‘ತೀಸ್ರಿ ಬಾರ್ ಮೋದಿ ಸರ್ಕಾರ್, ಅಬ್ ಕಿ ಬಾರ್ 400 ಪಾರ್’: ಈ ಬಾರಿ ಲೋಕಸಭೆ ಚುನಾವಣೆಗೆ ಬಿಜೆಪಿ ಸ್ಲೋಗನ್

ನವದೆಹಲಿ: “ಮೂರನೇ ಬಾರಿ ಮೋದಿ ಸರ್ಕಾರ; ಈ ಬಾರಿ ಬಿಜೆಪಿ 400 ಸ್ಥಾನ ದಾಟಲಿದೆ…” ಇದು ಲೋಕಸಭೆ ಚುನಾವಣೆಗೆ ಬಿಜೆಪಿ ಹೊಸ ಘೋಷ ವಾಕ್ಯವಾಗಿದೆ. “ತೀಸ್ರಿ ಬಾರ್ ಮೋದಿ ಸರ್ಕಾರ್, ಅಬ್ ಕಿ ಬಾರ್ ಚಾರ್ ಸೌ ಪಾರ್’ ಎಂಬುದು ಬಿಜೆಪಿ ಉದ್ಘೋಷವಾಗಲಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗಿದೆ.

ಯುವಕ

ಇತ್ತೀಚೆಗಷ್ಟೇ ‘ಮೋದಿ ಕೀ ಗ್ಯಾರಂಟಿ’ ಘೋಷಣೆ ಹೊರ ಬಿದ್ದಿತ್ತು. ಈಗ “ತೀಸ್ರಿ ಬಾರ್ ಮೋದಿ ಸರ್ಕಾರ್, ಅಬ್ ಕಿ ಬಾರ್ ಚಾರ್ ಸೌ ಪಾರ್’ ಘೋಷವಾಕ್ಯವಾಗಲಿದೆ. 2014ರಲ್ಲಿ ಅಚ್ಚೆ ದಿನ್ ಆನೇ ವಾಲೆಹೈ, 2019ರಲ್ಲಿ ಫಿರ್ ಏಕ್ ಬಾರ್ ಮೋದಿ ಸರ್ಕಾರ್ ಎಂಬುದು ಘೋಷವಾಕ್ಯವಾಗಿತ್ತು.

ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮುಂಬರುವ ಲೋಕಸಭಾ ಚುನಾವಣೆಯ ಕಾರ್ಯತಂತ್ರ ಮತ್ತು ಅಯೋಧ್ಯೆಯ ರಾಮಮಂದಿರದ ಶಂಕುಸ್ಥಾಪನೆ ಕುರಿತು ಚರ್ಚಿಸಲು ಪಕ್ಷದ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷವು ‘ತೀಸ್ರಿ ಬಾರ್ ಮೋದಿ ಸರ್ಕಾರ್, ಅಬ್ ಕಿ ಬಾರ್ 400 ಪಾರ್’ ಎಂಬ ಹೊಸ ಘೋಷಣೆಯನ್ನು ನಿರ್ಧರಿಸಿದೆ. ಸಾರ್ವತ್ರಿಕ ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ ಎಂದು ಹೇಳಲಾಗಿದೆ.

ರಾಜ್ಯ, ಲೋಕಸಭೆ ಮತ್ತು ವಿಧಾನಸಭೆ ಹಂತಗಳಲ್ಲಿ ಬಿಜೆಪಿ ಸಂಚಾಲಕರು ಮತ್ತು ಸಹ ಸಂಚಾಲಕರನ್ನು ನೇಮಕ ಮಾಡಲು ಸಹ ನಿರ್ಧರಿಸಿದೆ. ಶೀಘ್ರದಲ್ಲೇ, ಲೋಕಸಭೆ ಕ್ಲಸ್ಟರ್ಗಳಲ್ಲಿ ಪ್ರಧಾನಿ, ಗೃಹ ಸಚಿವರು, ರಕ್ಷಣಾ ಸಚಿವರು ಮತ್ತು ಬಿಜೆಪಿ ಅಧ್ಯಕ್ಷರ ಪ್ರವಾಸ, ಭೇಟಿಗಳು ಪ್ರಾರಂಭವಾಗುತ್ತವೆ.

ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಉಪಸ್ಥಿತರಿದ್ದರು. ಸುಮಾರು 150 ಪಕ್ಷದ ಪದಾಧಿಕಾರಿಗಳೂ ಸಭೆಯಲ್ಲಿ ಪಾಲ್ಗೊಂಡಿದ್ದರು.

Pragati TV Social Connect for more latest u

Leave a Reply

Your email address will not be published. Required fields are marked *