ತುಮಕೂರು || ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸಾವಿನ ಸುತ್ತ ಅನುಮಾನದ ಹುತ್ತ

ತುಮಕೂರು ಗ್ರಾಮಾಂತರ:– ತುಮಕೂರು ತಾಲೂಕು ಹಿರೇಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಭಾಗ್ಯ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.

ಹಿರೇಹಳ್ಳಿ ಗ್ರಾಮ ಪಂಚಾಯಿತಿಯ ಸಂಗಾಪುರ ಗೊಲ್ಲರಹಟ್ಟಿ ನಿವಾಸಿಯಾದ ಭಾಗ್ಯ ಸಾವಿನ ಹಿಂದೆ ಹಲವು ಅನುಮಾನದ ಹುತ್ತ ಬೆಳೆದಿದ್ದು ಗಂಡ, ಅತ್ತೆ ಅವರು ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂಬ ಆರೋಪ

ಕೊಲೆ ಆರೋಪ:– ಭಾಗ್ಯ ಸಾವಿನ ಹಿಂದೆ ಕೊಲೆ ಆರೋಪ ಕೇಳಿಬಂದಿದೆ. ಗಂಡ ಹಾಗೂ ಅತ್ತೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ. ಭಾಗ್ಯಳಾನ್ನು ಗಂಡ ಮತ್ತು ಕುಟುಂದವರೇ ನೇಣು ಹಾಕಿದ್ದಾರೆ. ಕೊಲೆ ಮರೆ ಮಾಚಲು ಪೊಲೀಸರು ಸ್ಥಳಕ್ಕೆ ಬರುವ ಮುನ್ನ ಶವವನ್ನು ಇಳಿಸಿ ಅರಿಶಿಣ- ಕುಂಕುಮ ಇಟ್ಟಿದ್ದಾರೆ ಎಂದು ಭಾಗ್ಯ ತವರು ಮನೆಯ ಗ್ರಾಮಸ್ಥರು ಆರೋಪಿಸಿದ್ದಾರೆ. ಗಂಡ ಹೆಂಡತಿ ನಡುವೆ ಅನೇಕ ಬಾರಿ ಜಗಳ ನಡೆದಿತ್ತು. ಆ ವೇಳೆ ರಾಜಿ ಸಂದಾನವನ್ನು ಮಾಡಲಾಗಿತ್ತು. ಭಾಗ್ಯ ಯಾಕೆ ಸಾವನ್ನಪ್ಪಿದ್ದಾರೆ ಎಂದು ಕೇಳಿದರೆ ನಾವು ಹೊಲದಲ್ಲಿ ಜೆಸಿಬಿಯಲ್ಲಿ ಕೆಲಸ ಮಾಡಿಸುತ್ತಿದ್ದೆವು. ಮನೆಗೆ ಬಂದಾಗ ನೇಣು ಹಾಕಿಕೊಂಡಿರೋದು ಗೊತ್ತಾಯ್ತು ಎನ್ಮ್ನತ್ತಾರೆ ಗಂಡನ ಮನೆಯವರು ಎಂದರು.

ಎರಡೂವರೆ ವರ್ಷ ಅಧ್ಯಕ್ಷೆ: ಹಿರೇಹಳ್ಳಿ ಗ್ರಾಮ ಪಂಚಾಯಿತಿಯ ಸಂಗಾಪುರ ಗೊಲ್ಲರಹಟ್ಟಿ ನಿವಾಸಿಯಾದ ಭಾಗ್ಯ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಮೀಸಲಾತಿ ಬಂದಿದ್ದ ಮೊದಲ ಎರಡೂವರೆ ವರ್ಷ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಎರಡೂವರೆ ವರ್ಷದ ಬಳಿಕ ಈಗ ಸದಸ್ಯೆಯಾಗಿದ್ದರು. ಬೆಂಗಳೂರಿನ ಕೆಂಗೇರಿ ಹೋಬಳಿ ನಾಗದೇವನಹಳ್ಳಿ ಗ್ರಾವ್ಮದ ಭಾಗ್ಯ ಅವರನ್ನು ಹಿರೇಹಳ್ಳಿಯ ಸಂಗಾಪುರ ಗೊಲ್ಲರಹಟ್ಟಿ ಗ್ರಾಮಕ್ಕೆ ಕೊಟ್ಟು ಮದುವೆ ಮಾಡಲಾಗಿತ್ತು ಎಂದು ಮಾಹಿತಿ ನೀಡಿದ ಭಾಗ್ಯ ಕಡೆಯವರು ಈಗ ಪೊಲೀಸ್ ಠಾಣೆಗೆ ದೂರು ತೆರಳಲು ಹೋಗುತ್ತಿದ್ದೇವೆ ಎಂದಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *