ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ದೊಡ್ಡ ಸಮಸ್ಯೆ, work from home ಆಪ್ಷನ್ ಕೊಡಿ ಎಂದ ಮಹಿಳೆ.

ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ದೊಡ್ಡ ಸಮಸ್ಯೆ, work from home ಆಪ್ಷನ್ ಕೊಡಿ ಎಂದ ಮಹಿಳೆ.

ಬೆಂಗಳೂರು : ಟ್ರಾಫಿಕ್ ಟ್ರಾಫಿಕ್ ಟ್ರಾಫಿಕ್. ಹೀಗೆನ್ನುತ್ತಿದ್ದಂತೆ ನೆನಪಿಗೆ ಬರುವುದೇ ಈ ಮಾಯನಗರಿ ಬೆಂಗಳೂರು. ಬೆಳಗ್ಗೆ ಹಾಗೂ ಸಂಜೆಯ ವೇಳೆ ರಸ್ತೆಯಲ್ಲಿ ನಿಂತಿರುವ ಸಾಲು ಸಾಲು ವಾಹನವನ್ನು ನೋಡಿದಾಗ ಈ ಟ್ರಾಫಿಕ್ ಗೆ ಯಾವಾಗ ಮುಕ್ತಿ ಸಿಗುತ್ತದೆ ಎಂದು ಮನಸ್ಸಿನಲ್ಲಿ ಅಂದುಕೊಳ್ಳುವವರೇ ಹೆಚ್ಚು. ಟ್ರಾಫಿಕ್ ನಿಂದ ಬೇಸೆತ್ತ ಮಹಿಳೆಯೊಬ್ಬರು ವರ್ಕ್ ಫರ್ಮ್ ಹೋಮ್ ಆಯ್ಕೆ ಕೊಟ್ಟರೆ ತುಂಬಾ ಒಳ್ಳೆಯದು ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೌದು, ಬೆಳಗ್ಗೆ ಕೆಲಸ ಹೋಗುವ ಮತ್ತು ಸಂಜೆ ಕೆಲಸದಿಂದ ವಾಪಸ್ ಆಗುವಂತಹ ಪೀಕ್ ಟೈಮ್ಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ಈ ವಾಹನ ಸವಾರರು ಸುಸ್ತಾಗಿ ಹೋಗುತ್ತಾರೆ. ಇದೀಗ ಇಲ್ಲೊಬ್ಬರು ಮಹಿಳೆಯು ಕೆಲಸಕ್ಕೆ ತೆರಳುವವರಿಗೆ ಈ ಟ್ರಾಫಿಕ್ ಜಾಮ್ ದೊಡ್ಡ ಸಮಸ್ಯೆ, ಹೀಗಾಗಿ ಮನೆಯಲ್ಲಿ ಕುಳಿತು ಕೆಲಸ ಮಾಡುವ ಆಯ್ಕೆಯಿದ್ದರೆ ಒಳ್ಳೆಯದು, ಸಮಯ ಉಳಿಯುತ್ತದೆ, ಕಂಪನಿಗಳು ಈ ಬಗ್ಗೆ ಸ್ವಲ್ಪ ಗಮನ ಹರಿಸಬೇಕು ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಕೂಡ ಈ ಮಹಿಳೆಯ ಮಾತನ್ನು ಒಪ್ಪಿಕೊಂಡಿದ್ದಾರೆ.

@Nyctophilic ಹೆಸರಿನ ಖಾತೆಯಲ್ಲಿ ಆಕಾಂಕ್ಷಾ ಎನ್ನುವ ಮಹಿಳೆಯು ಶೇರ್ ಮಾಡಲಾದ ಪೋಸ್ಟ್ನಲ್ಲಿ ಬೆಂಗಳೂರು ಹಾಗೂ ಮುಂಬೈನಂತಹ ನಗರಗಳಲ್ಲಿ ಕಂಪನಿಗಳು WFH ಅವಕಾಶ ನೀಡಬೇಕು. ಕಂಪನಿಗೆ ಹೋಗಿ ಕೆಲಸ ಮಾಡುವ ಅವಶ್ಯಕತೆ ಇಲ್ಲದ, ಮನೆಯಿಂದಲೇ ಕೆಲಸ ಮಾಡಬಹುದಾದ ಕೆಲಸಗಳಿಗೆ ಈ ರೀತಿ ಅವಕಾಶ ನೀಡುವುದು ಒಳ್ಳೆಯದು. ಟ್ರಾಫಿಕ್ ಜಾಮ್ ಹಾಗೂ ಕಳಪೆ ಮೂಲಸೌಕರ್ಯದೊಂದಿಗೆ ಕಚೇರಿ ತೆರಳುವುದು ಕಷ್ಟದಾಯಕ. ಈ ಸಮಸ್ಯೆಯಿಂದ ಸಮಯ, ಶಕ್ತಿ ಹಾಗೂ ಹಣವನ್ನು ಸುಮ್ಮನೆ ವೇಸ್ಟ್ ಮಾಡುವುದರಲ್ಲಿ ಅರ್ಥವಿಲ್ಲ. ಕಚೇರಿಗೆ ತಲುಪುವಷ್ಟರಲ್ಲಿ ನಿಮ್ಮ ಶಕ್ತಿಯ ಅರ್ಧದಷ್ಟು ವೇಸ್ಟ್ ಆಗುತ್ತದೆ ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *