ತಿರುಪತಿ : ತಿರುಪತಿ ತಿಮ್ಮಪ್ಪನ ದರ್ಶನ: ಭಕ್ತರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಟಿಟಿಡಿ

ತಿರುಪತಿ : ತಿರುಪತಿ ತಿಮ್ಮಪ್ಪನ ದರ್ಶನ: ಭಕ್ತರಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಟಿಟಿಡಿ

ತಿಮ್ಮಪ್ಪನ ಭಕ್ತಾದಿಗಳಿಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಹತ್ವದ ಮಾರ್ಗಸೂಚಿಯೊಂದನ್ನು ಬಿಡುಗಡೆ ಮಾಡಿದೆ. ಮುಂದಿನ ಹತ್ತು ದಿನಗಳ ಅವಧಿಗೆ ವೈಕುಂಠ ದ್ವಾರವನ್ನು ತೆರೆದಿಡಲು ಟಿಟಿಡಿ ನಿರ್ಧರಿಸಿದೆ. ಅಂದರೆ ಜನವರಿ 10ರಿಂದ ಜನವರಿ19ರವರೆಗೆ ವೈಕುಂಠ ದ್ವಾರ ತೆರೆದಿರಲಿದ್ದು. ಭಕ್ತಾದಿಗಳು ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ.

ಇನ್ನು ಈ ಸಮಯದಲ್ಲಿ ಏಳು ಲಕ್ಷಕ್ಕೂ ಹೆಚ್ಚು ಭಕ್ತರು ವೈಕುಂಠ ದ್ವಾರ ದರ್ಶನ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ತಿರುಪತಿ ಯಾತ್ರಾರ್ಥಿಗಳಿಗೆ ಟಿಟಿಡಿಯಿಂದ ಪ್ರಮುಖ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಭಕ್ತಾದಿಗಳು ಈ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಶ್ರೀವಾರಿ ವೈಕುಂಠ ದ್ವಾರ ದರ್ಶನದ ಅನುಭವವನ್ನು ಪಡೆದುಕೊಳ್ಳಬಹುದು ಎಂದು ಟಿಟಿಡಿ ಹೇಳಿದೆ.

ತಿರುಪತಿ ತಿರುಮಲ ದೇವಸ್ಥಾನದಲ್ಲಿ ಭಕ್ತಾದಿಗಳು ಸರತಿ ಸಾಲಿನಲ್ಲಿ ತಾಸುಗಟ್ಟಲೆ ನಿಲ್ಲುವುದನ್ನು ತಪ್ಪಿಸುವ ಉದ್ದೇಶದಿಂದ ಟಿಟಿಡಿ ಈಗಾಗಲೇ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಭಕ್ತಾದಿಗಳ ದರ್ಶನದ ಅವಧಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕೆಲವು ಪ್ರಮುಖ ಸುಧಾರಣೆಗಳನ್ನು ತೆಗೆದುಕೊಳ್ಳಲಾಗಿದೆ

ಇನ್ನು ಉಚಿತ ಪ್ಲಾಟೆಡ್ ಸರ್ವ ದರ್ಶನಕ್ಕೆ (SSD) ಆಗಮಿಸುವ ಭಕ್ತರು ಸರತಿ ಸಾಲಿನಲ್ಲಿ ಹೆಚ್ಚು ಕಾಲ ನಿಲ್ಲುವುದನ್ನು ತಪ್ಪಿಸಲು ಟೈಮ್ ಫ್ಲಾಟ್ ಟೋಕನ್‌ಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ. ಅಲ್ಲದೆ ಈ ರೀತಿ ಟೋಕನ್‌ ತೆಗೆದುಕೊಳ್ಳುವುದು ಕಡ್ಡಾಯ ಎಂದೂ ಸೂಚನೆ ನೀಡಲಾಗಿ

ಜನವರಿ 10, 11 ಹಾಗೂ 12ರಂದು ದರ್ಶನ ಪಡೆಯುವವರಿಗೆ SSD ಟೋಕನ್‌ಗಳ ವಿತರಣೆ ಮಾಡಲು ಕೌಂಟರ್‌ಗಳನ್ನು ನಿಗದಿ ಮಾಡಲಾಗಿದೆ. ಈ ಕೌಂಟರ್‌ಗಳಲ್ಲಿ ಜನವರಿ 9ರಂದು ಬೆಳಿಗ್ಗೆ 5 ಗಂಟೆಯಿಂದ ಟೋಕನ್‌ ವಿತರಣೆ ಪ್ರಾರಂಭವಾಗಲಿದೆ. ಇದು ಈ ಮೂರು ದಿನಗಳ ಕೋಟಾ ಪೂರ್ಣಗೊಳ್ಳುವವರೆಗೆ ಮುಂದುವರಿಯಲಿದೆ

ಇನ್ನು ಜನವರಿ 9ರಂದು ದರ್ಶನಕ್ಕಾಗಿ SSD ಟೋಕನ್‌ಗಳನ್ನು ವಿತರಿಸುವುದಿಲ್ಲ. ಮೊದಲ ಮೂರು ದಿನಗಳ ಕೋಟಾ ಪೂರ್ಣವಾದ ಮೇಲೆ ಜನವರಿ 13 ರಿಂದ 19ರವರೆಗೆ ಅದೇ ದಿನದ ದರ್ಶನಕ್ಕಾಗಿ ದರ್ಶನದ ಟೋಕನ್‌ಗಳನ್ನು ಸಾಮಾನ್ಯ SSD ಟೋಕನ್ ಕೌಂಟರ್‌ಗಳಲ್ಲಿ ಅಂದರೆ ಶ್ರೀನಿವಾಸಮ್, ವಿಷ್ಣು ನಿವಾಸಮ್ ಮತ್ತು ಭೂದೇವಿ ಕಾಂಪ್ಲೆಕ್ಸ್‌ಗಳಲ್ಲಿ ಮಾತ್ರ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಮುಖ್ಯವಾಗಿ ಶ್ರೀವಾರಿ ಮೆಟ್ಟು ಕೌಂಟರ್ ಜನವರಿ 19ರವರೆಗೆ ಮುಚ್ಚಿರುತ್ತದೆ ಎಂದು ಟಿಟಿಡಿ ಪ್ರಕಟಣೆ ತಿಳಿಸಿದೆ.

ರೆಕಮಂಡೇಷನ್ ಇಲ್ಲ: ಇನ್ನು 10 ದಿನಗಳ ಸಮಯದಲ್ಲಿ ರೆಕಮಂಡೇಷನ್‌ಗೆ ಅವಕಾಶ ಇರುವುದಿಲ್ಲ ಎಂದು ಹೇಳಿದೆ. ಹೆಚ್ಚಿನ ಸಂಖ್ಯೆಯ ಸಾರ್ವಜನಿಕರಿಗೆ ದರ್ಶನವನ್ನು ಒದಗಿಸುವ ಉದ್ದೇಶದಿಂದ ಈ ಹತ್ತು ದಿನಗಳಲ್ಲಿ ಶಿಫಾರಸು ಪತ್ರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಲಾಗಿದೆ. ಇನ್ನು ತಿರುಮಲದಲ್ಲಿ ಸೀಮಿತ ವಸತಿ ಸೌಕರ್ಯ ಇರುವುದರಿಂದ ಭಕ್ತರು ತಮ್ಮ ಟೋಕನ್ ಅಥವಾ ಟಿಕೆಟ್‌ನಲ್ಲಿ ನಮೂದಿಸಿದ ನಿಗದಿತ ದಿನಾಂಕ ಮತ್ತು ಸಮಯದಂದು ಮಾತ್ರ ತಿರುಮಲಕ್ಕೆ ಬರುವಂತೆ ಮನವಿ ಮಾಡಲಾಗಿದೆ.

ಕಡ್ಡಾಯ ಟೋಕನ್‌ ತೆಗೆದುಕೊಳ್ಳಬೇಕು: ಉಚಿತ ಪ್ಲಾಟೆಡ್ ಸರ್ವ ದರ್ಶನಕ್ಕೆ ಆಗಮಿಸುವ ಭಕ್ತರು ತಿರುಪತಿ ಮತ್ತು ತಿರುಮಲದ ಕೌಂಟರ್‌ಗಳಲ್ಲಿ ಟೋಕನ್‌ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಟಿಟಿಡಿ ಹೇಳಿದೆ. ವಿತರಣ ಕೇಂದ್ರಗಳು ಹಾಗೂ ಕೌಂಟರ್‌ಗಳ ಸಂಖ್ಯೆಯ ವಿವರ ಈ ಈ ರೀತಿ ಇದೆ.

ವಿತರಣಾ ಕೇಂದ್ರಗಳು – ಕೌಂಟರ್‌ ಸಂಖ್ಯೆ

* ಜೀವಕೋಣ ಜಡ್‌ಪಿ ಪ್ರೌಢಶಾಲೆ, ತಿರುಪತಿ – 10

* ಎಂ.ಆರ್.ಪಲ್ಲೆ ಜಡ್‌ಪಿ ಪ್ರೌಢಶಾಲೆ, ತಿರುಪತಿ – 08

*ರಾಮಚಂದ್ರ ಪುಷ್ಕರಿಣಿ, ತಿರುಪತಿ – 10

* ರಾಮನಾಯ್ಡು ಪ್ರೌಢಶಾಲೆ – 10

* ಇಂದಿರಾ ಮೈದಾನಂ, ತಿರುಪತಿ – 15

*ಶ್ರೀನಿವಾಸಮ್ ಕಾಂಪ್ಲೆಕ್ಸ್, ತಿರುಪತಿ – 12

* ವಿಷ್ಣು ನಿವಾಸಮ್ ಕಾಂಪ್ಲೆಕ್ಸ್, ತಿರುಪತಿ – 14

* ಭೂದೇವಿ ಕಾಂಪ್ಲೆಕ್ಸ್, ತಿರುಪತಿ – 11

* ಬಾಲಾಜಿ ನಗರ ಸಮುದಾಯ ಭವನ, (ತಿರುಮಲ ನಿವಾಸಿಗಳಿಗೆ ಮಾತ್ರ) – 04

Leave a Reply

Your email address will not be published. Required fields are marked *