ಮಂಡ್ಯ : ರಾಜ್ಯಾದ್ಯಂತ ಗಣೇಶ ವಿಸರ್ಜನೆ ಸಂಭ್ರಮದಿಂದಾಗಿ ನಗರಗಳು, ಗ್ರಾಮಗಳು ಸಡಗರದಲ್ಲಿ ಕಾಣಿಸಿಕೊಂಡಿದ್ದರೆ, ಕೆಲವು ಕಡೆ ಈ ಸಂಭ್ರಮವೇ ದುರ್ಘಟನೆಗೂ ಕಾರಣವಾಯಿತು. ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಮೂರಾರು ವ್ಯಕ್ತಿಗಳು ಹೃದಯಾಘಾತ ಹಾಗೂ ಅಪಘಾತದಿಂದ ಮೃತಪಟ್ಟಿದ್ದಾರೆ.
ಡ್ಯಾನ್ಸ್ ವೇಳೆ ಹೃದಯಾಘಾತ: ಇಬ್ಬರು ದುರ್ಮರಣ
ಜೊತ್ತನಪುರ, ಮಂಡ್ಯ ಜಿಲ್ಲೆ: ಮಂಜುನಾಥ್ ಎಂಬುವವರು ತಮ್ಮ ಊರಿನಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ಹಾಡಿಗೆ ಉತ್ಸಾಹದಿಂದ ನೃತ್ಯ ಮಾಡುತ್ತಿದ್ದರು. ಆದರೆ ಹಠಾತ್ ಹೃದಯಾಘಾತ ಸಂಭವಿಸಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದರು.
ಘಟನೆಯ ದೃಶ್ಯಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಪ್ರಕರಣ ಕೆ.ಆರ್.ಪೇಟೆ ಠಾಣೆಯಲ್ಲಿ ದಾಖಲಾಗಿದೆ.
ಬೋದಗೂರು, ಚಿಕ್ಕಬಳ್ಳಾಪುರ ಜಿಲ್ಲೆ:ಲಕ್ಷ್ಮಿಪತಿ (40) ಎಂಬ ರೈತ, “ನಾಗವಲ್ಲಿ” ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದರು. ಅನೇಕ ಮಂದಿ ಜತೆಗೇ ನೃತ್ಯ ಮಾಡುತ್ತಿದ್ದಾಗಲೇ ಅವರಿಗೆ ಹೃದಯಾಘಾತ ಸಂಭವಿಸಿ ಅವರು ಕೂಡ ಸ್ಥಳದಲ್ಲೇ ಸಾವನ್ನಪ್ಪಿದರು.
ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಕುಟುಂಬದಲ್ಲಿ ಇದ್ದಾರೆ.
ಟ್ರ್ಯಾಕ್ಟರ್ನಿಂದ ಬಿದ್ದು ವ್ಯಕ್ತಿ ಸಾವು – ಮೈಸೂರು
ಹರವೆ ಗ್ರಾಮ, ಹುಣಸೂರು ತಾಲೂಕು:ಆಟೋ ರಾಜು (34) ಎಂಬವರು ಗಣಪತಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದಾಗ, ಮನೆಯ ಮುಂದೆ ಗಣೇಶನಿಗೆ ಪೂಜೆ ಸಲ್ಲಿಸಲು ಟ್ರ್ಯಾಕ್ಟರ್ ಹತ್ತಿದ್ದರು. ಪೂಜೆ ನಡೆಯುತ್ತಿರುವಾಗ ಅಚಾನಕ್ ಕೆಳಗೆ ಬಿದ್ದು ಗಾಯಗೊಂಡು, ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು.
ಉತ್ಸವದಲ್ಲಿ ಉತ್ಸಾಹ, ಆದರೆ ಎಚ್ಚರತೆಯ ಅಗತ್ಯ
ಗಣೇಶ ವಿಸರ್ಜನೆ ಇಂತಹ ದುರ್ಘಟನೆಗಳಿಗೆ ಸಾಕ್ಷಿಯಾಗಿರುವುದು ಶೋಕಕರ ಸಂಗತಿ. ಉತ್ಸವ ಸಂಭ್ರಮದಲ್ಲಿ ಆರೋಗ್ಯದ ಕಡೆ ಕಾಳಜಿ ವಹಿಸದಿದ್ದರೆ ಈ ರೀತಿ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ ಎಂಬುದು ಇವುಗಳಿಂದ ಸ್ಪಷ್ಟವಾಗುತ್ತದೆ.
For More Updates Join our WhatsApp Group :




