆ ಹೋಗುವಾಗ ಕಾಜಲ್, ಮಸ್ಕರಾ ಮತ್ತು ಐಲೈನರ್ ಸೇರಿದಂತೆ ಇನ್ನಿತರ ಮೇಕಪ್ ಪ್ರಾಡಕ್ಟ್ ಗಳನ್ನು ಬಳಸುತ್ತಾರೆ. ಅದರಲ್ಲಿಯೂ ಕಣ್ಣಿನ ಮೇಕಪ್ ಗೆ ಹೆಚ್ಚಿನ ಆದ್ಯತೆ ನೀಡಿರುತ್ತಾರೆ. ಅದು ಅವರ ಅಂದಕ್ಕೆ ಮತ್ತಷ್ಟು ಮೆರಗು ನೀಡುತ್ತದೆ ಎಂಬುದು ಹೆಂಗಳೆಯರ ನಂಬಿಕೆ. ಆದರೆ ದಿನನಿತ್ಯ ಕಾಜಲ್, ಮಸ್ಕರಾ ಮತ್ತು ಐಲೈನರ್ ಬಳಕೆ ಮಾಡುವುದು ಒಳ್ಳೆಯದೇ? ಕಣ್ಣಿನ ಆರೋಗ್ಯಕ್ಕೆ ತೊಂದರೆಯಾಗುತ್ತದೆಯೇ? ಈ ಬಗ್ಗೆ ತಜ್ಞರ ಅಭಿಪ್ರಾಯವೇನು? ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಹಿಳೆಯರು ಶೃಂಗಾರ ಪ್ರೀಯರು. ಚಿಕ್ಕ ಕಾರ್ಯಕ್ರಮವಿರಲಿ ತುಂಬಾ ಚೆನ್ನಾಗಿ ತಯಾರಾಗುತ್ತಾರೆ. ಅದರಲ್ಲಿಯೂ ಈಗಿನ ಹೆಣ್ಣು ಮಕ್ಕಳಿಗೆ ಮೇಕಪ್ ಮಾಡಿಕೊಳ್ಳಲು ಹತ್ತು ಹಲವಾರು ಪ್ರಾಡಕ್ಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಪ್ರತಿದಿನ ಒಂದೊಂದು ರೀತಿ ಮೇಕಪ್ ಮಾಡಿಕೊಳ್ಳುವ ಅವಕಾಶವಿದೆ. ಪಾರ್ಟಿ, ಆಫೀಸ್ ಹೀಗೆ ಬೇರೆ ಬೇರೆ ಕಡೆ ಹೋಗುವಾಗ ವಿಭಿನ್ನವಾಗಿ ತಯಾರಾಗುವ ಅವಕಾಶ ಅವರಿಗಿದೆ. ಇದು ಅವರ ಅಂದವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಕೆಲವರು ಪ್ರತಿನಿತ್ಯ ಮೇಕಪ್  ಮಾಡಿಕೊಳ್ಳುತ್ತಾರೆ ಮಾತ್ರವಲ್ಲ, ಅದರಲ್ಲಿಯೂ ವಿಶೇಷವಾಗಿ, ಈಗಿನ ಹೆಣ್ಣು ಮಕ್ಕಳು ಕಣ್ಣಿನ ಮೇಕಪ್ ಗೆ ಹೆಚ್ಚಿನ ಆದ್ಯತೆ ನೀಡಿರುತ್ತಾರೆ. ಅದು ಅವರ ಅಂದಕ್ಕೆ ಮತ್ತಷ್ಟು ಮೆರಗು ನೀಡುತ್ತದೆ ಎಂಬುದು ಹೆಂಗಳೆಯರ ನಂಬಿಕೆ. ಆದರೆ ದಿನನಿತ್ಯ ಕಾಜಲ್, ಮಸ್ಕರಾ ಮತ್ತು ಐಲೈನರ್ ಬಳಕೆ ಮಾಡುವುದು ಒಳ್ಳೆಯದೇ? ಕಣ್ಣಿನ ಆರೋಗ್ಯಕ್ಕೆ (Eye health) ತೊಂದರೆಯಾಗುತ್ತದೆಯೇ? ಈ ಬಗ್ಗೆ ತಜ್ಞರ ಅಭಿಪ್ರಾಯವೇನು? ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ರಾಸಾಯನಿಕಗಳಿಂದ ಕಣ್ಣುಗಳಿಗೆ ಹಾನಿ

ಕಣ್ಣಿಗೆ ನಾನಾ ರೀತಿಯಲ್ಲಿ ಮೇಕಪ್‌ ಮಾಡುವ ಅನೇಕ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದನ್ನು ನೀವು ಕೂಡ ಗಮನಿಸಿರಬಹುದು. ಇದನ್ನು ನೋಡಿ ಹಲವರು ಟ್ರೈ ಮಾಡುತ್ತಾರೆ. ಮಾತ್ರವಲ್ಲ, ಕೆಲವು ಮಹಿಳೆಯರು ಪ್ರತಿನಿತ್ಯವೂ ಒಂದೊಂದು ರೀತಿ ಐಲೈನರ್ ಮತ್ತು ಐಶ್ಯಾಡೋ ಗಳನ್ನು ಬಳಸುತ್ತಾರೆ. ಇದು ಅವರನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಆದರೆ ಈ ಉತ್ಪನ್ನಗಳನ್ನು ತಯಾರಿಸುವಾಗ ಅನೇಕ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ, ಇದು ಅವರ ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ. ಹೌದು. ನೀವು ಪ್ರತಿನಿತ್ಯ ಬಳಸುವ ಕಾಜಲ್, ಐಲೈನರ್ ಮತ್ತು ಇತರ ಮೇಕಪ್ ಉತ್ಪನ್ನಗಳು ಅನೇಕ ರಾಸಾಯನಿಕಗಳನ್ನು ಒಳಗೊಂಡಿದ್ದು ಇವುಗಳನ್ನು ಪ್ರತಿದಿನ ಬಳಸುವುದರಿಂದ ಕಣ್ಣುಗಳಿಗೆ ಹಾನಿಯಾಗುತ್ತದೆ.

ಮೇಕಪ್ ಮಾಡಿಕೊಳ್ಳುವ ಮೊದಲು ಈ ವಿಷಯ ತಿಳಿದಿರಲಿ

ಆರೋಗ್ಯ ತಜ್ಞರು ಹೇಳುವ ಪ್ರಕಾರ, ಕಾಜಲ್, ಮಸ್ಕರಾ, ಐಲೈನರ್ ಮತ್ತು ಐಶ್ಯಾಡೋಗಳನ್ನು ಪ್ರತಿದಿನ ಹಚ್ಚುವುದರಿಂದ, ಅವು ಕಣ್ಣುಗಳಿಗೆ ಹಾನಿ ಮಾಡಬಹುದು. ಮಾತ್ರವಲ್ಲ ಇದು ದೀರ್ಘಕಾಲ ವರೆಗೆ ಕಣ್ಣುಗಳಲ್ಲಿಯೇ ಉಳಿಯಬಹುದಾಗಿದ್ದು ಅವುಗಳಲ್ಲಿರುವ ರಾಸಾಯನಿಕಗಳು ಮತ್ತು ಸಂರಕ್ಷಕಗಳು ಕಣ್ಣುಗಳ ಹೊಳಪನ್ನು ಕಡಿಮೆ ಮಾಡುತ್ತದೆ, ಜೊತೆಗೆ ಕಿರಿಕಿರಿ ಮತ್ತು ತುರಿಕೆಗೂ ಸಹ ಕಾರಣವಾಗಬಹುದು. ಹಾಗಾಗಿ ಮಲಗುವ ಮುನ್ನ ಕಣ್ಣಿನ ಮೇಕಪ್ ಅನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ. ಜೊತೆಗೆ, ಬೇರೆಯವರು ಬಳಸಿದ ಮೇಕಪ್ ಪ್ರಾಡಕ್ಟ್ ಗಳ ಬಳಕೆಯನ್ನು ತಪ್ಪಿಸಿ, ಏಕೆಂದರೆ ಒಬ್ಬರು ಬಳಸಿದ್ದನ್ನು ಮತ್ತೊಬ್ಬರು ಬಳಕೆ ಮಾಡುವುದರಿಂದ ಬ್ಯಾಕ್ಟೀರಿಯಾದ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ, ನೀವು ಮೇಕಪ್ ಮಾಡಿಕೊಳ್ಳಲು ಇಷ್ಟಪಡುವವರಾಗಿದ್ದರೆ ಅದರ ಕುರಿತು ಕೆಲವು ನಿರ್ದಿಷ್ಟ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ.

ಈ ವಿಷಯ ನೆನಪಿರಲಿ

ಮೇಕಪ್ ಮಾಡಿಕೊಳ್ಳುವ ಮೊದಲು ಅದರಲ್ಲಿಯೂ ಕಣ್ಣಿಗೆ ಸಂಬಂಧಿಸಿದ ಪ್ರಾಡಕ್ಟ್ ಬಳಕೆ ಮಾಡುವ ಮುಂಚೆ ನಿಮ್ಮ ಕೈ ಮತ್ತು ಮುಖವನ್ನು ಸ್ವಚ್ಛಮಾಡಿ ತೊಳೆಯಿರಿ. ನಿಮ್ಮ ಕೈಗಳನ್ನು ಸ್ವಚ್ಛಗೊಳಿಸದೆ ಮೇಕಪ್ ಮಾಡುವುದರಿಂದ ನಿಮ್ಮ ಕೈಗಳಿಂದ ಬ್ಯಾಕ್ಟೀರಿಯಾಗಳು ಕಣ್ಣಿಗೆ ಪ್ರವೇಶಿಸುವ ಅಪಾಯ ಹೆಚ್ಚಾಗಿರುತ್ತದೆ. ಆದ್ದರಿಂದ, ಮೊದಲು ನಿಮ್ಮ ಮುಖ ಮತ್ತು ಕೈಗಳನ್ನು ಸ್ವಚ್ಛಗೊಳಿಸಿ. ಆ ಬಳಿಕ ಮೇಕಪ್ ಮಾಡಿಕೊಳ್ಳಿ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *