ಟ್ರಿನಿಡಾಡ್ || ಭಾರತೀಯರಿಗೆ ಪ್ರಜಾಪ್ರಭುತ್ವವೆಂದರೆ ಜೀವನ ವಿಧಾನ; ಟ್ರಿನಿಡಾಡ್ ಮತ್ತು ಟೊಬಾಗೋ ಸಂಸತ್ನಲ್ಲಿ PM Modi.

ಟ್ರಿನಿಡಾಡ್ || ಭಾರತೀಯರಿಗೆ ಪ್ರಜಾಪ್ರಭುತ್ವವೆಂದರೆ ಜೀವನ ವಿಧಾನ; ಟ್ರಿನಿಡಾಡ್ ಮತ್ತು ಟೊಬಾಗೋ ಸಂಸತ್ನಲ್ಲಿ PM Modi.

ಟ್ರಿನಿಡಾಡ್: ಟ್ರಿನಿಡಾಡ್ ಮತ್ತು ಟೊಬಾಗೋ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ರೆಡ್ ಹೌಸ್ ಅನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಪ್ರಧಾನಿಯಾಗಿದ್ದಕ್ಕೆ ನಾನು ನಿಮ್ಮೆಲ್ಲರಿಗೂ ವಿನಯದಿಂದ ತಲೆ ಬಾಗುತ್ತೇನೆ ಎಂದಿದ್ದಾರೆ. ಪ್ರಜಾಪ್ರಭುತ್ವವು ಭಾರತಕ್ಕೆ ಕೇವಲ ಒಂದು ರಾಜಕೀಯ ವ್ಯವಸ್ಥೆಯಲ್ಲ, ಭಾರತೀಯರಿಗೆ ಅದು ಜೀವನ ವಿಧಾನ ಮತ್ತು ಪರಂಪರೆಯಾಗಿದೆ ಎಂದು ಮೋದಿ ಬಣ್ಣಿಸಿದರು.

ಟ್ರಿನಿಡಾಡ್ ಮತ್ತು ಟೊಬಾಗೋ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹೆಮ್ಮೆಯ ಪ್ರಜಾಪ್ರಭುತ್ವ ಮತ್ತು ಸ್ನೇಹಪರ ರಾಷ್ಟ್ರದ ಚುನಾಯಿತ ಪ್ರತಿನಿಧಿಗಳ ಮುಂದೆ ನಿಲ್ಲಲು ಬಹಳ ಗೌರವವೆನಿಸುತ್ತಿದೆ ಎಂದು ಹೇಳಿದರು. “ಈ ಐತಿಹಾಸಿಕ ಕೆಂಪು ಭವನದಲ್ಲಿ ಮಾತನಾಡಲು ಅವಕಾಶ ಸಿಕ್ಕಿದ ಭಾರತದ ಮೊದಲ ಪ್ರಧಾನಿಯಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ಈ ಐತಿಹಾಸಿಕ ಕೆಂಪು ಕಟ್ಟಡವು ಸ್ವಾತಂತ್ರ್ಯ ಮತ್ತು ಘನತೆಗಾಗಿ ಟ್ರಿನಿಡಾಡ್ ಮತ್ತು ಟೊಬಾಗೋ ಜನರ ಹೋರಾಟಗಳು ಮತ್ತು ತ್ಯಾಗಗಳನ್ನು ಕಂಡಿದೆ” ಎಂದು ಅವರು ಹೇಳಿದರು.

ಟ್ರಿನಿಡಾಡ್ ಮತ್ತು ಟೊಬಾಗೋ ಸಂಸತ್ತಿನ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಈ ಮಹಾನ್ ರಾಷ್ಟ್ರದ ಜನರು ಇಬ್ಬರು ಗಮನಾರ್ಹ ಮಹಿಳಾ ನಾಯಕಿಯರನ್ನು ಆಯ್ಕೆ ಮಾಡಿದ್ದಾರೆ. ಇಲ್ಲಿನ ಅಧ್ಯಕ್ಷರು ಮತ್ತು ಪ್ರಧಾನ ಮಂತ್ರಿಗಳು ಮಹಿಳೆಯರೇ ಆಗದ್ದಾರೆ. ಅವರು ತಮ್ಮನ್ನು ತಾವು ಭಾರತೀಯ ವಲಸಿಗರ ಪುತ್ರಿಯರು ಎಂದು ಹೆಮ್ಮೆಯಿಂದ ಕರೆದುಕೊಂಡಿದ್ದಾರೆ. ಅವರು ತಮ್ಮ ಭಾರತೀಯ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತಾರೆ. ನಮ್ಮ ಎರಡೂ ರಾಷ್ಟ್ರಗಳು ವಸಾಹತುಶಾಹಿ ಆಳ್ವಿಕೆಯ ನೆರಳಿನಿಂದ ಎದ್ದು ನಮ್ಮದೇ ಆದ ಕಥೆಗಳನ್ನು ಧೈರ್ಯದಿಂದ ಬರೆಯುತ್ತಿವೆ. ಇಂದು, ನಮ್ಮ ಎರಡೂ ರಾಷ್ಟ್ರಗಳು ಆಧುನಿಕ ಜಗತ್ತಿನಲ್ಲಿ ಹೆಮ್ಮೆಯ ಪ್ರಜಾಪ್ರಭುತ್ವಗಳು ಮತ್ತು ಶಕ್ತಿಯ ಸ್ತಂಭಗಳಾಗಿ ನಿಂತಿವೆ” ಎಂದಿದ್ದಾರೆ.

ಇದು ಪ್ರಧಾನಿ ಮೋದಿಯವರ ಟ್ರಿನಿಡಾಡ್ ಮತ್ತು ಟೊಬೆಗೊಗೆ ಮೊದಲ ಭೇಟಿಯಾಗಿದ್ದು, 1999ರ ನಂತರ ಭಾರತೀಯ ಪ್ರಧಾನಿಯೊಬ್ಬರು ಈ ದೇಶಕ್ಕೆ ನೀಡಿದ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ. ಅವರ 5 ರಾಷ್ಟ್ರಗಳ ಪ್ರವಾಸದ ಎರಡನೇ ಹಂತದ ನಂತರ ಇಲ್ಲಿಗೆ ಅವರು ಆಗಮಿಸಿದ್ದಾರೆ. ಈ ಪ್ರವಾಸದಲ್ಲಿ ಮೊದಲು ಘಾನಾ ಕೂಡ ಸೇರಿತ್ತು. ಅಲ್ಲಿ ಮೋದಿ ಅವರಿಗೆ ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಸ್ಟಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇಂದು ಟ್ರಿನಿಡಾಡ್ ಮತ್ತು ಟೊಬೆಗೊದ ಆರ್ಡರ್ ಆಫ್ ಪ್ರಶಸ್ತಿಯನ್ನು ಪಡೆದ ಮೊದಲ ವಿದೇಶಿ ನಾಯಕರೆಂಬ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಇದು ಪ್ರಧಾನಿ ಮೋದಿ ಅವರಿಗೆ ಬೇರೆ ದೇಶ ನೀಡಿದ 25ನೇ ಅಂತಾರಾಷ್ಟ್ರೀಯ ಗೌರವವಾಗಿದೆ.

Leave a Reply

Your email address will not be published. Required fields are marked *