ಒಂದೇ ತಿಂಗಳಲ್ಲಿ 15 ಜೀವ ಬಲಿ: ಸಾಲುಸಾಲು ಅಪ*ತಗಳಿಂದ ಆತಂಕ.
ತುಮಕೂರು : ತುಮಕೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಸಂಭವಿಸಿದ ಭೀಕರ ಅಪಘಾತಗಳು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿವೆ. ಡಿಸೆಂಬರ್ ತಿಂಗಳಿಂದ ಜನವರಿ ಕೊನೆಯವರೆಗೂ ನಡೆದ ಅಪಘಾತಗಳಲ್ಲಿ ಒಟ್ಟು 15 ಮಂದಿ ಸಾವನ್ನಪ್ಪಿದ್ದಾರೆ.
ಹಿರಿಯೂರು ಬಳಿ ಬಸ್ ದುರಂತ ಒಂದು ಮಗು ಸೇರಿ 7 ಮಂದಿ ಮೃತ್ಯು ಡಿಸೆಂಬರ್ 25ರ ಮಧ್ಯರಾತ್ರಿ ಚಿತ್ರದುರ್ಗದ ಹಿರಿಯೂರು ಸಮೀಪ ಸಂಭವಿಸಿದ ಬಸ್ ಅಪಘಾತದಲ್ಲಿ ಒಂದು ಮಗು ಸೇರಿ ಏಳು ಮಂದಿ ಸಾವಿಗೀಡಾಗಿದ್ದರು. ಈ ಘಟನೆ ರಾಜ್ಯದ ಗಮನ ಸೆಳೆದಿತ್ತು.
ಜನವರಿ 9ರಂದು ತುಮಕೂರು ತಾಲ್ಲೂಕಿನ ವಸಂತನರಾಸಪುರದ ಬಳಿ ಐಯ್ಯಪ್ಪ ಸ್ವಾಮಿ ಭಕ್ತರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ, ಒಂದು ಮಗು ಸೇರಿ ನಾಲ್ವರು ಸಾವನ್ನಪ್ಪಿದ್ದರು.
ಜನವರಿ 26ರ ಬೆಳಗಿನ ಜಾವ ತುಮಕೂರು ತಾಲ್ಲೂಕಿನ ನೆಲಹಾಳ್ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಬೆಂಗಳೂರಿನ ಮೂವರು ಟೆಕ್ಕಿಗಳು ಸಾವಿಗೀಡಾಗಿದ್ದರು.
ಲಾರಿಗಳೇ ಅಪಘಾತಕ್ಕೆ ಕಾರಣ? ಒಂದರ ಬಳಿಕ ಒಂದರಂತೆ ದುರಂತ
ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪಘಾತಗಳಿಗೆ ಲಾರಿಗಳೇ ಪರೋಕ್ಷ ಕಾರಣ ಎನ್ನಲಾಗುತ್ತಿದೆ.
- ಲಾರಿ ಗುದ್ದಿದ ಪರಿಣಾಮ ಬಸ್ ಅಪಘಾತ
- ನಿಂತಿದ್ದ ಲಾರಿಗೆ ಐಯ್ಯಪ್ಪ ಭಕ್ತರ ವಾಹನ ಡಿಕ್ಕಿ
- ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಗುದ್ದಿ ಅಪಘಾತ
ಇವು ಅಪಘಾತಗಳ ಸಾಮಾನ್ಯ ಮಾದರಿಯಾಗಿವೆ.
ಟ್ರಕ್ ಚಾಲಕರಿಗೆ ವಿಶ್ರಾಂತಿ ಇಲ್ಲ ಹೈವೇನಲ್ಲಿ ಟ್ರಕ್ ಟರ್ಮಿನಲ್ ಕೊರತೆ
ನಿರಂತರ ಚಾಲನೆಯಿಂದ ಟ್ರಕ್ ಚಾಲಕರು ವಿಶ್ರಾಂತಿ ಪಡೆಯಲು ಸೂಕ್ತ ವ್ಯವಸ್ಥೆ ಇಲ್ಲದಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್‌ಗಳಿಗೆ ಸಮರ್ಪಕ ವಿಶ್ರಾಂತಿ ಟರ್ಮಿನಲ್‌ಗಳ ಕೊರತೆ ಇದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬ್ಲಾಕ್ ಸ್ಪಾಟ್‌ಗಳು ಹಾಗೂ ಹಾಳಾಗಿರುವ ರಸ್ತೆಗಳ ಬಗ್ಗೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ಸಚಿವರು ತಿಳಿಸಿದ್ದಾರೆ.
“ನಾನು, ಮುಖ್ಯಮಂತ್ರಿ ಹಾಗೂ ಪಿಡಬ್ಲ್ಯೂಡಿ ಸಚಿವರು ಕೆಲ ತಿಂಗಳ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ, ಕಾಮಗಾರಿಗಳನ್ನು ವೇಗಗೊಳಿಸುವಂತೆ ಮನವಿ ಮಾಡಿದ್ದೇವೆ” ಎಂದು ಹೇಳಿದರು.
ಬೆಂಗಳೂರು–ತುಮಕೂರು ರಸ್ತೆಯಲ್ಲೂ ಟ್ರಾಫಿಕ್ ಸಂಕಷ್ಟ
ಬೆಂಗಳೂರು–ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದ್ದು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರುವುದೂ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
For More Updates Join our WhatsApp Group :



