ಸಿದ್ಧಗಂಗಾ ಮಠದ ಮಾದರಿಯಲ್ಲಿ ನಿರ್ಮಾಣವಾಗಲಿದೆ ತುಮಕೂರಿನ ರೈಲ್ವೆ ನಿಲ್ದಾಣ

ತುಮಕೂರು : ತುಮಕೂರು ರೈಲ್ವೇ ನಿಲ್ದಾಣವನ್ನು ಪ್ರಯಾಣಿಕರ ಸ್ನೇಹಿ ಸೌಕರ್ಯಗಳೊಂದಿಗೆ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ನವೀಕರಣಗೊಂಡ ನಿಲ್ದಾಣವು ಬಹು ಹಂತದ ಪಾರ್ಕಿಂಗ್ ವ್ಯವಸ್ಥೆ, ಆಧುನಿಕ ಪ್ರಯಾಣಿಕರ ಲಾಂಜ್ಗಳು, ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಒಳಗೊಂಡಿರಲಿದೆ.

ಮಾತ್ರವಲ್ಲದೆ ವೇಗವಾಗಿ ಬೆಳೆಯುತ್ತಿರುವ ತುಮಕೂರಿನ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ಪ್ಲಾಟ್ಫಾರ್ಮ್ಗಳನ್ನು ನಿರ್ಮಿಸಲಾಗುತ್ತದೆ. ತುಮಕೂರಿನ ಪುಣ್ಯಕ್ಷೇತ್ರ ಸಿದ್ಧಗಂಗಾ ಮಠದ ಮಾದರಿಯಲ್ಲಿ ಮೇಲ್ದರ್ಜೆಗೇರಲಿರುವ ಪ್ರಸ್ತಾವಿತ ಕಟ್ಟಡದ ಮುನ್ನೋಟದ ಚಿತ್ರವನ್ನು ಇದೀಗ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವ ಮತ್ತು ತುಮಕೂರು ಲೋಕಸಭಾ ಕೇತ್ರದ ಸಂಸದ ವಿ ಸೋಮಣ್ಣ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಶೇರ್ ಮಾಡಿದ್ದಾರೆ.

Leave a Reply

Your email address will not be published. Required fields are marked *