Tumkur: ಆ ಮಹಿಳೆಯ ದೇಹದಲ್ಲಿತ್ತು ಎರಡುವರೆ ಕೆಜಿ ದುರ್ಮಾಂಸ..!!

ತುಮಕೂರು: ಕುಣಿಗಲ್ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮಹಿಳೆಯೊಬ್ಬರಿಗೆ ಚಿಕಿತ್ಸೆ ಮಾಡುವ ಮೂಲಕ ಆಕೆಯ ದೇಹದಲ್ಲಿ ಬೆಳೆದಿದ್ದ 2.5 ಕೆಜಿ ದುರ್ಮಾಂಸದ ಗಡ್ಡೆಯನ್ನು ಸುರಕ್ಷಿತವಾಗಿ ಹೊರ ತೆಗೆಯವ ಮೂಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ದುರ್ಮಾಂಸ

ತಾಲ್ಲೂಕಿನ ಯಲಿಯೂರು ಗ್ರಾಮದ ಚಂದ್ರಮ್ಮ (47) ಎಂಬ ಮಹಿಳೆಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಬುಧವಾರ ದಾಖಲಾಗಿದ್ದಾರೆ. ಈಕೆ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಅಡುಗೆ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದರು.

ದುರ್ಮಾಂಸ

ತನ್ನ ಸ್ವಗ್ರಾಮ ಯಲಿಯೂರಿಗೆ ಬಂದಾಗ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತೋರಿಸಲು ಬಂದಾಗ ಪರೀಕ್ಷಿಸಿದ ವೈದ್ಯರು, ಈಕೆಯ ಎಂಟು ತಿಂಗಳ ಮಗುವಿನ ಗರ್ಭ ಚೀಲದಲ್ಲಿ ಭ್ರೂಣ ಗಾತ್ರದ ಗಂಟುಗಳಿಂದ ಕೂಡಿದ ದುರ್ಮಾಂಸದ ಗಡ್ಡೆ ಬೆಳೆದಿರುವುದನ್ನು ಕಂಡು ಆಶ್ಚರ್ಯಗೊಂಡರು.

ಬಾರಿ ಕೂತುಹಲ ಹಾಗೂ ಎಚ್ಚರಿಕೆಯಿಂದ ಈಕೆಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಹೊಟ್ಟೆಯಲ್ಲಿ ಬೆಳೆದಿದ್ದ 2.5 ಗಾತ್ರದ ಗಡ್ಡೆಯನ್ನು ಹೊರ ತೆಗೆದಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಇಲ್ಲಿನ ಡಾ.ಅಭಿಜಿತ್ ಮತ್ತು ಡಾ.ಶಶಾಂಕ್ ಹಾಗೂ ದಾದಿಯರಾದ ದಾಕ್ಷಾಯಿಣಿ ಮತ್ತು ರತ್ನ ಅವರ ಸಹಕಾರದೊಂದಿಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆದಿದ್ದು ಸದರಿ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆ.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *