ತುಮಕೂರು:- ಕ್ಷುಲಕ ಕಾರಣಕ್ಕೆ ಅತ್ತೆ-ಸೊಸೆ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತುಮಕೂರು ತಾಲೂಕಿನ ಕಲ್ಲುಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೆಂಪಮ್ಮ ಕೊಲೆಯಾದ ಅತ್ತೆ. ಸೊಸೆ ಉಮಾದೇವಿ ಕೊಲೆ ಮಾಡಿದ ಆರೋಪಿ.
ಕೊಲೆ ಮಾಡಿರುವ ಆರೋಪಿ ಉಮಾದೇವಿ ತನ್ನ ಸಹೋದರಿಗೆ ಪೋನ್ ಪೇ ಮೂಲಕ 7 ಸಾವಿರ ಹಣ ಕಳಿಸಿದ್ದಳು. ಹಣ ಕಳಿಸಿದ್ದ ಬಗ್ಗೆ ಮಗ ರಾಜೇಶ್ ಬಳಿ ದೂರು ಹೇಳಿದ್ದರು ಅತ್ತೆ ಕೆಂಪಮ್ಮ. ಹೀಗಾಗಿ ಹಣ ಯಾಕೆ ಕಳಿಸಿದ್ದಿಯಾ ಅಂತಾ ಉಮಾದೇವಿ ಮೇಲೆ ಜಗಳ ಮಾಡಿದ್ದ ಪತಿ ರಾಜೇಶ್.
ಇದರಿಂದ ಕೋಪಗೊಂಡ ಉಮಾದೇವಿ ಹಣ ಕಳಿಸಿದ್ದನ್ನ ಹೇಳಿ ಜಗಳ ಮಾಡಿಸಿದ್ದಿಯಾ ಎಂದು ಅತ್ತೆಯ ಕೈ ಹಾಗೂ ಕಾಲುಗಳಿಗೆ ದೊಣ್ಣೆಯಿಂದ ಥಳಿಸಿದ್ದಾಳೆ. ಕೈ ಕಾಲುಗಳಿಗೆ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವವಾಗಿತ್ತು. ಹಲ್ಲೆ ಬಳಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸಿ ಮನೆಗೆ ವಾಪಸ್ ಕರೆದುಕೊಂಡು ಬರಲಾಗಿತ್ತು. ಮನೆಗೆ ಬಂದ ಬಳಿಕ ಅತ್ತೆ ಕೆಂಪಮ್ಮ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಎಸ್ ಪಿ ಅಶೋಕ್ ವೆಂಕಟ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಉಮಾದೇವಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.