ಕಿಚ್ಚ ಅಭಿನಯದ ಎರಡು ಬಹುದೊಡ್ಡ ಹಿಟ್ ಸಿನೆಮಾಗಳು ಬಿಡುಗಡೆಯಾದ ದಿನ ಇಂದು

ಸಿನಿಮಾ : ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ನಟನೆ, ಪ್ರತಿಭೆಯಿಂದ ರಾಷ್ಟ್ರ ಮಟ್ಟದಲ್ಲೂ ಹೆಸರು ಮಾಡಿರುವ ಕನ್ನಡದ ಹೆಮ್ಮೆಯ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಎರಡು ಬಿಗ್ ಬ್ಲಾಕ್ ಬಸ್ಟರ್ ಸಿನೆಮಾಗಳು ಬಿಡುಗಡೆಯಾದ ದಿನ ಇಂದು.

ಹೌದು,, ಕನ್ನಡ ಚಿತ್ರರಂಗದಲ್ಲಿ ಸುದೀಪ್ ಒಬ್ಬ ಅಭಿನಯ ಚಕ್ರವರ್ತಿ ಎಂದು ತೋರಿಸಿದ ಸಿನೆಮಾ ಹುಚ್ಚ. ವಿಷ್ಣುವರ್ಧನ್ ಅವರೇ ಸಿನಿಮಾ ನೋಡಿ ಆಸ್ಕರ್ ಬರಬೇಕು ಈ ನಟನೆಗೆ ಎಂದಿದ್ದ ಸಿನಿಮಾ ಈ ಹುಚ್ಚ. ಬರೋಬರಿ 20 ವರ್ಷಗಳ ಹಿಂದೆ ಇದೇ ದಿನ ಈ ಸಿನಿಮಾ ಬಿಡುಗೆಯಾಗಿ, ಕನ್ನಡಕ್ಕೆ ಸ್ಟಾರ್ ನಟನ ಉದಯಕ್ಕೆ ಕಾರಣವಾದ ಸಿನಿಮಾ ಅಂದ್ರೆ ತಪ್ಪಾಗಲಾರದು. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಸಂಚಲನ ಮೂಡಿಸಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.

ಅದೇ ರೀತಿ ಕನ್ನಡದ ಪ್ರತಿಭಾನ್ವಿತ ನಟನನ್ನು ಗುರುತಿಸಿ ರಾಜಮೌಳಿ ತೆಲುಗಿನಲ್ಲಿ ಬಹುದೊಡ್ಡ ಸಿನೆಮಾ ಮಾಡಿ ದೊಡ್ದ ಬ್ರೇಕ್ ಕೊಡುತ್ತಾರೆ ಅದೇ ‘ಈಗ’ ಸಿನೆಮಾ. ಈಗ ಸಿನಿಮಾ ಬಂದು ಇಂದಿಗೆ 9 ವರ್ಷಗಳು. ಭಾರತೀಯ ಚಿತ್ರರಂಗದಲ್ಲಿ ಬಹುದೊಡ್ಡ ಹಿಟ್ ಆದ ಈಗ ಸಿನಿಮಾ ಸುದೀಪ್ ಅವರ ಸಿನಿಮಾ ಜರ್ನಿ ಮತ್ತೋಂದು ತಿರುವು ಪಡೆದು, ಭಾರತೀಯ ಸ್ಟಾರ್ ಆದರು.

ಈಗ ಸಿನಿಮಾದಲ್ಲಿನ ಕಿಚ್ಚ ಸುದೀಪ್ ಅಭಿನಯದ ಕಂಡು ಇಡೀ ಭಾರತೀಯ ಚಿತ್ರರಂಗ ದಂಗಾಗಿತ್ತು. ಸ್ಟಾರ್ ನಟರೆಲ್ಲಾ ಪ್ರಶಂಸೆಗಳ ಮಳೆಗೈದರು.  ಮತ್ತೆ ತಿರುಗಿ ನೋಡಲೇ ಇಲ್ಲ ಕಿಚ್ಚ ಸುದೀಪ್. ಇಂದಿಗೂ ಸಹ ಅದೇ ವರ್ಚಸ್ಸು ಅದೇ ಅಭಿನಯ, ಅದೇ ಗೌರವ.

Pragati TV Social Connect for more latest u

Leave a Reply

Your email address will not be published. Required fields are marked *