ತಿರುಪತಿ || ಇದ್ದಕ್ಕಿದ್ದಂತೆ ಅಟ್ಯಾಕ್ ಮಾಡಲು ಬಂದ ಚಿರತೆ; ಪವಾಡ ಸದೃಶ್ಯವಾಗಿ ದಾಳಿಯಿಂದ ಪಾರಾದ ಬೈಕ್ ಸವಾರ.

ತಿರುಪತಿ || ಇದ್ದಕ್ಕಿದ್ದಂತೆ ಅಟ್ಯಾಕ್ ಮಾಡಲು ಬಂದ ಚಿರತೆ; ಪವಾಡ ಸದೃಶ್ಯವಾಗಿ ದಾಳಿಯಿಂದ ಪಾರಾದ ಬೈಕ್ ಸವಾರ.

ತಿರುಪತಿ: ಕಾಡು ಪ್ರಾಣಿಗಳ ದಾಳಿಯ ಕುರಿತಾದ ಸುದ್ದಿಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಕೆಲವೊಮ್ಮೆ ಜನವಸತಿ ಪ್ರದೇಶಗಳು, ರಸ್ತೆ ದಾಟುವ ವೇಳೆಯಲ್ಲಿ ಕ್ಯಾಮೆರಾದ ಕಣ್ಣಿಗೆ ಈ ಕ್ರೂರ ಪ್ರಾಣಿಗಳು ಸೆರೆ ಸಿಗುತ್ತವೆ. ಈ ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡುವುದಿದೆ. ಆದರೆ ಇದೀಗ ವೇಗವಾಗಿ ಸಾಗುತ್ತಿದ್ದ ಬೈಕ್ ಸವಾರನ ಮೇಲೆ ಚಿರತೆಯೊಂದು ಜಿಗಿದಿದೆ. ಹೌದು, ಈ ಘಟನೆಯೂ ತಿರುಪತಿಯ ಅಲಿಪಿರಿಯ ಮೃಗಾಲಯ ಪಾರ್ಕ್ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ . ಬೈಕ್ ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್ ಕ್ಯಾಮ್ ಈ ದೃಶ್ಯವನ್ನು ಸೆರೆಹಿಡಿದಿದೆ. ಸದ್ಯಕ್ಕೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

@jsuryareddy ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ವೇಗವಾಗಿ ಸಾಗುತ್ತಿದ್ದ ಬೈಕ್ನತ್ತ ಚಿರತೆ ಜಿಗಿದಿರುವ ದೃಶ್ಯವನ್ನು ಕಾಣಬಹುದು. ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೇಳೆಯಲ್ಲಿ ಬೈಕ್ ಸವಾರ ಮುಂದೆ ಸಾಗಿದ್ದು, ಚಿರತೆ ಕೂಡ ಎದ್ದು ಭಯಭೀತಗೊಂಡು ಹಿಂದಕ್ಕೆ ಓಡಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

Leave a Reply

Your email address will not be published. Required fields are marked *