ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಆರಂಭಿಕ ಭಾರೀ ಕುಸಿತ ಕಂಡಿದೆ. ಸೆನ್ಸೆಕ್ಸ್ 1,600 ಪಾಯಿಂಟ್ ಹಾಗೂ ನಿಫ್ಟಿ 500 ಪಾಯಿಂಟ್ ಕುಸಿತ ಕಂಡಿದೆ.
ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 286 ಸ್ಥಾನಗಳ ಮುನ್ನಡೆ ಕಾಯ್ದುಕೊಂಡಿದೆ. ಇಂಡಿಯಾ ಮೈತ್ರಿಕೂಟ 223 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಎನ್‌ಎಸ್‌ಇ ನಿಫ್ಟಿ 50 ಸೂಚ್ಯಂಕವು ಬೆಳಿಗ್ಗೆ 9:15 ರ ಹೊತ್ತಿಗೆ 2.2% ರಷ್ಟು ಕುಸಿದು 22,779 ಕ್ಕೆ ತಲುಪಿದೆ. ಬಿಎಸ್‌ಇ ಸೆನ್ಸೆಕ್ಸ್ ಶೇ.1.8 ರಷ್ಟು ಕುಸಿದು (75,163) ಕ್ಕೆ ತಲುಪಿದೆ