ಅಲ್ಲು ಅರ್ಜುನ್, ಪ್ರಶಾಂತ್ ನೀಲ್ ಕಾಂಬೋ ಸಿನಿಮಾದ ಟೈಟಲ್ ರಿವೀಲ್‌

ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಅಲ್ಲು ಅರ್ಜುನ್ ಸಿನಿಮಾ ಮಾಡುತ್ತಾರೆ ಎನ್ನಲಾದ ಸುದ್ದಿ ಇದೀಗ ಪಕ್ಕಾ ಆಗಿದೆ. ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಒಟ್ಟಿಗೆ ಸಿನಿಮಾ ಮಾಡುವ ಸುದ್ದಿ ಹರಿದಾಡ್ತಿತ್ತು. ಇದೀಗ ಆ ಸುದ್ದಿಗೆ ಪುಷ್ಠಿ ಎಂಬಂತೆ ನಿರ್ಮಾಪಕ ದಿಲ್‌ರಾಜು ಹೇಳಿಕೆ ಕೊಟ್ಟಿದ್ದಾರೆ. ತಮ್ಮುಡು ಸಿನಿಮಾದ ಪ್ರಮೋಷನ್ ವೇಳೆ ಈ ವಿಚಾರವನ್ನ ಬಹಿರಂಗಪಡಿಸಿದ್ದಾರೆ.

ಕೆಜಿಎಫ್ ಸಿನಿಮಾಗಳ (KGF) ಹಿಟ್‌ನ ನಂತರ ಪ್ರಶಾಂತ್ ನೀಲ್ ಟಾಲಿವುಡ್‌ನಲ್ಲಿ ಸಲಾರ್ ಸಿನಿಮಾ ಮಾಡಿದ್ದಾರೆ. ಇದಾದ ಬಳಿಕ ಟಾಲಿವುಡ್‌ನ ಯಂಗ್‌ಟೈಗರ್ ಜೂ.ಎನ್‌ಟಿಆರ್‌ಗೆ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ಬಳಿಕ ಪ್ರಭಾಸ್‌ಗೆ ಸಲಾರ್-2 ಸಿನಿಮಾ ಮಾಡುವ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಇದೆಲ್ಲ ಮುಗಿದ ನಂತರವಷ್ಟೇ ದಿಲ್‌ರಾಜು ಅವರ ನಿರ್ಮಾಣದಲ್ಲಿ ಪ್ರಶಾಂತ್ ನೀಲ್ ನಿರ್ದೇಶನ ಮಾಡಬೇಕಿದೆ

ಈ ಕಾರ್ಯಕ್ರಮದಲ್ಲಿ ಮಾತನಾಡಿದ ದಿಲ್ ರಾಜು, ನಮ್ಮ ಬ್ಯಾನರ್ ನಲ್ಲಿ ಅಲ್ಲು ಅರ್ಜುನ್ ನಾಯಕನಾಗಿ ಮತ್ತು ಪ್ರಶಾಂತ್ ನೀಲ್ ನಿರ್ದೇಶಕರಾಗಿ ರಾವಣಂ (Ravanam) ಚಿತ್ರ ತೆರೆಯ ಮೇಲೆ ಬರಲಿದೆ. ಈಗ ಇವರಿಬ್ಬರು ಬೇರೆ ಬೇರೆ ಚಿತ್ರಗಳಲ್ಲಿ ಬ್ಯುಸಿ ಇರುವ ಕಾರಣ ನಮ್ಮ ಸಿನಿಮಾ ಆರಂಭವಾಗಲು ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.

ಅಲ್ಲು ಅರ್ಜುನ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಸಿನಿಮಾಗೆ ತೆಲುಗಿನ ಖ್ಯಾತ ನಿರ್ಮಾಪಕ ಬಂಡವಾಳ ಹೂಡಲಿದ್ದು, ಈ ಸಿನಿಮಾ ಸೆಟ್ಟೇರಬೇಕಂದ್ರೆ ಹೆಚ್ಚು ಕಮ್ಮಿ ಅಂದ್ರೂ ಇನ್ನು ಎರಡು ವರ್ಷಗಳಾಗಬಹುದು ಎಂದಿದ್ದಾರೆ. ಇತ್ತ ಐಕಾನ್ ಸ್ಟಾರ್ ಕೂಡಾ ಅಟ್ಲಿ ಜೊತೆಗೆ ಸೂಪರ್‌ಮ್ಯಾನ್ ಕಾನ್ಸೆಪ್ಟ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಪುಷ್ಪಾ ಸಿನಿಮಾದ ಪಾರ್ಟ್-3 ಕೂಡಾ ಬ್ಯಾಲೆನ್ಸ್ ಇದೆ.

ಸದ್ಯಕ್ಕಂತೂ ಅಲ್ಲು-ಪ್ರಶಾಂತ್ ಸಿನಿಮಾ ಮಾಡೋದು 100% ಪಕ್ಕಾ ಎಂತಿದೆ ನಿರ್ಮಾಣ ಸಂಸ್ಥೆ. ಇಬ್ಬರೂ ಒಟ್ಟುಗೂಡಿ ಸಿನಿಮಾ ಮಾಡೋದ್ಯಾವಾಗ ಅಂತಾ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *