Tumkur Tourist Places: ವಾರಾಂತ್ಯದಲ್ಲಿ ನೀವು ಭೇಟಿ ನೀಡಬಹುದಾದಂತಹ ತುಮಕೂರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು..!!

ದೇವರಾಯನದುರ್ಗ: ದೇವರಾಯನದುರ್ಗ ಬೆಂಗಳೂರಿನಿಂದ ಸುಮಾರು 65 ಕಿಲೋಮೀಟರ್ ದೂರದಲ್ಲಿದೆ. ತುಮಕೂರಿನಿಂದ 16 ಕಿಲೋಮೀಟರ್ ದೂರದಲ್ಲಿದೆ. ಟ್ರಕ್ಕಿಂಗ್ ಮಾಡಲು ಉತ್ತಮ ಸ್ಥಳವಾಗಿದೆ. ಯೋಗ ನರಸಿಂಹ ಸ್ವಾಮಿ ಮತ್ತು ಭೋಗ ನರಸಿಂಹ ಸ್ವಾಮಿ ದೇವಾಲಯ ಕೂಡ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

ತಾಣ

ಮಂದಾರ ಗಿರಿ ಬೆಟ್ಟ: ತುಮಕೂರಿನ ಮಂದಾರ ಗಿರಿ ಬೆಟ್ಟ ಸ್ಥಳಿಯವಾಗಿ ಬಸದಿ ಬೆಟ್ಟ ಎಂದು ಕರೆಯಲ್ಪಡುವ ಈ ಬೆಟ್ಟ ಸುಮಾರು 450 ಮೆಟ್ಟಿಲುಗಳನ್ನು ಹೊಂದಿದೆ. ಇದರ ಗುಮ್ಮಟ ಆಕಾರ 81 ಅಡಿ ಎತ್ತರ. ಜೈನ ಗುರು ಮಂದಿರ ಇಲ್ಲಿನ ಆಕರ್ಷಣೀಯ ಪ್ರದೇಶವಾಗಿದೆ.

ಮಹಾಲಕ್ಷ್ಮಿ ದೇವಸ್ಥಾನ: ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ತುಮಕೂರು ನಗರದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿದೆ. ಲಕ್ಷ್ಮಿ ದೇವಿಯ ದರ್ಶನ ಪಡೆಯಲು ನೂರಾರು ಮೈಲಿ ದೂರದಿಂದ ಭಕ್ತರುಗಳು ಆಗಮಿಸುತ್ತಾರೆ. ದೇವಾಲಯದ ಪಕ್ಕದಲ್ಲಿ ತಿತಾ ಜಲಾಶಯ ಇದ್ದು ಪ್ರವಾಸಿಗರು ಅಲ್ಲಿಗೂ ಭೇಟಿ ನೀಡಬಹುದಾಗಿದೆ.

ಚನ್ನಕೇಶವ ದೇವಾಲಯ: ಕೈದಾಳ ಶ್ರೀ ಚನ್ನಕೇಶವ ದೇವಾಲಯ ತುಮಕೂರು ನಗರದಿಂದ 8 ಕಿಲೋಮೀಟರ್ ದೂರದಲ್ಲಿರುವ ಕೈದಾಳ ಗ್ರಾಮದಲ್ಲಿ ಈ ಅದ್ಭುತ ದೇವಾಲಯವಿದೆ. ಈ ಗ್ರಾಮದ ದೇವಾಲಯದಲ್ಲಿ ಹೊಯ್ಸಳ ಸಾಮ್ರಾಜ್ಯ ಕಾಲದ ವಾಸ್ತು ಶಿಲ್ಪ ಶೈಲಿಯನ್ನು ಕಾಣಬಹುದು. ಇಲ್ಲಿರುವಂತಹ ಚನ್ನಕೇಶವ ಮೂರ್ತಿಯನ್ನು ಜಕಣಾಚಾರಿ ಮತ್ತು ಡಂಕಚಾರಿ ಕೆತ್ತಿದ್ದಾರೆ ಎಂದು ಇತಿಹಾಸವಿದೆ.

ಮಾರ್ಗೋನಹಳ್ಳಿ ಜಲಾಶಯ: ತುಮಕೂರಿಗೆ ಹತ್ತಿರವಾಗಿರುವ ಮಾರ್ಗೋನಹಳ್ಳಿ ಜಲಾಶಯ ಕುಣಿಗಲ್ ತಾಲೂಕಿನಲ್ಲಿದೆ. ಇದೊಂದು ಸುಂದರ ಪ್ರವಾಸಿ ತಾಣವಾಗಿದೆ. ಇದು ಬೆಂಗಳೂರಿನಿಂದ ಸುಮಾರು 90 ಕಿ.ಮೀ ದೂರದಲ್ಲಿದೆ.

ಏಕಶಿಲಾ ಬೆಟ್ಟ: ಮಧುಗಿರಿಯ ಏಕಶಿಲಾ ಬೆಟ್ಟ ಏಷ್ಯಾದ ಎರಡನೇ ಅತಿ ದೊಡ್ಡ ಬೆಟ್ಟ ಹೆಸರುವಾಸಿಯಾಗಿದೆ. ಇದೊಂದು ಅತ್ಯುತ್ತಮ ಪ್ರವಾಸಿ ತಾಣ. ಚಾರಣಗಿರಿ ಉತ್ತಮ ಪ್ರವಾಸಿ ತಾಣವಾಗಿದೆ. ವೀಕೆಂಡ್ ನಲ್ಲಿ ಇಲ್ಲಿಗೆ ಪ್ರವಾಸಿಗರ ದಂಡೆ ಹರಿದು ಬರುತ್ತದೆ.

ಮಾಕಳಿ ದುರ್ಗಾ: ಮಾಕಳಿ ದುರ್ಗಾ ಇದು ಕೂಡ ಕುಣಿಗಲ್ ತಾಲೂಕಿನಲ್ಲಿದೆ. ಇಲ್ಲಿ ಟ್ರಕ್ಕಿಂಗ್ ಮಾಡಬೇಕು ಎನ್ನುವ ಆಸೆ ಇದ್ದವರಿಗೆ ಇದೊಂದು ಅದ್ಭುತ ಪ್ರವಾಸಿ ತಾಣ. ಇದು ಬೆಂಗಳೂರಿನಿಂದ ಸುಮಾರು 60 ಕಿಲೋ ಮೀಟರ್ ದೂರದಲ್ಲಿದ್ದು ಇಲ್ಲಿಗೆ ಚಾರಣ ಮಾಡುವವರು ಕೂಡ ಭೇಟಿ ನೀಡಬಹುದಾಗಿದೆ.

ಗಂಗಾಧರೇಶ್ವರ ದೇವಸ್ಥಾನ: ತುರುವೇಕೆರೆಯ ಶ್ರೀ ಗಂಗಾಧರೇಶ್ವರ ದೇವಸ್ಥಾನ ಹೊಯ್ಸಳರ 13ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟ ದೇವಸ್ಥಾನವಾಗಿದೆ. ಇದೊಂದು ಅತ್ಯದ್ಭುತ ಕೆತ್ತನೆಯಾಗಿದೆ. ಇಲ್ಲಿ ವಿಷ್ಣುವಿನ ಸಮರ್ಪಿತವಾದ ಚೆನ್ನಕೇಶವ ದೇವಾಲಯವು ಪ್ರಮುಖ ಆಕರ್ಷಣೆಯಾಗಿದೆ. ಇದು ತುಮಕೂರಿನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿದೆ.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *