ತಿರುಪತಿ : ದೇವರ ಪ್ರಸಾದವೆಂದರೆ ಭಕ್ತರಿಗೆ ಅದೇನೋ ಒಂದು ಭಕ್ತಿ. ದೇವಾಲಯದಿಂದ ಪ್ರಸಾದವನ್ನು ತಂದು ಮನೆಯಲ್ಲಿಟ್ಟು ಪೂಜೆ ನಂತರ ಭಕ್ತಿ ಭಾವದಿಂದ ಸ್ವೀಕರಿಸುತ್ತಾರೆ. ಆದರೆ ತಿರುಪತಿ ಲಡ್ಡು ವಿವಾದ ಗೊತ್ತಿರುವ ಸಂಗತಿ. ತಿರುಪತಿ ಲಡ್ಡಿನಲ್ಲಿ ಪ್ರಾಣಿಜನ್ಯ ಕೊಬ್ಬಿನ ಅಂಶ ಸೇರಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರ ಬಾಬು ನಾಯ್ಡು ಆಪಾದಿಸಿರುವ ಹಿನ್ನೆಲೆ ಇದೀಗ ಇದು ರಾಜಕೀಯ ಪಕ್ಷಗಳ ಕೆಸರೆರಾಚಾಟಕ್ಕೆ ಕಾರಣವಾಗಿದೆ. ನಾಯ್ಡು ಆರೋಪವನ್ನು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಬೆಂಬಲಿಸಿದ್ದಾರೆ ವೈಎಸ್ ಜಗನ್ಮೋಹನ್ ರೆಡ್ಡಿ ಇದನ್ನು ದುರುದ್ದೇಶದ ಆರೋಪ ಎಂದು ಬಣ್ಣಿಸಿದ್ದಾರೆ. ಈ ವಿವಾದದಲ್ಲಿ ಕೇಂದ್ರ ಸರ್ಕಾರ ಪ್ರವೇಶಿಸಿದ್ದು ಜೆಪಿ ನಡ್ದ ಆಂಧ್ರ ಸರ್ಕಾರದಿಂದ ವರದಿ ತರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ ಆಹಾರ ಖಾತೆ ಸಚಿವ ಪ್ರಹ್ಲಾದ್ ಜೋಶಿ ಈ ಆರೋಪಗಳ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ. ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಜೆ ಶಾಮಲಾ ರಾವ್ ಸುದ್ದಿಗೋಷ್ಠಿ ನಡೆಸಿ ಅದರಲ್ಲಿ ಮಾತನಾಡಿ ಲಡ್ಡು ಪ್ರಸಾದದಲ್ಲಿ ಹಂದಿ ಕೊಬ್ಬು ಇರುವುದನ್ನು ಪ್ರಯೋಗಾಲಯ ವರದಿ ದೃಢಪಡಿಸಿದ್ದು ಈ ಹಿನ್ನೆಲೆಯಲ್ಲಿ ಕಲುಷಿತ ತುಪ್ಪ ಪೂರೈಕೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ತಿರುಪತಿ ಲಡ್ಡು ವಿವಾದ: ರಾಜಕೀಯ ಕೆಸರೆರಾಚಾಟ.
