ಬೆಂಗಳೂರು: ಸಾಲ ಮಾಡಿಯಾದ್ರು ತುಪ್ಪ ತಿನ್ನು ಎನ್ನುವ ಮಾತಿದೆ. ಈ ಮಾತು ಮದ್ವೆ ವಿಷ್ಯದಲ್ಲಿ ಸತ್ಯವೆನಿಸುತ್ತದೆ. ಕೈಯಲ್ಲಿ ಕಾಸಿಲ್ಲ ಅಂದ್ರು ಸಾಲ ಮಾಡಿ ಅದ್ದೂರಿಯಾಗಿ ಮದುವೆ ಮಾಡುವುದನ್ನು ನೀವು ನೋಡಿರುತ್ತೀರಿ. ದುಡ್ಡು ಎಷ್ಟೇ ಆದ್ರೂ ವಿಭಿನ್ನವಾಗಿ ಮದುವೆ ಮಾಡಿಕೊಳ್ಳಲು ಬಯಸುತ್ತಾರೆ. ಸಾಮಾನ್ಯವಾಗಿ ಮದ್ವೆ ಆದ್ಮೇಲೆ ಗುರು ಹಿರಿಯರ ಆಶೀರ್ವಾದ ಪಡೆದುಕೊಳ್ಳುವುದೇನು ಸಹಜ. ಆದರೆ ಇಲ್ಲೊಂದು ಕಡೆ ಹೊಸ ಜೀವನಕ್ಕೆ ಕಾಲಿಟ್ಟ ವಧು ವರರನ್ನು ಆಶೀರ್ವದಿಸಲು ಮದ್ವೆ ಮಂಟಪಕ್ಕೆ ತಿರುಪತಿ ತಿಮ್ಮಪ್ಪನೇ ಬಂದಿದ್ದಾನೆ. ಬೆಂಗಳೂರಿನಲ್ಲಿ ನಡೆದ ಮದುವೆಯಲ್ಲಿ ಈ ರೀತಿ ದೇವರನ್ನೇ ಧರೆಗೆ ಇಳಿಸುವ ಪ್ರಯತ್ನ ಮಾಡಲಾಗಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಮದ್ವೆ ಮಂಟಪದಲ್ಲೇ ನವಜೋಡಿಗೆ ದರ್ಶನ ಕೊಟ್ಟ ದೇವ್ರು
ನಮ್ಮ ಬೆಂಗಳೂರು ಹೆಸರಿನ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ಶೀರ್ಷಿಕೆಯಲ್ಲಿ ಡೈಲಾಗ್ ಇರುವುದನ್ನು ಕಾಣಬಹುದು. ನಾವು : ನಾವು ಸರಳ ಮದುವೆ ಬಯಸುತ್ತೇವೆ. ಪೋಷಕರು: ದೇವರ ಆಶೀರ್ವಾದದ ಜೊತೆ ಸರಳ ವಿವಾಹ. ಈ ಮಧ್ಯೆ ದೇವರ ಆಶೀರ್ವಾದ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಈ ವಿಡಿಯೋದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟ ನವಜೋಡಿ ವೇದಿಕೆಯ ಮೇಲೆ ನಿಂತಿರುವುದನ್ನು ಕಾಣಬಹುದು. ಇದೇ ವೇಳೆ ವೇದಿಕೆಯ ಮೇಲೆ ಹೊಗೆಯೂ ಆವರಿಸಿದೆ. ಇದಾದ ಕೆಲವೇ ಕ್ಷಣದಲ್ಲಿ ವೆಂಕಟೇಶ್ವರ ಸ್ವಾಮಿ ವೇದಿಕೆಯತ್ತ ನಡೆದುಕೊಂಡು ಬರುತ್ತಾನೆ. ವೆಂಕಟೇಶ್ವರ ಸ್ವಾಮಿಯನ್ನು ನೋಡಿದ ವಧು ವರರು ಮಂಡಿಯೂರಿ ನಮಸ್ಕರಿಸಿದ್ದಾರೆ. ನವಜೋಡಿಯ ಬಳಿ ಬಂದ ತಿರುಪತಿ ತಿಮ್ಮಪ್ಪ ವಧು ವರರ ತಲೆಯ ಮೇಲೆ ಹೂವು ಹಾಕಿ ಆಶೀರ್ವಾದ ಮಾಡುವುದನ್ನು ನೋಡಬಹುದು.
ಈ ವಿಡಿಯೋ 16 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಲಕ್ಷ್ಮಿ ಅಮ್ಮ ಬೇರೆ ಫಂಕ್ಷನ್‌ಗೆ ಹೋಗಿರಬೇಕು ಎಂದಿದ್ದಾರೆ. ಇನ್ನೊಬ್ಬರು, ದಿನ ಕಳೆಯುತ್ತಿದ್ದಂತೆ ಮದುವೆಗಳು ಕ್ರೇಜಿಯಾಗ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ದೇವರಿಗೆ ಆಹ್ವಾನ ನೀಡಿದ್ದು ಯಾರು? ದೇವರು ಯಾರ ಕಡೆಯಿಂದ ಬಂದಿದ್ದು ಎಂದು ತಮಾಷೆಯಾಗಿಯೇ ಕೇಳಿದ್ದಾರೆ.
For More Updates Join our WhatsApp Group :
