ತುಮಕೂರು:- ಈ ಕೆರೆಯ ನೀರು ಒಂದೇ ರಾತ್ರಿಗೆ ಹಾಲಿನ ನೊರೆಯಂತಾಗಿದೆ. ಈ ಕೆರೆಯ ನೀರನ್ನು ನೋಡುದ್ರೆ ನಿಜಕ್ಕೂ ನೀವು ಅಚ್ಚರಿ ಪಡೋದ್ರದಲ್ಲಿ ಡೌಟೇ ಇಲ್ಲ.
ಕಲ್ಪತರು ನಾಡು ತುಮಕೂರಿನಾದ್ಯಂತ ಧಾರಾಕಾರವಾಗಿ ಮಳೆ ಸುರಿದಿದೆ. ಈ ಮಳೆ ನಡುವೆ ನೀವು ನೋಡಿರದ ನೀರು ಸಹ ಇಲ್ಲಿ ಹರಿದಿದೆ. ಈ ನೀರನ್ನು ನೋಡುದ್ರೆ ನೀವು ನಿಜಕ್ಕೂ ಬೆಚ್ಚಿ ಬೀಳ್ತಿರಾ.
ಹೌದು, ತಿಪಟೂರಿನಲ್ಲಿಯೂ ಧಾರಕಾರವಾಗಿ ಸುರಿದ ಮಳೆ ಸುರಿದಿದ್ದು, ಕುಡಿಯುವ ನೀರಿನ ಕೆರೆಗೆ ಕಲುಷಿತ ನೀರು ಸೇರ್ಪಡೆಯಾಗಿದೆ.
ತಿಪಟೂರು ಪಟ್ಟಣದ ಕಲುಷಿತ ನೀರು ಈಚನೂರು ಕೆರೆಗೆ ಸೇರ್ಪಡೆಯಾಗಿದೆ. ತುಮಕೂರು ಜಿಲ್ಲೆ ತಿಪಟೂರು ತಾಲೂಕಿನಲ್ಲಿರುವ ಈಚನೂರು ಕೆರೆಯಲ್ಲಿ ಈಗ ಸಂಪೂರ್ಣವಾಗಿ ಕಲುಷಿತ ನೀರು ಸೇರ್ಪಡೆಗೊಂಡಿದೆ.
ತಿಪಟೂರು ಪಟ್ಟಣಕ್ಕೆ ಕುಡಿಯಲು ಬಳಸುವ ಈಚನೂರು ಕೆರೆ ನೀರು ಕಲುಷಿತವಾಗಿದ್ದು, ಅಧಿಕಾರಿಗಳ ಬೇಜವಾಬ್ದರಿತನಕ್ಕೆ ಕುಡಿಯುವ ಕೆರೆ ನೀರಿಗೆ ಕಲುಷಿತ ನೀರು ಸೇರ್ಪಡೆಯಾಗಿದೆ ಎಂಬ ಆಕ್ರೋಶ ಭುಗಿಲೆದ್ದಿದೆ.
ನೊರೆಯಂತಾದ ಕೆರೆ: ಕಲುಷಿತ ನೀರಿನಿಂದ ಹಾಲಿನ ನೊರೆಯಂತಾಗಿದೆ ಕೆರೆ ನೀರು. ಹೀಗಾಗಿ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.