ತುಮಕೂರು || ಅಧಿಕಾರಿಗಳಿಂದ ವ್ಯಾಪಕ ಲಂಚದ ಬೇಡಿಕೆ 

ತುಮಕೂರು || ಅಧಿಕಾರಿಗಳಿಂದ ವ್ಯಾಪಕ ಲಂಚದ ಬೇಡಿಕೆ

contractor assosiation

ತುಮಕೂರು : ಪ್ರತಿ ಗುತ್ತಿಗೆ ಹಣದ ಪಾವತಿಗೂ ಅಧಿಕಾರಿಗಳಿಗೆ ಇಂತಿಷ್ಟು ಹಣ ನೀಡಬೇಕಾದ ಪರಿಸ್ಥಿತಿ ಎದುರಾಗಿದ್ದು, ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಎ.ಡಿ.ಬಲರಾಮಯ್ಯ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಭರವಸೆ ನೀಡಿದ್ದ  ಸಿ.ಎಂ. ಮತ್ತು ಡಿ.ಸಿ.ಎಂ ಅವರು, ತಮ್ಮದೇ ಸರಕಾರ ಬಂದು ಒಂದುವರೆ ವರ್ಷ ಕಳೆದರೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಇದರಿಂದ ಗುತ್ತಿಗೆದಾರರು, ಸಾರ್ವಜನಿಕರು ನಲುಗಿ ಹೋಗಿದ್ದಾರೆ.ಹಿಂದೆ ಗುತ್ತಿಗೆದಾರರು ಕೊಟ್ಟಷ್ಟು ತೆಗೆದುಕೊಂಡು ಬಿಲ್ ಮಾಡುತ್ತಿದ್ದರೂ, ಇಂದು ಇಂತಿಷ್ಟೇ ಕೊಡಬೇಕು ಎಂದು ತಾಕೀತು ಮಾಡುತ್ತಾರೆ. ಇದರಿಂದ ಹಲವಾರು ಗುತ್ತಿಗೆದಾರರು ಊರು ಬಿಟ್ಟಿದ್ದಾರೆ. ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರಕಾರ ಸರಿಯಾದ ನಿಯಂತ್ರಣ ಕ್ರಮ ಕೈಗೊಳ್ಳದಿದ್ದರೆ ಕಾಮಗಾರಿ  ಸ್ಥಗಿತ ಮಾಡಿ ಹೋರಾಟ ನಡಸಲಾಗುವುದು ಎಂದು ತಿಳಿಸಿದರು.

ಮೊದಲು ಸೀನಿಯರಿಟಿ ಆಧರಿಸಿ ಗುತ್ತಿಗೆದಾರರಿಗೆ ಎಲ್.ಓ.ಸಿ. ಬಿಡುಗಡೆ ಮಾಡಲಾಗುತ್ತಿತ್ತು.ಆದರೆ ಈಗ ಯಾರು ಕೈ ಬೆಚ್ಚಗೆ ಮಾಡಿದರೂ ಅವರಿಗೆ ಬಿಲ್ ಪಾವತಿಸುವಂತೆ ಸಚಿವರುಗಳು, ಶಾಸಕರು ಒತ್ತಡ ತರುತ್ತಾರೆ. ಚಿಕ್ಕನಾಯಕಹಳ್ಳಿಯಲ್ಲಿ ನಡೆದ ಲೋಕಾಯುಕ್ತ ದಾಳಿ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರ್‌ಡಿಪಿಆರ್ ಎಂಜಿನಿಯರಿAಗ್ ವಿಭಾಗದ ಅಧಿಕಾರಿಗಳು ಜೆಜೆಎಂ ಕಾಮಗಾರಿಯ ಬಿಲ್‌ಪಡೆಯಲು ಇಂತಿಷ್ಟು ಹಣವನ್ನೇ ನೀಡಲೇಬೇಕೆಂದು ಪಟ್ಟು ಹಿಡಿದು ಜಿ.ಪಂ. ಸಿಇಓ ಅವರಿಗೆ ತಲುಪಿಸಬೇಕು ಎಂದು ಹೇಳಿರುವುದು ಭ್ರಷ್ಟಾಚಾರದ ಕರಾಳಮುಖಕ್ಕೆ ಸಾಕ್ಷಿಯಾಗಿದೆ ಎಂದರು.

ರಾಜ್ಯ ಸರಕಾರ ಪ್ರತಿ ಎಂ.ಎಲ್.ಎ ಕ್ಷೇತ್ರಗಳಿಗೆ ಇಪ್ಪತೈದು ಕೋಟಿ ಹಣ ಬಿಡುಗಡೆ ಮಾಡಿದ್ದೇವೆ ಎಂದು ಟೆಂಡರ್ ಕರೆದಿದ್ದಾರೆ. ಆದರೆ ಹಣ ಬಿಡುಗಡೆಯಾಗಿರುವುದು ಕಡಿಮೆ ಶಾಸಕರ ಒತ್ತಡಕ್ಕೆ ಮಣಿದು ಕೆಲಸ ಮಾಡಿದರೆ ಬಿಲ್‌ಗಾಗಿ ವರ್ಷಗಟ್ಟಲೆ ಕಾಯಬೇಕಿದೆ.ರಾಜ್ಯ ಸರಕಾರ ಪ್ಯಾಕೆಜ್ ಪದ್ದತಿಯನ್ನು ರದ್ದು ಮಾಡಬೇಕೆಂಬುದು ನಮ್ಮ ಒತ್ತಾಯವಾಗಿದೆ. ಶಾಸಕರೇ  ಅಧಿಕಾರಿಗಳ ಕೈಗೊಂಬೆಯಾಗಿದ್ದಾರೆ. ೆ.ಈ ಸರಕಾರದಲ್ಲೂ ನಲವತ್ತು ಪರ್ಸೆಂಟ್ ಲಂಚ ಕೊಟ್ಟರೆ ಮಾತ್ರ ಬಿಲ್ಲುಗಳು ಆಗುತ್ತಿವೆ ಎಂದು ಸರಕಾರದ ವಿರುದ್ದ ಆರೋಪ ಮಾಡಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗುತ್ತಿಗೆದಾರ ಚಿಕ್ಕೆಗೌಡ ಮಾತನಾಡಿ, ತಾಲ್ಲೂಕಿನ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜನಿಯರ್‌ಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 34 ಲಕ್ಷ ಜೆಜೆಎಂ ಕೆಲಸ ಗುತ್ತಿಗೆ ಪಡೆದು ಕಾಮಗಾರಿ ಮುಗಿಸಿ ಒಂದು ವರ್ಷ ಕಳೆದರೂ ಬಿಲ್ಲು ಪಾವತಿ ಮಾಡದೆ ವಿನಾಕಾರಣ ಕಾಲಹರಣ ಮಾಡುತ್ತಿದ್ದರು ಹಾಗೂ ಲಂಚಕ್ಕೆ ಬೇಡಿಕೆ ಇಟ್ಟ ಪರಿಣಾಮ ಲೋಕಯುಕ್ತರ ಮೊರೆ ಹೋಗಬೇಕಾಯಿತು ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಬಿ.ಪಿ.ಸುರೇಶ್‌ಕುಮಾರ್, ಖಜಾಂಚಿ ಕೋದಂಡರಾಮಯ್ಯ, ಸಹ ಕಾರ್ಯದರ್ಶಿ ಸಿ.ಆರ್. ಹರೀಶ್ ಮತ್ತಿತರರು ಹಾಜರಿದ್ದರು.

ಜೀವ ಕಸಿಯುತ್ತಿದೆ ಜಿಎಸ್‌ಟಿ

ಜಿ.ಎಸ್.ಟಿ ಗುತ್ತಿಗೆದಾರರ ಜೀವ ಕಸಿಯುತ್ತಿದೆ. 2018ರಲ್ಲಿ ಜಿ.ಎಸ್.ಟಿ ಜಾರಿಗೆ ಬಂದಿದೆ. 2012-13ರಿಂದ ನಡೆದ ಕಾಮಗಾರಿಗಳಿಗೂ ಜಿ.ಎಸ್.ಟಿ ವಿಧಿಸುತ್ತಿದ್ದಾರೆ. ಕಟ್ಟದ ಗುತ್ತಿಗೆದಾರರ ಖಾತೆಗಳನ್ನೇ ರದ್ದು ಪಡಿಸುತ್ತಿದ್ದಾರೆ.ಕೇಂದ್ರ ಸರಕಾರದ ರೀತಿ, ರಾಜ್ಯ ಸರಕಾರವೂ ಬಿಡುಗಡೆ ಮಾಡಿದಷ್ಟು ಅನುದಾನಕ್ಕೆ ಮಾತ್ರ ಟೆಂಡರ್ ಕರೆಯಲಿ, ಅದನ್ನು ಬಿಟ್ಟು ಒಂದು ಕೋಟಿಗೆ ಟೆಂಡರ್ ಕರೆದು, 10 ಲಕ್ಷ ಹಣ ಬಿಡುಗಡೆ ಮಾಡುತ್ತಾರೆ. ಇದರಿಂದ ಸಾಲ ಮಾಡಿ ಕಾಮಗಾರಿ ಮಾಡಿದ ಗುತ್ತಿಗೆದಾರ ಪರಿತಪಿಸುವ ಸ್ಥಿತಿ ಎದುರಾಗಿದೆ ಎಂದು ಎ.ಡಿ.ಬಲರಾಮಯ್ಯ ನುಡಿದರು.

31 ಸಾವಿರ ಕೋಟಿ ಗುತ್ತಿಗೆದಾರರಿಗೆ ಬಾಕಿ

ರಾಜ್ಯದಲ್ಲಿ ಗುತ್ತಿಗೆದಾರರಿಗೆ ವಿವಿಧ ಇಲಾಖೆಗಳಿಂದ ಸುಮಾರು 31 ಸಾವಿರ ಕೋಟಿ ರೂ.ಗಳ ಬಾಕಿ ಬರಬೇಕಿದ್ದು, ಇದರಲ್ಲಿ ಪಿ ಆರ್‌ಇಡಿಯಿಂದ 2500 ಕೋಟಿ, ಕ್ರೇಡಲ್‌ನಿಂದ 1000 ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ 2900 ಕೋಟಿ, ಎಸ್‌ಎಚ್‌ಡಿಪಿ 2000 ಕೋಟಿ, ಪಿಡಬ್ಲ್ಯೂಡಿ ಇಲಾಖೆಯಿಂದ 9000 ಕೋಟಿ ಸೇರಿ ವಿವಿಧ ಇಲಾಖೆಗಳ 31 ಸಾವಿರ ಕೋಟಿ ರೂಪಾಯಿ ಬಿಲು ಗಳು ಬಾಕಿ ಇವೆ. ತುಮಕೂರು ಜಿಲ್ಲೆಯೊಂದರಲ್ಲೆ 150 ಕೋಟಿ ಬಿಲ್ ಬಾಕಿ ಬರಬೇಕಿದೆ. ಮುಂದಿನ ಎರಡು ತಿಂಗಳಲ್ಲಿ ಬಾಕಿ ಬಿಡುಗಡೆ ಮಾಡದಿದ್ದರೆ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಜಿಲ್ಲಾಧ್ಯಕ್ಷರು ತಿಳಿಸಿದರು.

Leave a Reply

Your email address will not be published. Required fields are marked *